Advertisement

Desi Swara: ಬಾಲ್ಯದ ನೆನಪು ತಂದ ನೃತ್ಯ

05:14 PM Jul 20, 2024 | Team Udayavani |

ಗ್ರೀಸ್‌ನ ಅಥೆನ್ಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ನೃತ್ಯ ಕಾಂಗ್ರೆಸ್‌ನ ಕಾರ್ಯಕ್ರಮ ನನ್ನ ಬಾಲ್ಯದ ಸ್ವಚ್ಚಂದ ದಿನಗಳನ್ನು ಮೆಲುಕು ಹಾಕುವಂತೆ ಮಾಡಿತು.ಸುಮಾರು 25 ವರ್ಷಗಳ ಅನಂತರ ನಾನು ನೂರಾರು ಕಲಾ ರಸಿಕರ ಮುಂದೆ ಮತ್ತೆ ನೃತ್ಯ ಪ್ರದರ್ಶನ ಮಾಡುವ ಸುಸಂದರ್ಭ ನನಗೆ ಒದಗಿ ಬಂತು.

Advertisement

ಈ ಮಹಾ ಸಭೆ ನೃತ್ಯದ ಎಲ್ಲ ಪ್ರಕಾರಗಳು, ಎಲ್ಲ ವಿಧಾನಗಳು (ಸಂಶೋಧನೆ, ಪ್ರದರ್ಶನ, ಬೋಧನೆ, ಚಿಕಿತ್ಸೆ, ಮನರಂಜನೆ ಇತ್ಯಾದಿ) ಇಲ್ಲಿ ಪ್ರಸ್ತುತ ಪಡಿಸಲಾಗುತ್ತದೆ. 5 ಖಂಡಗಳ 40 ದೇಶಗಳಿಂದ ಸುಮಾರು 300 ವೃತ್ತಿಪರರು ಪ್ರತೀ ಕಾಂಗ್ರೆಸ್‌ಗೆ ಹಾಜರಾಗುತ್ತಾರೆ; ವೈಜ್ಞಾನಿಕ ಸಮಿತಿಯಲ್ಲಿ 9 ದೇಶಗಳ 12 ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಿದ್ದು ಇದು ಅತೀ ದೊಡ್ಡ ಹಾಗೂ ಹಳೆಯ ಸಮ್ಮೇಳನ ಎಂದರೆ ತಪ್ಪಾಗಲಾರದು.

ತಕಜುಮ್‌ ನೃತ್ಯ ಶಾಲೆಯ ಸಂಸ್ಥಾಪಕಿ ಹಾಗೂ ನಮ್ಮ ಮಾರ್ಗದರ್ಶಿ ಡಾ| ವಿಜಯಲಕ್ಷ್ಮೀ ವಳ್ಳಿದತ್ತು ಅವರ ಪರಿಶ್ರಮ ಹಾಗೂ ತಂಡದ ಸದಸ್ಯರಾದ ಭವ್ಯ ಸರಯು, ಅನುಷಾ, ಗೀತಾ ರವೀಂದ್ರನ್‌, ಜ್ಯೋಷ್ನಾ ದಾಸರಿ, ಶರಣ್ಯ ವರ್ಮಾ (ಶಾಸ್ತ್ರೀಯ ಗಾಯಕಿ), ಸ್ಪರ್ಶ ಸುರೇಶ್‌ (ನೃತ್ಯ ಸಂಯೋಜನೆ), ಸಮಂತಾ ಸತೀಶ್‌, ರಶ್ಮಿ ಜೋಶಿ ಅವರಿಂದ 10 ನಿಮಿಷಗಳ ನೃತ್ಯದ ರೂಪಕ ಶಾಂತಿಯ ಸಂದೇಶವನ್ನು ತಾಯಿ ಮಗಳ ಸಂಬಂಧ, ದುಷ್ಟರಿಂದ ನಾಶವಾದ ಮಗುವಿನ ಮುಗ್ಧತೆಯನ್ನು ಚಿತ್ರಿಸುವ ಮೂಲಕ ವ್ಯಕ್ತಪಡಿಸಿದರು. ಲೈವ್‌ ಗಾಯನ ಕೇವಲ ನಮ್ಮ ಪ್ರಸ್ತುತಿಯಲ್ಲಿ ಮಾತ್ರ ಇತ್ತು ಅನ್ನುವುದು ಹೆಮ್ಮಯ ವಿಷಯ. ಇಂತಹ ಲೈವ್‌ ವೋಕಲ್‌ ಗಾಯನ ಪಕ್ಕ ವಾದ್ಯಗಳ ಜತೆ ನೃತ್ಯ ಮಾಡಿದ್ದೂ ಹದಿವಯಸ್ಸಿನಲ್ಲೇ !

9 ವರ್ಷ ವಯಸ್ಸನವಳಾಗಿದ್ದಾಗ ನಾನು ನೃತ್ಯವನ್ನು ಕಲಿಯಲು ಪ್ರಾರಂಭಿಸಿದೆ. ಸಿನೆಮಾ ಹಾಗೂ ದೂರದರ್ಶನದಲ್ಲಿ ನೋಡಿ ಅನುಕರಣೇ ಮಾಡುತ್ತಿದೆ. ನಿಧಾನವಾಗಿ ಉತ್ಸಾಹವು ಬೆಳೆಯಿತು ಮತ್ತು ನನ್ನ ತಂದೆ ತಾಯಿಯ ನಿರಂತರ ಬೆಂಬಲದೊಂದಿಗೆ ನಾನು ಸಮರ್ಥ ಗುರುಗಳ ಅಡಿಯಲ್ಲಿ ಕಲಿಕೆಯನ್ನು ಮುಂದುವರಿಸಿದೆ.

Advertisement

ಸರಸ್ವತಿ ದೇವಿಯ ಆಶೀರ್ವಾದ ಹಾಗೂ ನನ್ನ ಅದೃಷ್ಟ ಈಗ ಮತ್ತೆ ನನ್ನ ಹವ್ಯಾಸವನ್ನು ಮುಂದುವರೆಸಲು ಸಾಧ್ಯವಾಗಿದೆ. ಸುಮಾರಿ 15 ವರ್ಷಗಳ ಅಲ್ಪವಿರಾಮದ ಅನಂತರ ಕೋವಿಡ್‌ ಸಮಯದಲ್ಲಿ ನಾನು ನೃತ್ಯವನ್ನು ಮುಂದುವರಿಸಲು ಪ್ರಾರಂಭಿಸಿದಾಗ ನಾನು ಈ ಗೌರವಾನ್ವಿತ ಸಮಾರಂಭದಲ್ಲಿ ಪ್ರದರ್ಶನ ನೀಡುತ್ತೇನೆ ಎಂದು ಊಹಿಸಿರಲಿಲ್ಲ ಅಥವಾ ಕನಸು ಕಂಡಿರಲಿಲ್ಲ. ದೇವರ ಹಾಗೂ ಗುರು ಹಿರಯರ ಆಶೀರ್ವಾದಕ್ಕಾಗಿ ಧನ್ಯವಾದ ಹೇಳುತ್ತೇನೆ. ಈ ಎರಡನೇ ಅವಕಾಶವು ನನಗೆ ಕೊಡುಗೆಯಾಗಿದೆ, ಕಲೆಯನ್ನು ಮುಂದು ಒರೆಸಲು ಹಾಗೂ ಅಳಿಲು ಸೇವೆಯನ್ನು ಮಾಡಲು ನನಗೆ ಶಕ್ತಿಯನ್ನು ಕೊಡಲೆಂದು ಪ್ರಾರ್ಥಿಸುತ್ತೇನೆ.

ಪ್ರಪಂಚದಾದ್ಯಂತದಿಂದ ಬಂದ ಶ್ರೇಷ್ಠ ಕಲಾವಿದರೊಂದಿಗೆ ಪ್ರತಿಷ್ಠಿತ ವೇದಿಕೆ ಹಂಚಿಕೊಳ್ಳುವ ಅವಕಾಶಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ. ಇಂತಹ ಅನುಭವವು ಬಹಳ ಶ್ರೀಮಂತ ಮತ್ತು ಲಾಭದಾಯಕವಾಗಿದೆ. ಪ್ರಪಂಚದ ಎಲ್ಲ ಭಾಗಗಳ ಸಹ ನೃತ್ಯಗಾರರನ್ನು ಭೇಟಿಯಾಗುವುದು, ವಿಭಿನ್ನ ನೃತ್ಯ ಸಂಸ್ಕೃತಿಗಳನ್ನು ನೋಡಿ ತಿಳಿಯುವುದು ಮತ್ತು ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ಒಟ್ಟಾರೆ ಅನುಭವವು ಅವಿಸ್ಮರಣೀಯ.

*ರಶ್ಮಿ ಜೋಶಿ, ಜರ್ಮನಿ

Advertisement

Udayavani is now on Telegram. Click here to join our channel and stay updated with the latest news.

Next