Advertisement

Desi Swara: ಡೆಲ್ಲಿ ಹಪ್ಪಳದಿಂದ, ಮುಲ್ಲೆಡ್‌ ವೈನ್‌, ಗ್ಲುಹ್ವೆಯ್ನ್‌ ….

11:56 AM Dec 30, 2023 | Team Udayavani |

ಮೈಸೂರಿನ ದಸರಾ ಹಬ್ಬವನ್ನು ಇಡೀ ವಿಶ್ವವೇ ನೋಡುವಂತೆ ವಿಜೃಂಭಣೆಯಿಂದ ಆಚರಿಸುತ್ತೇವೆ. ದೊಡ್ಡಕೆರೆ ಮೈದಾನದ ದಸರಾ ವಸ್ತು ಪ್ರದರ್ಶನಕ್ಕೆ ದೇಶದೆಲ್ಲೆಡೆಯಿಂದ ವ್ಯಾಪಾರಿಗಳು ತಮ್ಮೂರಿನ ಕರಕುಶಲ ವಸ್ತುಗಳನ್ನು ತಂದು ಅಲ್ಲಿ ಮಾರುತ್ತಿದ್ದರು. ಇವೆಲ್ಲ ನೋಡಿ ಬೆಳೆದ ನನಗೆ ಇದಕ್ಕಿಂತ ಅದ್ದೂರಿ ಏನಿರಲಾರದು ಎಂಬ ನಂಬಿಕೆ. ಅದೇ ಈಗಲೂ ಸಹ ನನಗೆ ಅಚ್ಚು ಮೆಚ್ಚು.

Advertisement

ಪ್ರಾಥಮಿಕ ಶಿಕ್ಷಣವನ್ನು ಕಾನ್ವೆಂಟ್‌ನಲ್ಲಿ ಮಾಡಿದವಳು ನಾನು. ಹಾಗಾಗಿ ಸ್ವಲ್ಪ ಮಟ್ಟಿಗೆ ಈಸ್ಟರ್‌ ಮತ್ತು ಕ್ರಿಸ್ಮಸ್‌ನ ಬಗ್ಗೆ ಮಾಹಿತಿ ಇದೆ. ಹಾಗೆ ನಮ್ಮ ಮನೇಲಿ ನಾನು ಪುಟ್ಟ ಕ್ರಿಸ್ಮಸ್‌ ಗಿಡ ಇಡುತ್ತಿದೆ. ಆದರೆ ಕ್ರಿಸ್ಮಸ್‌ ಮಾರ್ಕೆಟ್‌ ಬಗ್ಗೆ ನಂಗೆ ಏನು ಗೊತ್ತಿರಲಿಲ್ಲ, ಇದರ ಸಂಪೂರ್ಣ ಚಿತ್ರಣ ದೊರೆತ್ತಿದ್ದು ನಾನು ಲಂಡನ್ನಿಗೆ ಬಂದ ಅನಂತರ. ಸಾಂಪ್ರದಾಯಿಕ ಕ್ರಿಸ್ಮಸ್‌ ಮಾರ್ಕೆಟ್‌ ಏನೆಂದು ನೋಡಿದೆ. ಇಲ್ಲಿನ ನಿವಾಸಿ ಆದಾಗಿನಿಂದ ನಾವು ಈ ಮಾರ್ಕೆಟ್‌ ಪ್ರತೀ ವರ್ಷ ಹೋಗೋದು ಒಂದು ಸಂಪ್ರದಾಯವೇ ಆಗಿದೆ.

ಶಾಪಿಂಗ್‌ಗಿಂತಲೂ ಅಂಗಡಿಗಳ ಅಲಂಕಾರ, ಅಲ್ಲಿ ಮಾರುವ ವಸ್ತುಗಳು ನೋಡಲು ಬಹಳ ಖುಷಿ. ಈ ಬಾರಿ ಹದಿನಾಲ್ಕು ವರ್ಷಗಳ ಅನಂತರ ಬಾತ್‌ ಊರಿನ ಕ್ರಿಸ್ಮಸ್‌ ನೋಡಲು ನನ್ನ ಲೇಡೀಸ್‌ ಗ್ಯಾಂಗ್‌ನೊಂದಿದೆ ಹೊಂದಿದ್ದೆ. ಬಾತ್‌ನ ಕ್ರಿಸ್ಮಸ್‌ ಮಾರ್ಕೆಟ್‌ ಯುಕೆಯ ಒಂದು ಪ್ರಸಿದ್ಧ ಮಾರ್ಕೆಟ್‌.

ಬಿಸಿ ವೈನ್‌ ಮತ್ತು ಹಸುರು ಸೇಬಿನ ರಸವನ್ನು ದಾಲ್ಚಿನ್ನಿ ಲವಂದೊಂದಿಗೆ ಕುದಿಸಿ ಒಂದು ಒಳ್ಳೆಯ ಡ್ರಿಂಕ್‌ ತಯಾರಿಸುತ್ತಾರೆ ಅದು ನನಗೆ ಬಹಳ ರುಚಿ ಅನಿಸುತ್ತದೆ. ನಾನು ಈ ಸೇಬಿನ ಬಿಸಿ ಪಾನಕವನ್ನು ಸುಮಾರು 4 ರಿಂದ 5 ಕಪ್‌ ಕುಡಿದಿರಬಹುದು. ಅದು ಚಳಿಯೆನಿಸುತ್ತದೆ ಆದರೂ ಅದೇ ಹಿತವೆನಿಸುತ್ತದೆ.

Advertisement

ನನ್ನ ಅಕ್ಕ ಜೆರ್ಮಿಯ ಸುಟ್ಟಗಾರ್ಟಿನ ನಿವಾಸಿ. ಅವಳು ಸುಮಾರು ವರ್ಷಗಳಿಂದ ಜರ್ಮನಿಯ ಕ್ರಿಸ್ಮಸ್‌ ಮಾರ್ಕೆಟ್‌ಗಳ ಬಗ್ಗೆ ನಂಗೆ ಹೇಳುತ್ತನೆ ಇದ್ದಳು. ಈ ಕ್ರಿಸ್ಮಸ್‌ ರಜೆಯಲ್ಲಿ ಅವಳ ಮನೆಗೆ ಲಗ್ಗೆ ಹಾಕಿದೀವಿ.

ಯೂರೋಪ್‌ನ ಅತೀ ಹಳೆಯ ಮಾರ್ಕೆಟ್‌ ಇಲ್ಲಿದೆ. ಈ ಭಾರಿ Stuttgarter Weihnachtsmarktಗೆ ಭೇಟಿ ಕೊಟ್ಟೇವು. 1692ರಲ್ಲಿ ಸ್ಟಟ್‌ಗಾರ್ಟರ್‌ ವೀಹಾ°ಚ್‌r ಮಾರ್ಕ್‌ ಅನ್ನು ನಗರದ ದಾಖಲೆಗಳಲ್ಲಿ ಮೊದಲ ಬಾರಿಗೆ ಉಲ್ಲೇಖೀಸಲಾಗಿದೆ. ಇದನ್ನು “ಸಾಂಪ್ರದಾಯಿಕ ಸ್ಟಟ್‌ಗಾರ್ಟ್‌ ಈವೆಂಟ್‌’ ಎಂದು ವಿವರಿಸಲಾಗಿದೆ. ಆಧುನಿಕ ಕ್ರಿಸ್‌ಮಸ್‌ ಮಾರುಕಟ್ಟೆಯು ಸುಮಾರು 200 ಸ್ಟಲ್ಯಾಂಡ್‌ಗಳನ್ನು ಒಳಗೊಂಡಿದೆ ಮತ್ತು ಪ್ರತೀ ವರ್ಷ ಸುಮಾರು 3.6 ಮಿಲಿಯನ್‌ ಜನರು ಭೇಟಿ ನೀಡುತ್ತಾರೆ. ಜರ್ಮನಿಯಲ್ಲಿ ಇದೇ ಅತೀ ದೊಡ್ಡದು. ಪ್ರದೇಶದ ಪರಿಭಾಷೆಯಲ್ಲಿ, ಸ್ಟಟ್‌ಗಾರ್ಟ್‌ ಕ್ರಿಸ್‌ಮಸ್‌ ಮಾರುಕಟ್ಟೆಯನ್ನು ಸಂಘಟಕರು ಯುರೋಪ್‌ನಲ್ಲಿ ಹೆಚ್ಚಿನ ಸಂಪ್ರದಾಯದೊಂದಿಗೆ ಹಕ್ಕು ಸಾಧಿಸಿದ್ದಾರೆ.

ಪ್ರತಿಯೊಂದು ಅಂಗಡಿಯು ವಿಭಿನ್ನವಾಗಿ, ಸುಂದರವಾಗಿ, ಸಾಂಪ್ರದಾಯಿಕ ಕಥೆಯನ್ನು ಹೇಳುವ ಉಲ್ಲೇಖೀಸುವ ಗೊಂಬೆಗಳ ಅಲಂಕಾರವು ನೋಡುತ್ತಾ ನಿಂತರೆ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ. ಅಷ್ಟೇ ಅಲ್ಲ ಮತ್ತೂಂದು ನನಗೆ ಬಹಳ ವಿಭಿನ್ನ ಅನಿಸಿದ್ದು ಮಕ್ಕಳ ಮಿನಿಯೇಚರ್‌ ರೈಲು ಮಾರ್ಗದ “ಫೇರಿಟೇಲ್‌ ಲ್ಯಾಂಡ್‌’.

ಭಾಷೆ ಸ್ವಲ್ಪನೂ ತಿಳಿಯುವಿದಿಲ್ಲ ಆದರೆ ನನ್ನ ಅನುಭವದಲ್ಲಿ ಪ್ರತಿಯೊಬ್ಬ ವ್ಯಾಪಾರಿಯು ನನಗೆ ಜರ್ಮನ್‌ ಬರುವುದಿಲ್ಲ, ಇಂಗ್ಲಿಷ್‌ ಅಂದಾಕ್ಷಣ ಇಂಗ್ಲಿಷ್‌ ನಲ್ಲಿಯೇ ಮಾತನಾಡಿಸುತ್ತಿದ್ದರು. ಬಿಸಿಯಾದ ಹುರಿದ ಚೆಸ್ಟ$°ಟ್‌ ಬಟಾಟಿ ಚಿಪ್ಸ್‌ ಅಷ್ಟೇ ನಮಂತಹ ಸಸ್ಯಾಹಾರಿಗಳಿಗೆ ಒಂದು ರೀತಿಯ ಮೃಷ್ಟಾನ್ನ.

ಪುರಾತನ ವಸ್ತುಗಳ ಸಂಗ್ರಹಿಸುವರು ಮತ್ತು ಇಷ್ಟವಾದವರು ಇಲ್ಲಿ ಅನನ್ಯ ಅಪರೂಪತೆಗಳು, ಪುರಾತನ ಪುಸ್ತಕಗಳು, ಗಡಿಯಾರಗಳು, ಪಿಂಗಾಣಿ, ಆಭರಣಗಳು ಮತ್ತು ಹೆಚ್ಚಿನದನ್ನು ನೋಡಬಹುದು. ಸುಂದರ ಘಮಘಮಿಸುವ ಮೇಣಬತ್ತಿಗಳು, ಬಣ್ಣ ಬಣ್ಣದ ಬೆಚ್ಚನೆಯ ಸ್ಕಾರ್ಫ್ ಗಳು, ಕ್ರಿಸ್ಮಸ್‌ ಗಿಡಗಳಿಗೆ ಅಲಂಕರಿಸುವ ವಸ್ತುಗಳು ಎಲ್ಲಿ ನೋಡಿದೂ ಲೈಟಿನ ಸರ. ಈ ಬಾರಿ ಕ್ರಿಸ್ಮಸ್‌ನ ಮಜವೇ ಬೇರೆ.

*ರಾಧಿಕಾ ಜೋಶಿ, ಯುಕೆ

 

Advertisement

Udayavani is now on Telegram. Click here to join our channel and stay updated with the latest news.

Next