Advertisement
ಇದು ಅನೇಕ ಅಂತರ್ಯುದ್ಧದ ಅನಂತರ ಗುಲಾಮಗಿರಿಯ ನಿರ್ಮೂಲನೆಯನ್ನು ಆಚರಿಸಲು ಉದ್ದೇಶಿಸಲಾಯಿತು. ಅಕ್ಟೋಬರ್ 28, 1886 ರಂದು ಸಮರ್ಪಿಸಲ್ಪಟ್ಟ ಈ ಶಿಲ್ಪವು ಸಮುದ್ರದ ಮೂಲಕ ಬರುವ ಲಕ್ಷಾಂತರ ವಲಸಿಗರಿಗೆ ಸ್ವಾಗತವನ್ನು ಕೋರುತ್ತಾ, ಹೊಸ ಜೀವನದ ನಿರೀಕ್ಷೆಯ ಬೆಳಕು ಮತ್ತು ಭರವಸೆಯನ್ನು ನೀಡುತ್ತದೆ.
ಸ್ವಾತಂತ್ರ್ಯದ ಪ್ರತಿಮೆಯ ಚಿಂತನೆ 1865ರಲ್ಲಿ ಫ್ರಾನ್ಸ್‌ನಲ್ಲಿ ಹುಟ್ಟಿಕೊಂಡಿತು. ಫ್ರೆಂಚ್ ರಾಜಕೀಯ ಚಿಂತಕ ಮತ್ತು ದಾಸ್ಯ ನಿರಾಕಾರಕ ಎಡ್ವರ್ಡ್ ಡಿ ಲ್ಯಾಬೌಲೇ ಅವರು ಪ್ರತಿಮೆಯನ್ನು ಕನಸು ಕಂಡ ವ್ಯಕ್ತಿ, ಮತ್ತು ಶಿಲ್ಪಿ ಫ್ರೆಡ್ರಿಕ್-ಆಗಸ್ಟ್ ಬಾತೊìಲ್ಡಿ ಇದನ್ನು ವಿನ್ಯಾಸಗೊಳಿಸಿದರು. ಆದರೆ ಅವಿಭಾಜ್ಯ ಲೋಹದ ಚೌಕಟ್ಟನ್ನು ಪ್ಯಾರಿಸ್‌ನ ಐಫೆಲ್ ಟವರ್ ಅನ್ನು ನಿರ್ಮಿಸಿದ ವ್ಯಕ್ತಿಯಿಂದ ಮಾಡಲ್ಪಟ್ಟಿದೆ. ಶಿಲ್ಪವನ್ನು 1876ರಲ್ಲಿ ಅಮೆರಿಕದ ಸ್ವಾತಂತ್ರ್ಯ ಸಂಭ್ರಮಾಚರಣೆಯ ಸ್ಮರಣಾರ್ಥವಾಗಿ, ಫ್ರಾನ್ಸ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಇದ್ದ ಶಾಶ್ವತ ಸ್ನೇಹವನ್ನು ಆಚರಿಸಲು ತಯಾರಿಸಲಾಯಿತು.
Related Articles
ಬರ್ಥೋಲ್ಡಿ ಅವರ ಶಿಲ್ಪ ವಿನ್ಯಾಸವು ಗಾಢವಾದ ಸಂಕೇತವನ್ನು ಹೊಂದಿತ್ತು. ಲೇಡಿ ಲಿಬರ್ಟಿಯ ಆಕೃತಿಯು ಲಿಬರ್ಟಾಸ್ ಎಂಬ ರೋಮನ್ ಸ್ವಾತಂತ್ರ್ಯ ದೇವತೆಯನ್ನು ಪ್ರತಿನಿಧಿಸುತ್ತದೆ. ಗಣರಾಜ್ಯವನ್ನು ಬೆಂಬಲಿಸುವ ಜೂಲಿಯಸ್ ಸೀಸರ್‌ನ ಹತ್ಯೆಯ ಅವಧಿಯ ರೋಮನ್ ನಾಣ್ಯಗಳಲ್ಲಿ ಲಿಬರ್ಟಾಸ್ ಕಾಣಿಸಿತ್ತದೆ. ಈ ಶಿಲ್ಪವು ಬಲಗೈಯಲ್ಲಿ ಬೆಳಕು ನೀಡುವ ಮೆಣಗೆಯನ್ನು ಹಿಡಿದುಕೊಂಡಿದ್ದು, ಎಡಗೈಯಲ್ಲಿ ಅಮೆರಿಕದ ಸ್ವಾತಂತ್ರ್ಯ ಘೋಷಣೆಯ ದಿನವಾದ ಜುಲೈ 4, 1776 ಅನ್ನು ಕೆತ್ತಿರುವ ಟ್ಯಾಬುಲಾ ಅಂಸಾಟವನ್ನು ಹಿಡಿದಿದೆ.
Advertisement
ಪಾದಗಳಲ್ಲಿ ಮುರಿದ ಸರಪಳಿಗಳು ದಾಸ್ಯತೆಯ ಮುಕ್ತಿಯ ಸಂಕೇತವನ್ನು ಸೂಚಿಸುತ್ತವೆ. ಕಿರೀಟದ ಸುತ್ತಲೂ ಕಾಣುವ ಏಳು ಮೊನಚುಗಳು ಸಾಗರಗಳು ಮತ್ತು ಖಂಡಗಳನ್ನು ಪ್ರತಿನಿಧಿಸುತ್ತವೆ ಮತ್ತು ವಿಶ್ವದ ಸ್ವಾತಂತ್ರ್ಯ ಸಂದೇಶವನ್ನು ಒತ್ತಿಹೇಳುತ್ತದೆ. ಶಿಲ್ಪದ ನಿರ್ಮಾಣವು ಆ ಕಾಲದ ತಾಂತ್ರಿಕತೆಯಲ್ಲಿ ಒಂದು ಅದ್ಭುತವಾಗಿತ್ತು.
ಈ ಯೋಜನೆಗೆ ಹಣಕಾಸಿನ ಸವಾಲುಗಳು ಎದುರಾದವು. ಫ್ರಾನ್ಸ್ ಮತ್ತು ಅಮೆರಿಕ ಸಾರ್ವಜನಿಕ ಶುಲ್ಕ, ಮನೋರಂಜನ ಕಾರ್ಯಕ್ರಮ ಮತ್ತು ಲಾಟರಿ ಮೂಲಕ ನಿಧಿಸಂಗ್ರಹ ಮಾಡಲಾಯಿತು. ಶಿಲ್ಪವು 1884ರಲ್ಲಿ ಫ್ರಾನ್ಸ್‌ನಲ್ಲಿ ಪೂರ್ಣಗೊಂಡು, 350 ವಿಭಜಿತ ತುಂಡುಗಳಾಗಿ, 214 ಪೆಟ್ಟಿಗೆಯಲ್ಲಿ ರವಾನಿಸಲಾಯಿತು. ಇಂದಿನ ಲಿಬರ್ಟಿ ದ್ವೀಪ, ಹಿಂದಿನ ಹೆಸರಿನ ಬೆರ್ಡೋಸ್ ದ್ವೀಪದಲ್ಲಿ, ನಾಲ್ಕು ತಿಂಗಳುಗಳಲ್ಲಿ ಮರು ಜೋಡಣೆ ಮಾಡಲಾಯಿತು. ಪೀಠವು ಎಪ್ರಿಲ್ 1886ರಲ್ಲಿ ಪೂರ್ಣಗೊಂಡಿತು. ಅಂತಿಮವಾಗಿ, ಅಕ್ಟೋಬರ್ 28, 1886 ರಂದು ಅಧ್ಯಕ್ಷ ಗ್ರೋವರ್ ಕ್ಲೀವ್‌ಲ್ಯಾಂಡ್ ಸಾವಿರಾರು ಪ್ರೇಕ್ಷಕರ ಮುಂದೆ ಲಿಬರ್ಟಿ ಪ್ರತಿಮೆಯನ್ನು ಸಮರ್ಪಿಸಿದರು.
1903ರಲ್ಲಿ, “ದಿ ನ್ಯೂ ಕೊಲೋಸಸ್’ ಅನ್ನು ಹೊಂದಿರುವ ಫಲಕವನ್ನು ಪೀಠದಲ್ಲಿ ಇರಿಸಲಾಯಿತು. ಅದರೊಂದಿಗೆ ಲೇಡಿ ಲಿಬರ್ಟಿಯ ಮಹತ್ವವು ಅಮೆರಿಕಕ್ಕೆ ಹೋಗುವ ದಾರಿಯಲ್ಲಿ ಸಾಗಿದ ವಲಸಿಗರಿಗೆ ಸ್ಫೂರ್ತಿಯಾಗಿ ಬೆಳೆಯಿತು. ಸಾವಿರಾರು ವರ್ಷಗಳ ಕಾಲ, ಶಿಲ್ಪವು ರಚನಾತ್ಮಕ ಹವಾಮಾನದ ಸಮಸ್ಯೆಗಳನ್ನು ಅನುಭವಿಸಿದೆ. ಲೇಡಿ ಲಿಬರ್ಟಿಗೆ ಪ್ರತೀ ವರ್ಷ ಸುಮಾರು 600 ಬಾರಿ ಸಿಡಿಲು ಮತ್ತು ಮಿಂಚುಗಳನ್ನು ತಡೆದುಕೊಳ್ಳಬೇಕು. ಹೆಚ್ಚಿನ ಗಾಳಿಯಲ್ಲಿ, ದೀವಟಿಗೆ ಸುಮಾರು 5 ಇಂಚುಗಳಷ್ಟು ಅಕ್ಕಪಕ್ಕದಲ್ಲಿ ಚಲಿಸುತ್ತದೆ!