Advertisement

Desi Swara:ಈಸ್ಟ್‌ಕೋಸ್ಟ್‌ ಕಡಲ ತೀರದಲ್ಲಿ ಯೋಗ ದಿನಾಚರಣೆ: ತುಳು ಸಮುದಾಯ ಸಿಂಗಾಪುರ

01:12 PM Jun 22, 2024 | Team Udayavani |

ಸಿಂಗಾಪುರ:ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ತಮ್ಮ ಮಾನಸಿಕ ಹಾಗೂ ದೈಹಿಕ ಜೀವನವನ್ನು ಸಮತೂಗಿಸುವ ನಿಟ್ಟಿನಲ್ಲಿ ಯೋಗ ಬಹುಮುಖ್ಯ ಪಾತ್ರ ವಹಿಸಿದೆ. ಪ್ರತೀ ವರ್ಷ ಜೂನ್‌ 21 ರಂದು ಆಚರಿಸಲಾಗುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸವಿ ನೆನಪಿಗಾಗಿ, ಜೂ.16ರಂದು ಸಿಂಗಾಪುರದ ಈಸ್ಟ್‌ಕೋಸ್ಟ್‌ ಕಡಲ ತೀರದಲ್ಲಿ ಸಿಂಗಾಪುರದಲ್ಲಿ ನೆಲೆಸಿರುವ ತುಳು ಸಮುದಾಯದ ಸದಸ್ಯರು ವಾರಾಂತ್ಯದಲ್ಲಿ ಅರ್ಧ ದಿನದ ವಿಹಾರಕ್ಕೆ, ಯೋಗ ಹಾಗೂ ತುಳು ಸ್ನೇಹ ಸಮ್ಮಿಲನಕ್ಕಾಗಿ ಒಟ್ಟುಗೂಡಿದ್ದರು. ಆಗಮಿಸಿದ ತುಳು ಬಾಂಧವರನ್ನು ಕಾರ್ಯಕ್ರಮದ ಸಂಯೋಜಕರಾದ ರಾಜೇಶ್‌ ಆಚಾರ್ಯ ಸ್ವಾಗತಿಸಿ ದಿನದ ಕಾರ್ಯಕ್ರಮವನ್ನು ವಿವರಿಸಿದರು.

Advertisement

ಕಾರ್ಯಕ್ರಮಕ್ಕೆ ಯೋಗ ತರಬೇತುದಾರ ಹಾಗೂ ಮಾಧ್ಯಮ ವೃತ್ತಿಪರರಾದ ಮಿಲಿಂದ್‌ ಸತ್ತೂರ್‌ ಅವರು ಯೋಗಾಭ್ಯಾಸದ ತರಬೇತಿ ನಡೆಸಿ ಅದರ ಮಹತ್ವವನ್ನು ತಿಳಿಸಿದರು. ಸಿಂಗಾಪುರದ ಸ್ಥಳೀಯ ಉದ್ಯಾನವನದಲ್ಲಿ ನಡೆದ ಈ ಯೋಗಾಭ್ಯಾಸ ಶಿಬಿರದಲ್ಲಿ ಎಲ್ಲ ವಯಸ್ಸಿನವರು ಭಾಗವಹಿಸಿ ಕೆಲವು ಸರಳ ಯೋಗ ಭಂಗಿಗಳು ಹಾಗೂ ಆಸನಗಳನ್ನು ಆನಂದಿಸಿದರು. ಇಂತಹ ಕಾರ್ಯಕ್ರಮಗಳು ದೈನಂದಿನ ಜೀವನದಲ್ಲಿ ಯೋಗಾಸನವನ್ನು ಮುಂದುವರಿಸಲು ಸಹಕಾರಿಯಾಗಿದೆ ಎಂದು ಹಲವು ಸದಸ್ಯರು ಆಯೋಜಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಸಿಂಗಾಪುರದಲ್ಲಿ ತುಳು ಸಮುದಾಯದಿಂದ ಇದು ಮೊದಲ ಯೋಗ ದಿನಾಚರಣೆಯಾಗಿದೆ. ಯೋಗ ಕಾರ್ಯಕ್ರಮ ಮುಗಿದ ಅನಂತರ ಎಲ್ಲ ವಯೋವರ್ಗದವರಿಗೂ ವಿವಿಧ ಆಟೋಟ ಸ್ಪರ್ಧೆಗಳನ್ನೂ ನಡೆಸಲಾಯಿತು. ಬಳಿಕ ಕರಾವಳಿಯಯ ವೈವಿಧ್ಯಮಯವಾದ ರುಚಿಕರವಾದ ತಿಂಡಿ-ತಿನಿಸುಗಳನ್ನು ಸವಿಯಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ನಿತ್ಯಾನಂದ ಹೆಗ್ಡೆ ಅವರು ವಿಜೇತರಿಗೆ ಬಹುಮಾನ ವಿತರಿಸಿ, ಭಾಗಿಯಾದ ಎಲ್ಲರಿಗೂ ಧನ್ಯವಾದವನ್ನು ಸಮರ್ಪಿಸಿದರು.

ವರದಿ-ರಾಕೇಶ್‌ ಶೆಟ್ಟಿ ಬ್ರಹ್ಮಾವರ, ಸಿಂಗಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next