Advertisement

Desi Swara: ಸ್ಥಾನಿಕ ಸಮಾಜ ನಾರ್ಥ್ ಅಮೆರಿಕ- ಶ್ರೀ ಶಂಕರಾಚಾರ್ಯರ ಜಯಂತಿ

01:19 PM Jun 08, 2024 | Nagendra Trasi |

ಅಮೆರಿಕ: ನಾರ್ಥ್ ಅಮೆರಿಕದ ಸ್ಥಾನಿಕ ಸಮಾಜದವರು (Sthanika Samaja of North America) ತಮ್ಮ ಸಂಸ್ಥೆಯ ಸದಸ್ಯರನ್ನು ಸೇರಿಸಿ, ಶ್ರೀ ಶಂಕರಾಚಾರ್ಯರ ಜಯಂತಿ ಆಚರಣೆಯನ್ನು ಸಂಭ್ರಮದಿಂದ ಆನ್‌ಲೈನ್‌ನಲ್ಲಿ ಎಲ್ಲ ಸದಸ್ಯರು ಸೇರುವುದರೊಂದಿಗೆ ಮೇ 11ರಂದು ಆಚರಿಸಿದರು. ವಿಘ್ನವಿನಾಶಕ ಗಣಪತಿ ಪ್ರಾರ್ಥನೆಯೊಂದಿಗೆ ಶುರುವಾಗಿ ಶ್ರೀ ಶಂಕರಾಚಾರ್ಯರ ಪೂಜೆಯೊಂದಿಗೆ, ಸಮಾಜ ಬಂಧುಗಳ ಕಲಾ ಪ್ರದರ್ಶನಗಳೊಂದಿಗೆ ಭರ್ಜರಿಯಾಗಿ ನಡೆಯಿತು.

Advertisement

ಡಾ| ನಾಗಭೂಷಣ್‌ ಮೂಲ್ಕಿ ಹಾಗೂ ಡಾ| ಉಷಾ ಕೋಲ್ಪೆ ಶ್ರೀ ಶಂಕರ ಪೂಜೆಯನ್ನು ಮತ್ತು ಅಷ್ಟೋತ್ತರವನ್ನು ಮಾಡಿದರು. ರೋಹನ್‌ ನಟೋಗಿಯವರು ಶ್ರೀ ಆದಿಶಂಕರರ ಮತ್ತು ಅವರ ಜೀವನದ ಬಗ್ಗೆ ವಿವರವಾಗಿ ಪ್ರಸ್ತುತಿಯನ್ನು ಮಾಡಿದರು.
ಸುಬ್ರಹ್ಮಣ್ಯ ಶಾನಭಾಗರು ಶ್ರೀ ಜಗದ್ಗುರು ಶಂಕರಾಚಾರ್ಯ ಮತ್ತು ಸ್ಥಾನಿಕ ಬ್ರಾಹ್ಮಣರ ನಡುವಿನ ಸಂಬಂಧ,(The Sthanikas & their historical Importance 1938)by Dr. B. A. Saletore ಪುಸ್ತಕದ ಬಗ್ಗೆ ವಿವರಿಸಿದರು.

ಮಾರ್ಪಳ್ಳಿ ಹರೀಶ್‌ ರಾವ್‌, ಲೋಹಿತ್‌, ಭವ್ಯ ಸುಧೀರ್‌, ರಮ್ಯಾ ಮತ್ತು ರಿತ್ವಿಕ್‌ ರಾವ್‌ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಚೆನ್ನಾಗಿ ನಿರ್ವಹಿಸಿದರು. ಚೇತನ್‌ ಅವರು ವಂದನಾರ್ಪಣೆ ನೆರವೇರಿಸಿದರು. ಅನಿಲ್‌ ನಟೋಜಿ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳ ಯುಟ್ಯೂಬ್‌ ವೀಡಿಯೋಗಳ ಉಸ್ತುವಾರಿ ನೆರವೇರಿಸಿದರು.

ಆರ್ಯ ಜ್ಯೋತಿಪ್ರಕಾಶ್‌, ಅಪೂರ್ವ ರಾವ್‌, ಸಂವಿತ್‌ ಶಾನಭಾಗ್‌, ಚರಿತ ಲೋಹಿತ್‌, ದ್ರಿತಿ ರಾವ್‌, ಗಾಯತ್ರಿ ರಾವ್‌, ಮಾನಸ ಶಾನುಭೋಗೆ, ನಿಧಿ ಲಂಬಾ, ರಾಘವೇಂದ್ರ ರಾವ್‌, ರಂಜಿನಿ ರಾವ್‌, ರಿತ್ವಿ ರಾವ್‌, ರಿತಿಕಾ ರಾವ್‌, ಸಾಕೇತ್‌ ಗೌನಲ್ಕರ್‌, ರೇಷ್ಮಾ ಕುಲ್ಕರ್ಣಿ , ಸುಮನಾ ನಟೋಜಿ, ಅಪೂರ್ವ ರಾವ್‌, ವಾಣಿ ಹರೀಶ್‌ ರಾವ್‌ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದು ನಾರ್ಥ್ ಅಮೆರಿಕದ ಸ್ಥಾನಿಕ ಸಮಾಜದ ಎರಡನೇ ವರ್ಷದ ಆನ್‌ಲೈನ್‌ ಮಿಲನ ಮತ್ತು ಕಾರ್ಯಕ್ರಮವಾಗಿತ್ತು. ಹೀಗೆ ಮುಂದೆ ಇನ್ನು ಹೆಚ್ಚು ಕಾರ್ಯಕ್ರಮಗಳನ್ನು ಮಾಡಲು ಸಮಾಜ ಬಾಂಧವರ ಬೆಂಬಲ, ಸಹಕಾರ, ಉತ್ತೇಜನ, ಮಾರ್ಗದರ್ಶನ ಹಾಗೂ ಶೃಂಗೇರಿ ಗುರುಗಳ ಮತ್ತು ಶಾರದಾಂಬೆಯ ಅನುಗ್ರಹ ದೊರಕಲಿ ಎಂದು ಪ್ರಾರ್ಥಿಸುತ್ತೇವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next