Advertisement

Desi Swara:  ಸಾಮಾಜಿಕ ಮಾಧ್ಯಮ ಹಾಗೂ ವಿಭಿನ್ನ ವರ್ತನೆಗಳು

12:40 PM Jul 27, 2024 | Team Udayavani |

ಸಾಮಾಜಿಕ ಮಾಧ್ಯಮದಲ್ಲಿ ನಾವು ಕೆಲವರು ತಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಹಂಚಿಕೊಳ್ಳುವ ಉತ್ಸಾಹದಲ್ಲಿರುವುದನ್ನು ನೋಡುತ್ತೇವೆ, ಇನ್ನು ಕೆಲವರು ಶಾಂತವಾಗಿಯೇ ಇರುವರು. ಸಾಮಾಜಿಕ ಮಾಧ್ಯಮ ಹಾಗೂ ವರ್ತನೆಗಳಲ್ಲಿ ಏಕೆ ಈ ತಾರತಮ್ಯ? ಏಕೆ ಕೆಲವರು ತಮ್ಮ ಭಾವನೆಗಳನ್ನು ತೆರೆದಿಡಲು ಇಚ್ಛಿಸುತ್ತಾರೆ ಮತ್ತು ಇತರರು ಮೌನವಾಗಿರಲು ಇಚ್ಛಿಸುತ್ತಾರೆ? ನಮ್ಮ ಸ್ನೇಹಿತರು ಮತ್ತು ಕುಟುಂಬದವರು ಕೆಲವರು ತತ್‌ಕ್ಷಣವೇ ಲೈಕ್‌ ಮತ್ತು ಕಾಮೆಂಟ್‌ ಮಾಡುತ್ತಾರೆ ಆದರೆ ಇನ್ನು ಕೆಲವರು ಮೌನವಾಗಿರುವುದು ಯಾಕೆ? “ಅವರು ಏನೂ ಹೇಳುವುದಿಲ್ಲವೇಕೆ? ಲೈಕ್‌ ಅಥವಾ ಕಾಮೆಂಟ್‌ ಏಕೆ ಮಾಡುವುದಿಲ್ಲ? “ಒಂದು ಲೈಕ್‌ ಹಾಕಿದರೆ ಏನು ಗಂಟು ಹೋಗುತ್ತೆ?’ ಎಂಬ ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಕಾಡಬಹುದು.

Advertisement

ಈ ವಿವಿಧ ವರ್ತನೆಗಳ ಹಿಂದಿನ ಮನೋವಿಜ್ಞಾನವನ್ನು ಅರ್ಥಮಾಡಿಕೊಳ್ಳುವುದು ಬಹಳ ಆಸಕ್ತಿದಾಯಕ ಮತ್ತು ಮುಖ್ಯ. ಏಕೆ ಕೆಲವರು ಎಲ್ಲವನ್ನೂ ತೋರಿಸಿಕೊಳ್ಳುತ್ತಾರೆ ಮತ್ತು ಕೆಲವರು ಏನನ್ನೂ ತೋರಿಸುವುದಿಲ್ಲ? ಕೆಲವರು ತಮ್ಮ ಮೇಲೆ ಅತ್ಯಂತ ಆತ್ಮವಿಶ್ವಾಸ ಹೊಂದಿರುತ್ತಾರೆ ಮತ್ತು ಇತರರಿಂದ ಒಪ್ಪಿಗೆಯನ್ನು ಪಡೆಯಲು ಇಚ್ಛಿಸುತ್ತಾರೆ.

ಅವರ ಸಾಧನೆಗಳನ್ನು, ಅನುಭವಗಳನ್ನು ಹಂಚಿಕೊಳ್ಳುವುದು ಅವರಿಗೊಂದು ಸಂತೋಷವನ್ನು ನೀಡುತ್ತದೆ. ತಮ್ಮ ಆದರ್ಶಗಳು ಮತ್ತು ಸಾಧನೆಗಳು ಇತರರಿಗೆ ತಿಳಿಯಲು ಇಚ್ಛಿಸುವವರು ಹೆಚ್ಚು ದೃಶ್ಯತೆಯ ಆವಶ್ಯಕತೆಯನ್ನು ಹೊಂದಿರುತ್ತಾರೆ. ಅವರ ಫೋಟೋಗಳು, ಪೋಸ್ಟ್‌ಗಳು ಮತ್ತು ವೀಡಿಯೋಗಳು ಅವರನ್ನು ಗಮನಕ್ಕೆ ತರಲು ಸಹಾಯ ಮಾಡುತ್ತವೆ.

ಕೆಲವು ಜನರು ಸಾಮಾಜಿಕ ಸ್ವೀಕಾರವನ್ನು ಹೆಚ್ಚಿಸಲು, ಆನಂದ ಪಡೆಯಲು ಮತ್ತು ತಮ್ಮನ್ನು ಸುತ್ತಮುತ್ತಲಿನವರಿಗೆ ತೋರಿಸಲು ಇಚ್ಛಿಸುತ್ತಾರೆ. ಕೆಲವರು ತಮ್ಮ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿರಿಸಲು ಇಚ್ಛಿಸುತ್ತಾರೆ. ಅವರಿಗಿದು ಬಹಿರಂಗವಾಗಿ ಹಂಚಿಕೊಳ್ಳುವುದು ಅಪಾಯಕಾರಿ ಎಂದು ಭಾವಿಸುತ್ತಾರೆ. ಕೆಲವು ಜನರಿಗೆ ತಮ್ಮನ್ನು ಹೇಗೆ ತೋರಿಸಿಕೊಳ್ಳಬೇಕು ಎಂಬುದರ ಮೇಲೆ ನಿಗದಿತ ಧೈರ್ಯವಿರಬಹುದು. ಅವರಿಗಿದು ತೊಂದರೆ ನೀಡಬಹುದು ಎಂದು ಭಾವಿಸುತ್ತಾರೆ.

Advertisement

ಕೆಲವು ಜನರಿಗೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಜೀವನದ ಬಗ್ಗೆ ತೋರಿಸುವುದು ಅನಗತ್ಯವೆಂದು ಭಾಸವಾಗಬಹುದು. ತಮ್ಮ ಫೋಟೋ ಹಾಗೂ ವೀಡಿಯೋಗಳು ದುರುಪಯೋಗವಾಗಬಹುದು ಅಥವಾ ಬೇರೆಯವರು ನಮ್ಮ ಮೇಲೆ ಕೆಟ್ಟ ದೃಷ್ಟಿ ಬೀರಬಹುದು ಎಂಬ ಹಿಂಜರಿಕೆ ಇರಬಹುದು. ಕೆಲವರು ಸಾಮಾಜಿಕ ಮಾಧ್ಯಮವನ್ನು ಕೇವಲ ವೀಕ್ಷಣೆಯ ಸಲುವಾಗಿಯೇ ಬಳಸುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಹಂಚಿಕೊಳ್ಳುವುದಿಲ್ಲ. ಅವರು ಎದುರಿಗೆ ಸಿಕ್ಕಾಗ ಅಥವಾ ಕರೆಗಳ ಮೂಲಕ ತಮ್ಮ ಬಗ್ಗೆ ಹೇಳಲು ಇಚ್ಛಿಸಬಹುದು.

ಲೈಕ್‌ ಮತ್ತು ಕಾಮೆಂಟ್‌
ಕೆಲವರು ತಮ್ಮ ಅಭಿಪ್ರಾಯವನ್ನು ತತ್‌ಕ್ಷಣವೇ ಹಂಚಿಕೊಳ್ಳಲು ಇಚ್ಛಿಸುತ್ತಾರೆ. ಇದರಿಂದಾಗಿ ಅವರು ಹೆಚ್ಚು ಲೈಕ್‌ ಮತ್ತು ಕಾಮೆಂಟ್‌ ಮಾಡುತ್ತಾರೆ. ಕೆಲವರು ಬಹಳ ವ್ಯಕ್ತಿಗತವಾಗಿ ತಮ್ಮ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ. ಅವರಿಗದು ಭಾಸವಾಗುವ ಮುನ್ಸೂಚನೆಯಿಲ್ಲದೆ ಬೇರೆಯವರ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ.ಅವರಿಗೆ ನಿಮ್ಮ ಪೋಸ್ಟ್‌ ಇಷ್ಟ ಆಗಿರಬಹುದು, ಆಗದೆ ಇರಬಹುದು, ಏನೂ ಅನಿಸದಿರಬಹುದು. ಅವರು ಅದನ್ನು ಹೇಳಬಯಸುವುದಿಲ್ಲ. ಅದು ಅವರ ಹಕ್ಕು ಮತ್ತು ಆಯ್ಕೆ.

ಕೆಲವರು ತಮ್ಮ ಸ್ನೇಹಿತರೊಂದಿಗೆ ಮತ್ತು ಕುಟುಂಬದ ಸದಸ್ಯರೊಂದಿಗೆ ಹೆಚ್ಚು ನಿಕಟತೆಯನ್ನು ಹೊಂದಲು ಇಚ್ಛಿಸುತ್ತಾರೆ, ಅವರ ಪ್ರತಿಕ್ರಿಯೆಗಳು ಸಂಬಂಧವನ್ನು ಮತ್ತಷ್ಟು ಬಲಪಡಿಸಬಹುದು. ಕೆಲವರು ಸಾಮಾಜಿಕ ಮಾಧ್ಯಮವನ್ನು ಕೇವಲ ವೀಕ್ಷಣೆಯ ಸಲುವಾಗಿಯೇ ಬಳಸುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಬಹಿರಂಗವಾಗಿ ಹಂಚಿಕೊಳ್ಳುವುದಿಲ್ಲ. ಕೆಲವರು ಬಹಳ ವ್ಯಕ್ತಿಗತವಾಗಿ ತಮ್ಮ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಾರೆ. ಅವರಿಗದು ಭಾಸವಾಗುವ ಮುನ್ಸೂಚನೆಯಿಲ್ಲದೆ ಬೇರೆಯವರ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ.

ಸಾಮಾಜಿಕ ಮಾಧ್ಯಮದಲ್ಲಿ ಎಲ್ಲವನ್ನೂ ತೋರಿಸುವವರು ಮತ್ತು ಏನೂ ತೋರಿಸದವರು, ಲೈಕ್‌ ಮತ್ತು ಕಾಮೆಂಟ್‌ ಮಾಡುವವರು ಮತ್ತು ಶಾಂತವಾಗಿ ಇರುವವರು ಎನ್ನುವ ಗುಣಲಕ್ಷಣಗಳು ಮನುಷ್ಯರ ಮನೋವಿಜ್ಞಾನದಿಂದ ಮೌಲ್ಯಮಾಪನ ಮಾಡಬಹುದು.

ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಏನೆಂದರೆ, ಇದು ಕೇವಲ ವ್ಯಕ್ತಿಗಳ ವರ್ತನೆಯಲ್ಲಿ ಇರುವ ಭಿನ್ನತೆ ಮಾತ್ರ, ಯಾರದು ಸರಿ ಅಥವಾ ತಪ್ಪು ಎನ್ನುವುದಲ್ಲ. ಈ ಭಿನ್ನತೆಯನ್ನು ಒಪ್ಪಿಕೊಂಡು, ನಾವು ಎಲ್ಲರೊಂದಿಗೆ ಉತ್ತಮ ರೀತಿಯ ಸಂಪರ್ಕವನ್ನು ಬೆಳೆಸಬಹುದು, ಇದರಿಂದ ಉತ್ತಮ ಸಂಬಂಧಗಳು ಮತ್ತು ಸೌಹಾರ್ದವನ್ನು ಬೆಳೆಸಬಹುದು. ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಿಯ ವರ್ತನೆಯ ಆಧಾರದ ಮೇಲೆ ನಾವು ಜನರನ್ನು ವಿಭಜನೆ ಮಾಡಬಾರದು.

ಪ್ರತಿಯೊಬ್ಬ ವ್ಯಕ್ತಿಯು ವಿಶಿಷ್ಟವಾಗಿರುತ್ತಾರೆ ಮತ್ತು ಅವರ ತೀರಾ ವೈಯಕ್ತಿಕ ಆಯ್ಕೆಗಳನ್ನು ಗೌರವಿಸುವುದು ಮುಖ್ಯವಾಗಿದೆ. ಆದ್ದರಿಂದ ನಾವು ಸಾಮಾಜಿಕ ಮಾಧ್ಯಮದಲ್ಲಿ ಕಂಡುಬರುವ ಪ್ರತಿಯೊಬ್ಬರಿಗೂ ಶ್ರದ್ಧೆಯಿಂದ ವರ್ತಿಸಬೇಕು ಮತ್ತು ಅವರ ವೈಯಕ್ತಿಕ ಆಯ್ಕೆಯನ್ನು ಗೌರವಿಸಬೇಕು. ಅವರ ಸೋಶಿಯಲ್‌ ಮೀಡಿಯಾ ನಡೆಗೆ ಹೆಚ್ಚು ಪ್ರಾಮುಖ್ಯ ನೀಡದೆ, ಅವರೊಂದಿಗೆ ನಮ್ಮ ಸಂಬಂಧವನ್ನು ಹೃದಯಪೂರ್ವಕವಾಗಿ ತೊಡಗಿಸಿಕೊಳ್ಳುವುದು ಶ್ರೇಯಸ್ಕರ. ಇದರಿಂದ ನಮ್ಮ ಸ್ನೇಹ ಮತ್ತು ಸಂಬಂಧಗಳು ಸದೃಢವಾಗಿರುತ್ತವೆ.

*ತುರುವೇಕೆರೆ ಮಂಜುನಾಥ, ಮಿಲ್ಟನ್‌ಕೇನ್ಸ್‌

Advertisement

Udayavani is now on Telegram. Click here to join our channel and stay updated with the latest news.

Next