Advertisement

Desi Swara: ಹೊನ್ನುಡಿ- ಕೊಟ್ಟಿದ್ದೇ ಸಿಗುವುದು !

12:49 PM Jul 27, 2024 | Team Udayavani |

ದುರ್ಯೋಧನನ ಸಭೆ. ದ್ರೌಪದಿಯ ಕೂದಲನ್ನು ಎಳೆದುಕೊಂಡು ಬಂದ ದುಶ್ಯಾಸನ ಅವಳ ಸೀರೆಯನ್ನು ಎಳೆಯುವ ಪ್ರಯತ್ನದಲ್ಲಿದ್ದ. ಅವಳು ಮೊಟ್ಟಮೊದಲು ಸಹಾಯಕ್ಕಾಗಿ ನೋಡಿದ್ದು ತನ್ನ ಪತಿಗಳಾದ ಪಂಚಪಾಂಡವರ ಕಡೆ. ಆದರೆ ಆಗಲೇ ಗುಲಾಮರಾಗಿಬಿಟ್ಟಿದ್ದ ಅವರಿಂದ ತಲೆ ತಗ್ಗಿಸಿ ನಿಲ್ಲುವುದರ ಹೊರತು ಬೇರೇನು ಮಾಡಲಾಗಲಿಲ್ಲ. ಅಂತೆಯೇ ಸಭೆಯಲ್ಲಿದ್ದ ಗುರುಹಿರಿಯರು ಯಾರೂ ಮಿಸುಕಾಡಲಿಲ್ಲ. ಕೊನೆಯದಾಗಿ ಶ್ರೀಕೃಷ್ಣನನ್ನು ಸ್ತುತಿಸಿ, “ನೀನಲ್ಲದೆ ನನ್ನನ್ನು ಈ ವಿಪತ್ತಿನಿಂದ ಪಾರು ಮಾಡುವವರು ಯಾರು?’ ಎಂದು ಮನಪೂರ್ವಕವಾಗಿ ಬೇಡಿಕೊಳ್ಳುತ್ತಾಳೆ.

Advertisement

ಶ್ರೀಕೃಷ್ಣನ ದಯೆ ಇಲ್ಲವಾಗಿ, ದೌಪದೀ ತನ್ನ ಎರಡೂ ಕೈಗಳನ್ನು ಮೇಲೆತ್ತಿ ಬೇಡಿಕೊಳ್ಳುತ್ತಾಳೆ. ಆಗ ಶ್ರೀಕೃಷ್ಣನೇ ಅವಳಿಗೆ ಅನುಗ್ರಹ ಮಾಡುತ್ತಾನೆ. ದ್ರೌಪದೀ ಸೀರೆ ಅಕ್ಷಯವಾಗುತ್ತದೆ. “ಶ್ರೀಕೃಷ್ಣ ಸ್ವಾಮಿಯೇ, ನೀನೇ ನನ್ನ ಮಾನವನ್ನು ರಕ್ಷಿಸಿದೆ. ನಿನಗೆ ನಾನು ಹೇಗೆ ಕೃತಜ್ಞತೆ ಸಲ್ಲಿಸಲಿ?’ ಎಂದು ಬೇಡಿಕೊಳ್ಳುತ್ತಾಳೆ.

ಆಗ ಅದೃಶ್ಯದಲ್ಲಿ ಶ್ರೀಕೃಷ್ಣ ಅವಳ ಕಿವಿಯ ಬಳಿ ಬಂದು ಹೇಳುತ್ತಾನೆ, “ದೇವರೆಂದು ನೀನು ನಂಬಿದ ನನ್ನ ದಯೆಯೇನೋ ನಿಜವೇ. ಆದರೆ ಅದಷ್ಟೇ ಅಲ್ಲ. ನೀನು ಮಾಡಿದ ಪುಣ್ಯ ಕಾರ್ಯದ ಫಲವೂ ಇದಕ್ಕೆ ಕಾರಣ. ನೀನು ಈ ಹಿಂದೆ ಯಾರಿಗಾದರೂ ಬಟ್ಟೆಯನ್ನು ದಾನ ಮಾಡಿದ್ದೀಯಾ, ಹೇಳು?’

ಮಹಾರಾಣಿಯಾದ ದ್ರೌಪದೀ ಎಷ್ಟೇಷ್ಟೋ ಜನರಿಗೆ ವಸ್ತ್ರದಾನ ಮಾಡಿರಬಹುದು. ಅದನ್ನು ಅವಳು ಲೆಕ್ಕವಿಟ್ಟಿದ್ದಾಳೆಯೆ? ಶ್ರೀಕೃಷ್ಣ ಹೇಳುತ್ತಾನೆ, “ಕೇವಲ ದಾನವಾದರೆ ಸಾಲದು. ಸತ್ಪಾತ್ರ ದಾನವಾಗಬೇಕು. ತೀರಾ ಅಗತ್ಯವಿರುವವರಿಗೆ ನೀನು ಅಂಬರವನ್ನು ದಾನ ಮಾಡಿರಬೇಕು. ನೆನಪು ಮಾಡು’ ದ್ರೌಪದೀ ತನ್ನ ಬಾಲ್ಯದ ದಿನಗಳೆಡೆಗೆ ಹೋಗುತ್ತಾಳೆ.

Advertisement

ಪಾಂಚಾಲ ದೇಶದ ನದಿಯ ಬದಿಯಲ್ಲಿ ಆಟವಾಡುತ್ತಿರುವಾಗ ಆ ನದಿಯಲ್ಲಿ ಓರ್ವ ಸನ್ಯಾಸಿ ಸ್ನಾನ ಮಾಡಿಕೊಂಡಿರುತ್ತಾನೆ. ಅವನ ಕೌಪೀನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿರುತ್ತದೆ. ಎಲ್ಲರೂ ನಗುತ್ತಾರೆ. ಆದರೆ ದ್ರೌಪದೀ ಹಾಸ್ಯ ಮಾಡುವುದಿಲ್ಲ. ನನ್ನ ಪೀತಾಂಬರವನ್ನು ಹರಿದು ಒಂದು ಅಂಶವನ್ನು ಸನ್ಯಾಸಿಯೆಡೆಗೆ ಎಸೆಯುತ್ತಾಳೆ ! ಸನ್ಯಾಸಿ, “ನಿನಗೆ ಒಳ್ಳೆಯದಾಗಲಿ ಮಗಳೇ’ ಎಂದು ಆಶೀರ್ವಾದ ಮಾಡುತ್ತಾನೆ. ದ್ರೌಪದೀ ತನ್ನ ಮನಸ್ಸಿನಲ್ಲಿ ಅದನ್ನು ನೆನಪಿಸಿಕೊಂಡಾಗ ಶ್ರೀಕೃಷ್ಣ ನಗುತ್ತ ಹೇಳುತ್ತಾನೆ, “ಕೊಟ್ಟಿದ್ದೇ ಸಿಗುವುದು, ಕೊಡದಿರುವುದು ಅಲ್ಲ’ ಎಂದು.

Advertisement

Udayavani is now on Telegram. Click here to join our channel and stay updated with the latest news.

Next