Advertisement

Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ

01:36 PM Sep 21, 2024 | Team Udayavani |

ಅಮೆರಿಕದ ಉತ್ತರ ಕ್ಯಾರೋಲಿನಾ ರಾಜ್ಯದ ಮೊರೀಸ್ವಿಲ್‌ ನಗರದ ಮೇಯರ್‌ ಟಿ.ಜೆ. ಕಾಲಿಯವರು ಇದೇ ಸೆ.7ರಂದು, ಕನ್ನಡ ಕಲಾಶ್ರೀ, ನೃತ್ಯಗುರು, ಕ್ರಿಕೆಟ್‌ ಪೋಷಕಿ, ಸಮಾಜ ಸೇವಕಿ ಸುಪ್ರಿಯಾ ದೇಸಾಯಿ ಅವರ ಸತತ ಮೂರು ದಶಕಗಳ ನಿರಂತರ ಸೇವೆಯನ್ನು ಗುರುತಿಸಿ ಪ್ರತಿಷ್ಠಿತ ಮಾನ್ಯತಾ ಪತ್ರ (Proclamation) ಕೊಟ್ಟು ಸಮ್ಮಾನಿಸಿದರು.

Advertisement

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಇವರು 33 ವರ್ಷಗಳ ಹಿಂದೆ ಉತ್ತರ ಕ್ಯಾರೋಲಿನಾದ ರಿಸರ್ಚ್‌ ಟ್ರೈ ಆಂಗಲ್‌ ಪ್ರದೇಶಕ್ಕೆ ವಲಸೆ ಹೋಗಿ, ಅಪಾರ ಸಾಧನೆಗಳನ್ನು ಮತ್ತು ಸಮಾಜ ಸೇವೆಯನ್ನು ಮಾಡಿದ್ದಾರೆ. ಭರತನಾಟ್ಯ ಮತ್ತು ಕುಚಿಪುಡಿ ನೃತ್ಯಗುರು ಸುಪ್ರಿಯಾ ದೇಸಾಯಿಯವರು 1993ರಲ್ಲಿ ತಮ್ಮ ನೃತ್ಯಶಾಲೆ “ಪಾಯಲ್‌ ಡಾನ್ಸ್ ಅಕಾಡೆಮಿ’ಯನ್ನು ಸ್ಥಾಪಿಸಿ ಸಾವಿರಾರು ಮಕ್ಕಳಿಗೆ ನೃತ್ಯ ಕಲಿಸಿದ್ದಾರೆ.

ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕ್ರಿಕೆಟ್‌ ಪ್ರಚಾರ ಮಾಡುವಲ್ಲಿ, ಬರಹಗಾರರಾಗಿ ಮತ್ತು ಕ್ರೀಡಾ ವಕ್ತಾರರಾಗಿ ಇವರು ವಹಿಸಿರುವ ಪಾತ್ರವು ಅಪಾರವಾಗಿದೆ. ಮೊರೀಸ್ವಿಲ್‌ ನಗರವನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೇಂದ್ರವನ್ನಾಗಿ ರೂಪಿಸಲು ಹಗಳಿರಲು ದುಡಿದಿದ್ದಾರೆ.

ಕನ್ನಡ ಸೇವೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಗಿಟ್ಟಿರುವ ಇವರು ಪ್ರತಿಷ್ಠಿತ “ಅಕ್ಕ’ (ಅಮೆರಿಕನ್‌ ಕನ್ನಡ ಕೂಟಗಳ ಒಕ್ಕೂಟ) ಸಂಸ್ಥೆಯ ಸಂಸ್ಥಾಪಕ ಸದಸ್ಯರು ಹಾಗೂ ಮೊದಲ ಖಜಾಂಚಿ. ಹಲವಾರು ಅಕ್ಕ ವಿಶ್ವ ಕನ್ನಡ ಸಮ್ಮೇಳನಗಳನ್ನು ಆಯೋಜಿಸುವಲ್ಲಿ ವಿವಿಧ ಕಮಿಟಿಗಳ ನಾಯಕತ್ವ ವಹಿಸಿದ್ದಾರೆ.

Advertisement

ಇವರು ಅತ್ಯುತ್ತಮ ನಾಯಕಿ. ಉತ್ತರ ಕ್ಯಾರೋಲಿನಾ ರಾಜ್ಯದ “ಸಂಪಿಗೆ’ ಕನ್ನಡ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿ ಮತ್ತು ಪ್ರಥಮ ಅಧ್ಯಕ್ಷೆಯಾಗಿ ಕನ್ನಡ ಸೇವೆಯನ್ನು ಮಾಡಿದ್ದಾರೆ. ಅವರ ಮೇಲಿನ ಎಲ್ಲ ಸಾಧನೆಗಳನ್ನು ಮೆಚ್ಚಿಕೊಂಡು, ಮೊರಿಸ್ವಿಲ್ಲ ನಗರವು ಆ.13ರಂದು ಇವರಿಗೆ ಸಮ್ಮಾನ ಪದಕ ಘೋಷಣೆ ಮಾಡಿತ್ತು. ಸೆ. 7ರಂದು ನಡೆದ ಸಮಾರಂಭದಲ್ಲಿ ಮೇಯರ್‌ ಟಿ.ಜೆ. ಕಾಲಿಯವರು ಸುಪ್ರಿಯಾ ದೇಸಾಯಿರ ಸಾಧನೆಗಳನ್ನು ಮೆಚ್ಚಿ, ಹೊಗಳಿ, ಪ್ರಶಸ್ತಿ ಪ್ರದಾನ ಮಾಡಿದರು.

ವರದಿ: ಬೆಂಕಿ ಬಸಣ್ಣ , ನ್ಯೂಯಾರ್ಕ್‌

Advertisement

Udayavani is now on Telegram. Click here to join our channel and stay updated with the latest news.

Next