Advertisement

Desi Swara: ಬೆಸ್ಟ್‌ ಎಂಪ್ಲಾಯಿ ಆಫ್‌ ದಿ ಇಯರ್‌- ರಾಜಾ ಸುಬ್ರಹ್ಮಣ್ಯಗೆ ಪ್ರಶಸ್ತಿ

02:39 PM Aug 03, 2024 | Team Udayavani |

ಶಾರ್ಜಾ: ಶಾರ್ಜಾದ ಅಮೆರಿಕನ್‌ ಯುನಿವರ್ಸಿಟಿಯಲ್ಲಿ ಸ್ವಿಮ್ಮಿಂಗ್‌ ಮತ್ತು ಬಿಡಬ್ಲ್ಯುಎಫ್‌ ಬ್ಯಾಡ್ಮಿಂಟನ್‌ ಕೋಚ್‌ ಆಗಿರುವ ಕುಕ್ಕೆ ಸುಬ್ರಹ್ಮಣ್ಯದ ರಾಜಾ ಸುಬ್ರಹ್ಮಣ್ಯ ಅವರಿಗೆ ಬೆಸ್ಟ್‌ ಎಂಪ್ಲಾಯಿ ಆಫ್‌ ದಿ ಇಯರ್‌ 2024ಪುರಸ್ಕಾರ ಲಭಿಸಿದೆ.

Advertisement

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಅಮೆರಿಕನ್‌ ಯುನಿವರ್ಸಿಟಿಯ ಆಡಳಿತ ಮಂಡಳಿ ಅಧ್ಯಕ್ಷರು ಪುರಸ್ಕಾರ ಪ್ರದಾನ ಮಾಡಿದರು. ತನ್ನ 25 ವರ್ಷಗಳ ಸೇವೆಯಲ್ಲಿ 3ನೇ ಬಾರಿಗೆ ಈ ಪುರಸ್ಕಾರ ಪಡೆದಿದ್ದಾರೆ.

ಕಳೆದ 25 ವರ್ಷಗಳಿಂದ ಅಮೆರಿಕನ್‌ ಯುನಿವರ್ಸಿಟಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರಿಗೆ 25ನೇ ವರ್ಷದ ಸೇವಾ ಪುರಸ್ಕಾರವೂ ಲಭಿಸಿದೆ. ಅಲ್ಲದೆ ಇವರು ಅಂತಾರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್‌ ರೆಫ್ರಿಯಾಗಿದ್ದಾರೆ.

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿಯಾದ ಇವರು ಸುಬ್ರಹ್ಮಣ್ಯದ ಅಣ್ಣೋಜಿರಾವ್‌ ಮತ್ತು ಸೀತಮ್ಮ ದಂಪತಿಗಳ ಪುತ್ರ.

Advertisement

Udayavani is now on Telegram. Click here to join our channel and stay updated with the latest news.

Next