Advertisement

Desi Swara: ಕತಾರ್‌- ಅನಿವಾಸಿ ಕನ್ನಡತಿ ಸುಮಾ ಮಹೇಶ್‌ ಗೌಡ ಅವರಿಗೆ ಸಮ್ಮಾನ

02:37 PM Jul 20, 2024 | Team Udayavani |

ಕತಾರ್‌: ಒಕ್ಕಲಿಗ ಯುವ ಬ್ರಿಗೇಡ್‌ ಮತ್ತು ಒಕ್ಕಲಿಗ ಅನಿವಾಸಿ ಬ್ರಿಗೇಡ್‌ ಜೂ.29ರಂದು ಬೆಂಗಳೂರಿನಲ್ಲಿ ಜೀವಮಾನದ ಸಾಧಕರಿಗಾಗಿ ಆಯೋಜಿಸಿದ್ದ ಸಮ್ಮಾನ ಸಮಾರಂಭದಲ್ಲಿ ಕತಾರ್‌ನಲ್ಲಿ ಬಹುಕಾಲದಿಂದ ನೆಲೆಸಿರುವ ಕನ್ನಡತಿ ಸುಮಾ ಮಹೇಶ್‌ ಗೌಡ ಅವರನ್ನು ಶ್ರೀ ಶ್ರೀ ಡಾ|ನಿರ್ಮಲಾನಂದನಾಥ ಸ್ವಾಮೀಜಿ, ಮಾಜಿ ಸಚಿವ ಹಾಗೂ ಎಂಎಲ್‌ಸಿ ಸಿ.ಟಿ.ರವಿ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ಇತರ ಗಣ್ಯರು ಸಮ್ಮಾನಿಸಿದರು.

Advertisement

ಸುಮಾ ಹುಟ್ಟಿ ಬೆಳೆದದ್ದು ಬೆಂಗಳೂರಿನ ಹಲಸೂರಿನಲ್ಲಿ. 1956ರ ಮೆಲ್ಬೋರ್ನ್ ಮತ್ತು 1960 ರ ರೋಮ್‌ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಒಲಿಂಪಿಯನ್‌ ಎಂ.ಕೆಂಪಯ್ಯ ಅವರ ಪುತ್ರಿ. ಅವರು ತಮ್ಮ ತಂದೆಯ ಜೀವನಚರಿತ್ರೆ “ಲೆಜೆಂಡ್ರಿ ಮಿಡ್‌ ಫೀಲ್ಡರ್‌ಆಫ್‌ ಇಂಡಿಯನ್‌ ಫುಟ್‌ಬಾಲ್‌ ಒಲಿಂಪಿಯನ್‌ ಎಂ.ಕೆಂಪಯ್ಯ’ಎಂಬ ಪುಸ್ತಕವನ್ನು ಬರೆದಿದ್ದಾರೆ.

ಇದನ್ನೂ ಓದಿ:Liquor; ಆನ್‌ಲೈನ್‌ನಲ್ಲಿ‌ ಮದ್ಯ ಮಾರಾಟ? ಸ್ಪಷ್ಟನೆ ನೀಡಿದ ಸಚಿವ ಆರ್.ಬಿ ತಿಮ್ಮಾಪುರ

ಸುಮಾರು 13 ವರ್ಷಗಳಿಂದ ಕತಾರ್‌ನಲ್ಲಿ ನೆಲೆಸಿದ್ದಾರೆ, ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ಭಾರತೀಯ ಸಮುದಾಯದಲ್ಲಿ ಇವರ ಸಮಾಜ ಸೇವೆಯ ಕೊಡುಗೆ ಅಪಾರ. ಇತ್ತೀಚಿನ ವರೆಗೂ ಅವರು ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತದ ರಾಯಭಾರ ಕಚೇರಿಯ ಅಡಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಕಾರ್ಯಕ್ರಮಗಳನ್ನು ಏರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬರುವ ದಿನಗಳಲ್ಲಿ ಬೆಂಗಳೂರಿಗೆ ಮರಳಿ ತನ್ನ ತಾಯ್ನಾಡಿನ ಸೇವೆಯನ್ನು ಮಾಡುವ ಆಸೆಯನ್ನು ಇಟ್ಟುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next