Advertisement
ಆದರೆ ಆಮೇಲೆ ಅನ್ನಿಸ್ಸುತ್ತಿತ್ತು, ಇನ್ನು ಕೆಲವೊಂದಿಷ್ಟು ಜನರನ್ನು ನಾವು ಕರೆದುಕೊಂಡು ಬರಬಹುದಿತ್ತು ಎಂದು…! ಯಾಕೆ ಎಂದು ಕೇಳುತ್ತೀರಾ, ಬಸ್ಸಿನಲ್ಲಿ ಮುಕ್ಕಾಲು ಜನ ತಮ್ಮ ಸೀಟನ್ನು ಬಿಟ್ಟು, ಅಂತ್ಯಾಕ್ಷರಿ ಹಾಡುವುದು, ಡ್ಯಾನ್ಸ್ ಮಾಡುವುದರಲ್ಲೇ ನಿರತರಾಗಿದ್ದರು. ಪ್ರತಿಯೊಬ್ಬರು ತಮ್ಮೊವರೊಡನೆ ಬಸ್ಸಿನಲ್ಲಿ ಹೋಗುವಾಗ ಅಂತ್ಯಾಕ್ಷರಿ, ಸರಿಗಮ ಸಂಗೀತ ಆಟವನ್ನು ಆಡೇ ಆಡುತ್ತಾರೆ. ನಾವೆಲ್ಲ ಈ ಹಾಡಿನ ಗುಂಗಿನೊಳಗೆ ಎಷ್ಟು ಮುಳುಗಿದ್ದೇವು ಎಂದರೆ ತಿಂಡಿಯ ವಿರಾಮ ಬಂದಾಗಲೇ ನಾವೆಲ್ಲ ವಾಸ್ತವಕ್ಕೆ ಬಂದಿದ್ದು. ಒಂದು ವಿಸ್ತಾರವಾದ ಸ್ಥಳದಲ್ಲಿ ಎಲ್ಲರೂ ಸೇರಿ ಬೆಳ್ಳಗ್ಗಿನ ಉಪಹಾರವನ್ನು ಸವಿದೆವು. ವಿಶೇಷವೆಂದರೆ ಭಾರತೀಯರಾದ ನಮಗೆ ನಮ್ಮ ದೇಶದ ತಿಂಡಿಗಳೇ ರುಚಿ ಹಿಡಿಸುವುದು. ಎಲ್ಲರೂ ದಕ್ಷಿಣ ಭಾರತದ ತಿಂಡಿಗಳನ್ನು ಮಾಡಿ ತಂದಿದ್ದರು. ಹಾಗಾಗಿ ನಮ್ಮ ಬಸ್‌ನ ಡ್ರೈವರ್‌ಗೂ ನಾವು ಇದೇ ತಿಂಡಿಯನ್ನು ನೀಡಬೇಕಾಯಿತು. ಅವರಿಗೆ ಹಿಡಿಸುತ್ತದೋ ಇಲ್ಲವೋ ಎಂಬ ಗೊಂದಲದಲ್ಲೇ ಇರುವಾಗ ತಿಂಡಿ ಸವಿದ ಅವರು ಅದನ್ನು ಬಹಳ ಇಷ್ಟಪಟ್ಟರು.!
Related Articles
Advertisement
ನಮ್ಮ ತಂಡದವರು ಮೊದಲೇ ಡೆಸ್ಟಿನೇಶನ್ ಟೂರ್ ಅನ್ನು ಬುಕ್ ಮಾಡಿಸಿದ್ದರು. ಇದು ವಿವಿಧ ರುಚಿಯ ವೈನ್‌ಗಳನ್ನು ಟೇಸ್ಟ್ ಮಾಡುವಂತದ್ದು. ತಂಡದ ವಿವಿಧ ಸದಸ್ಯರು ರೆಡ್, ವೈಟ್ ಹಾಗೂ ಸ್ಥಳೀಯ ದ್ರಾಕ್ಷಿ ಹಣ್ಣಿನಿಂದ ತಯಾರಾದ ಒಟ್ಟು ಆರು ತರಹದ ವೈನ್‌ಗಳನ್ನು ಸವಿದರು. ಹಾಗೆಯೇ ಅಲ್ಲಿನ ವೈನ್ ವಾರ್ಡ್‌ಗಳನ್ನು ನೋಡಿದೆವು.
ಪ್ರವಾಸದ ಮುಂದಿನ ನಿಲ್ದಾಣ ಟೆಘನೆಕ್ ಸ್ಟೇಟ್ ಪಾರ್ಕ್‌ನ ಫಾಲ್ಸ್. ಪಾರ್ಕ್ ತಲುಪಿದ ಮೇಲೆ ಸುಮಾರು 2.5 ಮೈಲು ನಡೆದರೆ ಅತ್ಯುದ್ಭುತವಾದ ಸುಮಾರು 215 ಅಡಿಗಳ ಮೇಲಿನಿಂದ ಧುಮುಕ್ಕುತ್ತಿರುವ ಜಲಪಾತವನ್ನು ಕಣ್ತುಂಬಿಕೊಳ್ಳಬಹುದು. ಜಲಪಾತದ ಎದುರು ನಿಂತು ಎಲ್ಲರೂ ಫೋಟೋಗಳನ್ನು ತೆಗೆದು ಸಂಭ್ರಮಿಸಿದ್ದೇ ಸಂಭ್ರಮಿಸಿದ್ದು. ಮಕ್ಕಳೆಲ್ಲ ಜಲಪಾತಕ್ಕೆ ಇಳಿದು ಆಟವಾಡಿ ಸಂಭ್ರಮಿಸಿದರು. ಮತ್ತೆ ಸಂಜೆಯ ಸ್ನಾಕ್ಸ್‌ಗೆ ಭಾರತೀಯ ತಿಂಡಿಗಳನ್ನು ನಮ್ಮ ಜತೆ ನಮ್ಮ ಡ್ರೈವರ್ ಸಹ ಬಹಳ ಇಷ್ಟ ಪಟ್ಟು ತಿಂದಿದ್ದರು. ಪ್ರವಾಸ ಮುಗಿಯುವುದರಲ್ಲಿ ಡ್ರೈವರ್ ಭಾರತೀಯ ಆಹಾರದ ಫ್ಯಾನ್ ಆಗಿಬಿಟ್ಟಿದ್ದರು. ಅಲ್ಲದೇ ಭಾರತೀಯ ಆಹಾರಗಳನ್ನು ಮಾಡುವ ರೀತಿಯನ್ನು ಕೇಳಿ ತಿಳಿದುಕೊಂಡರು. ಲೇಕ್ ಕಾಯುಗಾ
ಸಂಜೆಯ ಭೇಟಿಗೆ ನಾವು ಹೋಗಿದ್ದು ಅಲ್ಲೇ ಸಮೀಪದಲ್ಲಿರುವ ಕಾಯುಗಾ ಸರೋವರವನ್ನು. ಇದನ್ನು ಲೇಕ್ ಕಾಯುಗ ಎಂದು ಕರೆಯಲಾಗುತ್ತದೆ. ಈ ಲೇಕ್‌ನಲ್ಲಿ ಆಟವಾಡಬಹುದು. ಚಿಕ್ಕ ಚಿಕ್ಕ ಮಕ್ಕಳೆಲ್ಲ ಲೇಕ್‌ನಲ್ಲಿ ಆಟವಾಡಿ ಸಂಭ್ರಮಿಸಿದ್ದರು.
ಪ್ರವಾಸದ ಪಟ್ಟಿಯಲ್ಲಿದ್ದ ಎಲ್ಲ ಸ್ಥಳಗಳಿಗೆ ಭೇಟಿ ನೀಡದ ಬಳಿಕ ಮತ್ತೆ ರಾತ್ರಿಯ ಊಟ ಮುಗಿಸಿ ಅಲ್ಬನಿಯ ಕಡೆಗೆ ತಮ್ಮ ಮರಳಿ ಪ್ರಯಾಣ. ಪ್ರವಾಸದಲ್ಲಿನ ಮೋಜು, ಮಸ್ತಿಯಿಂದ ಎಲ್ಲರೂ ಆಯಾಸದಿಂದ ನಿದ್ದೆಗೆ ಜಾರಿದ್ದರು. *ಸುಪ್ರೀಯ ವಾಲ್ವೇಕರ್, ಅಲ್ಬನಿ