Advertisement

Desi Swara: ಪದ್ಮಭೂಷಣ ಡಾ| ಶಿವತಾನು ಪಿಳ್ಳೈ ಅವರಿಂದ ಉಪನ್ಯಾಸ

01:07 PM Sep 21, 2024 | Team Udayavani |

ದೋಹಾ: ಭಾರತೀಯ ರಾಯಭಾರ ಕಚೇರಿಯ ಅಡಿಯಲ್ಲಿ ಐಸಿಸಿ ಆವರಣದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರವು ಸ್ಪೇಸ್‌ ಆ್ಯಂಡ್‌ ಫ್ಯೂಚರ್‌ಆಫ್‌ ಹ್ಯುಮಾನಿಟಿ ಕಾರ್ಯಕ್ರಮವನ್ನು ಸೆ.15ರಂದು ಆಯೋಜಿಸಿತ್ತು.

Advertisement

ಬ್ರಹ್ಮೋಸ್‌ ಏರೋಸ್ಪೇಸ್‌ನ ಸ್ಥಾಪಕ ಸಿಇಒ ಮತ್ತು ಎಂಡಿ ಖ್ಯಾತ ಭಾರತೀಯ ವಿಜ್ಞಾನಿ ಪದ್ಮಭೂಷಣ ಡಾ| ಶಿವತಾನು ಪಿಳ್ಳೆ„ ಅವರು ಬಾಹ್ಯಾಕಾಶ ಮತ್ತು ಮಾನವೀಯತೆಯ ಭವಿಷ್ಯ ಎಂಬ ವಿಷಯದ ಕುರಿತು ಮಾತನಾಡಿ, ಡಾ| ಎ.ಪಿ.ಜೆ ಅವರೊಂದಿಗೆ ಕೆಲಸ ಮಾಡಿದ ಅನುಭವಗಳನ್ನು ಹಂಚಿಕೊಂಡರು.

ಡಾ| ಪಿಳ್ಳೆ„ ಅವರನ್ನು ಐಸಿಸಿ ಅಧ್ಯಕ್ಷ ಎ.ಪಿ.ಮಣಿಕಂಠನ್‌ ಅವರು ಸಮ್ಮಾನಿಸಿದರು. ಈ ಸಂದರ್ಭದಲ್ಲಿ ಐಸಿಸಿಯ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೆಬ್ಟಾಗಿಲು, ಐಸಿಸಿ ಪ್ರಧಾನ ಕಾರ್ಯದರ್ಶಿ ಮೋಹನ್‌ ಕುಮಾರ್‌, ಐಸಿಸಿ ವ್ಯವಸ್ಥಾಪಕ ಸಮಿತಿ ಸದಸ್ಯರು, ಐಸಿಸಿ ಸಲಹಾ ಮಂಡಳಿ ಸದಸ್ಯರು ಮತ್ತು ಭಾರತೀಯ ಸಮುದಾಯದ ಮುಖಂಡರು ಉಪಸ್ಥಿತರಿದ್ದರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಡಯಾನ್ಪೊರಾ ಸದಸ್ಯರು, ಮುಖ್ಯವಾಗಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next