Advertisement

Desi Swara: ಆಗಸ್ಟ್ 30-ಸೆ.1: 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ

05:50 PM Aug 24, 2024 | Team Udayavani |

ವಾಷಿಂಗ್ಟನ್: ಅಮೆರಿಕದ ಕನ್ನಡ ಕೂಟಗಳ ಅಗರ (ಸಂಘ) (AKKA) ವಿಶ್ವ ಕನ್ನಡ ಸಮ್ಮೇಳನವು (WKC) ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯುವ ಸಮಾರಂಭವಾಗಿದ್ದು, ಅದು ಉತ್ತರ ಅಮೆರಿಕದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಉಳಿಸಲು ಕಾರ್ಯನಿರ್ವಹಿಸುತ್ತಾ ಬಂದಿದೆ. ಅಕ್ಕ ಉತ್ತರ ಅಮೆರಿಕಾದಾದ್ಯಂತ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಮತ್ತು ಉಳಿಸಲು ಶ್ರಮಿಸಿಸುತ್ತಿದೆ. ಕನ್ನಡವು ಭಾರತದ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು 2,000 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸವನ್ನು ಹೊಂದಿದೆ ಮತ್ತು ಭಾರತದ ದಕ್ಷಿಣ ಭಾಗದಲ್ಲಿ ಮುಖ್ಯವಾಗಿ ಮಾತನಾಡಲಾಗುತ್ತದೆ.

Advertisement

2024ರ ಆ. 30ರಿಂದ ಸೆ.1ರ ವರೆಗೆ 12ನೇ ವಾರ್ಷಿಕ ಸಮ್ಮೇಳನವನ್ನು ವರ್ಜೀನಿಯಾದ ರಿಚ¾ಂಡ್‌ನ‌ ಗ್ರೇಟರ್‌ ರಿಚ್ಚಂಡ್‌ನ‌ ಕನ್ವೇಷನ್‌ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ.

ಇದನ್ನೂ ಓದಿ:Krishna Janmashtami:ನ್ಯೂಜೆರ್ಸಿ ಶ್ರೀಕೃಷ್ಣ ವೃಂದಾವನ-ಕೃಷ್ಣನ ಆಗಮನಕ್ಕೆ ರಂಗೇರಿದ ಸಂಭ್ರಮ

ಈ ಸಮ್ಮೇಳನದಲ್ಲಿ ವಿಶ್ವದಾದ್ಯಂತ ಹರಡಿರುವ 6,000ಕ್ಕೂ ಹೆಚ್ಚು ಕನ್ನಡಿಗರು, ವಿವಿಧ ಕ್ಷೇತ್ರಗಳ 500ಕ್ಕೂ ಹೆಚ್ಚು ಗಣ್ಯರು, ಮಠಾಧಿಪತಿಗಳು ಮತ್ತು ಗುರುಗಳ ಉಪಸ್ಥಿತಿಯನ್ನು ನಿರೀಕ್ಷಿಸಲಾಗಿದೆ. ಸಮ್ಮೇಳನವು ಅಮೆರಿಕಾದಾದ್ಯಂತ, ಭಾರತದಿಂದ ಮತ್ತು ಇತರ ದೇಶಗಳಿಂದ 4,000ಕ್ಕೂ ಹೆಚ್ಚು ಜನರನ್ನು ಆಕರ್ಷಿಸಲು ನಿರೀಕ್ಷಿಸುತ್ತಿದೆ. ಈ ಸಮಾರಂಭವನ್ನು ವರ್ಜೀನಿಯಾ ವಲಯ ಪ್ರವಾಸೋದ್ಯಮದ ಸಹಯೋಗದಲ್ಲಿ ನಡೆಸಲಾಗುತ್ತಿದೆ.

ಸಮಾರಂಭದಲ್ಲಿ ಮನರಂಜನೆ, ಫ್ಯಾಷನ್‌ ಶೋ, ಭಾರತದಿಂದ ಬರುವ ಪ್ರಖ್ಯಾತ ಕಲಾವಿದರ ಪ್ರದರ್ಶನಗಳು ಹಾಗೂ ಮಳಿಗೆಗಳಲ್ಲಿ ಅನೇಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ. ಕರ್ನಾಟಕದ ಸಾಂಪ್ರದಾಯಿಕ ಆಹಾರ-ಊಟ ಅತ್ಯಂತ ಆಕರ್ಷಕ. ಸಾಹಿತ್ಯ ಚರ್ಚೆಗಳಿಗೆ ವೇದಿಕೆ ಒದಗಿಸುವುದರೊಂದಿಗೆ, ಸಾಂಸ್ಕೃತಿಕ ಜಾಗೃತಿಗೆ ಸಹಾಯ ಮಾಡುವ ಉದ್ದೇಶವನ್ನು ಈ ಸಮ್ಮೇಳನ ಹೊಂದಿದೆ. ಸಮ್ಮೇಳನವನ್ನು ವಾಷಿಂಗ್ಟನ್‌ ಡಿಸಿ ಮೆಟ್ರೋ ಪ್ರದೇಶದ ಕಾವೇರಿ ಕನ್ನಡ ಅಸೋಸಿಯೇಶನ್‌, ರಿಚ್ಮಂಡ್‌, ವರ್ಜೀನಿಯಾದ ರಿಚ್ಮಂಡ್‌ ಕನ್ನಡ ಸಂಘ ಮತ್ತು ಅಕ್ಕ ಅಧ್ಯಕ್ಷ ಅಮರನಾಥ್‌ ಗೌಡ ಅವರ ಪ್ರಾಯೋಜಕತ್ವದಲ್ಲಿ ನಡೆಸಲಾಗುತ್ತಿದೆ.

Advertisement

ಸಮ್ಮೇಳನವು ಆ.31ರ ಬೆಳಗ್ಗೆ 7 ಗಂಟೆಗೆ ಮೆರವಣಿಗೆಯೊಂದಿಗೆ ಆರಂಭವಾಗುತ್ತದೆ. ಮೆರವಣಿಗೆ 5ನೇ ಮತ್ತು ಲೀ ರಸ್ತೆಗಳ ಮೂಲಕ ಜಾಕ್ಸನ್‌ ವಾರ್ಡ್‌ ಪ್ರದೇಶದಲ್ಲಿ ತೆರಳಲಿದೆ. ಇದು ಅರ್ಧ ಮೈಲಿ ದೂರವನ್ನು ಹೊಂದಿರುತ್ತದೆ ಮತ್ತು ಇದು ಸುಮಾರು ಒಂದು ಗಂಟೆ ಕಾಲ ನಡೆಯುತ್ತದೆ, ಇದನ್ನು ಈ ಸಮಾರಂಭದ ಉದ್ಘಾಟನೆ ಎಂದೂ ಕರೆಯಬಹುದು. ನೃತ್ಯ ನಾಟಕಗಳು, ಬಾಲೆ ಮತ್ತು ಹಾಡುಗಾರಿಕೆ ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿವೆ.

ಈ ವರ್ಷದ ಪ್ರಮುಖ ಆಕರ್ಷಣೆಗಳು
ಹೊಂಬಾಳೆ ಫಿಲಂ ಅವರಿಂದ ಅಪ್ಪು ನೈಟ್‌, ಡಾ| ವಿದ್ಯಾಭೂಷಣ ಅವರಿಂದ ದಾಸ ಲಹರಿ, ನೂರೊಂದು ನೆನಪು – ಗಾನ ಗಾರುಡಿಗ ಡಾ|ಎಸ್‌ಪಿಬಿ ಸಂಗೀತೋತ್ಸವ. ರಾಜೇಶ್‌ ಕೃಷ್ಣ ಮತ್ತು ತಂಡದವರಿಂದ, ಕಾಮಿಡಿ ಕಿಲಾಡಿಗಳು, ಏಕಲವ್ಯ ನೃತ್ಯ ನಾಟಕ, ಬೆರಳ್‌ ಗೆ ಕೊರಳ್‌ ನಾಟಕ, ಕೃಷ್ಣ ನೃತ್ಯ ನಾಟಕ, ಬ.ರಾ. ಸುರೇಂದ್ರ ಅವರ ಕುಬೇರನ ಗರ್ವಭಂಗ, ಸ್ಥಳೀಯ ವಿವಿಧ ಕನ್ನಡದ ಸಂಘಗಳಿಂದ ಅನೇಕ ಕಾರ್ಯಕ್ರಮಗಳು.

ಸಮ್ಮೇಳನವು ಕ್ರೀಡೆಗಳಾದ ಕ್ರಿಕೆಟ್‌, ಪಿಕಲ್‌ ಬಾಲ್‌, ಗಾಲ್ಫ್ ಮತ್ತು ಚೆಸ್‌ಗೇಮ್‌ ಗಳನ್ನು ಒಳಗೊಂಡಿದ್ದು, ವಿಜೇತರಿಗೆ ಬಹುಮಾನ ನೀಡಲಾಗುತ್ತದೆ. ಪರ್ಯಾಯ ಸಮಯದಲ್ಲಿ, ಬಿಸಿನೆಸ್‌, ಮೆಡಿಸಿನ್‌ ಸೇರಿದಂತೆ ಏಳು ವಿವಿಧ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ಹಿಂದಿನ ಅಕ್ಕ ವಿಶ್ವ ಕನ್ನಡ ಸಮ್ಮೇಳನಗಳು ಟೆಕ್ಸಾಸ್‌ನ ಹ್ಯೂಸ್ಟನ್‌, ಮಿಷಿಗನ್‌, ಓರ್ಲನ್ಡ್ ಪ್ಲಾರಿಡಾ, ವಾಷಿಂಗ್ಟನ್‌ ಡಿ.ಸಿ., ಶಿಕಾಗೋ, ನ್ಯೂಜೆರ್ಸಿ, ಅಟ್ಲಾಂಟ, ಡಲ್ಲಸ್‌ ಟೆಕ್ಸಸ್‌, ಕ್ಯಾಲಿಫೋರ್ನಿಯಾದ ಸಾನ್‌ಜೋಸ್‌ ನಗರಗಳಲ್ಲಿ ನಡೆದಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next