Advertisement

ಪರ್ಯಾಯ ಉತ್ಸವಕ್ಕೆ ಕಣ್ಮನ ಸೆಳೆವ ದೇಸೀ ಶೈಲಿಯ ಅಲಂಕಾರ

12:47 AM Jan 12, 2020 | mahesh |

ಉಡುಪಿ: ಪರ್ಯಾಯ ಉತ್ಸವದ ನಿಮಿತ್ತ ನಗರ ಕಳೆಗಟ್ಟುತ್ತಿದ್ದು, ಮೆರವಣಿಗೆ ಹಾದು ಬರುವ ಮಾರ್ಗದಲ್ಲಿ ಸಾಂಪ್ರದಾಯಿಕ ಅಲಂಕಾರಕ್ಕೆ ಆದ್ಯತೆ ನೀಡಲಾಗಿದೆ.

Advertisement

ಬಾಳೆಗಿಡದ ಆಕರ್ಷಣೆ
ಪುರಪ್ರವೇಶಕ್ಕೆ ಮಾಡಿದ ಅಲಂಕಾರ ಕೆಲ ಭಾಗಗಳನ್ನು ಪರ್ಯಾಯ ದಿನದ ಮೆರವಣಿಗೆಗೆ ಬದಲಾಯಿ ಸಲಾಗುತ್ತದೆ. ಜ. 17ರಂದು ಇಲ್ಲಿ ತಳಿರುತೋರಣ, ಬಾಳೆಗಿಡಗಳನ್ನು ಹಾಕಲಾಗುವುದು. ಪುರಪ್ರವೇಶಕ್ಕೆ ಹಾಕಿದ ಬಾಳೆಗಿಡಗಳನ್ನು ಬುಡಸಹಿತ ಕಿತ್ತು ತಂದ ಕಾರಣ ಅವ‌ನ್ನು ವಾಪಸು ನೆಡಲಾಗಿದೆ. ಪರ್ಯಾಯ ಮೆರವಣಿಗೆ ದಿನವೂ ಬೇರುಸಹಿತ ಕಿತ್ತ ಬಾಳೆಗಿಡಗಳನ್ನು ತಂದು ನೆಡಲಾಗುವುದು ಮತ್ತು ಬಳಿಕ ವಾಪಸು ಆ ಗಿಡಗಳನ್ನು ತಂದ ಸ್ಥಳದಲ್ಲಿಯೇ ನೆಡಲಾಗುವುದು. ಬಾಳೆಗಿಡಗಳು ಹಾಳಾಗಬಾರದೆಂದು ಹೀಗೆ ಮಾಡಲಾಗಿದೆ.

ಪ್ಲಾಸ್ಟಿಕ್‌ ನಿಮೂಲನೆಗೆ ಪಣ ತೊಟ್ಟಂತಿರುವ ಶ್ರೀಕೃಷ್ಣಸೇವಾ ಬಳಗವು ಫ್ಲೆಕ್ಸ್‌ ಬ್ಯಾನರ್‌ಗಳಿಗೆ ಅವಕಾಶ ನೀಡಿಲ್ಲ. ಬ್ಯಾನರ್‌ ಮತ್ತು ಸ್ವಾಗತ ಕಮಾನುಗಳು ಪ್ಲಾಸ್ಟಿಕ್‌ರಹಿತವಾಗಿವೆ. 23 ದೊಡ್ಡ ಕಮಾನುಗಳು, 20 ಸಣ್ಣ ಕಮಾನುಗಳು ಸೇರಿದಂತೆ 43 ಕಮಾನುಗಳ ರಚನೆಯಾಗಿವೆ. ರಥಬೀದಿಯನ್ನು ಪ್ರವೇಶಿಸುವ ದಾರಿಯಲ್ಲಿ ಹಾಕಿದ ಕಮಾನುಗಳಲ್ಲಿ ಅದಮಾರು ಮಠದ ಹಿಂದಿನ 32 ಗುರುಗಳ ಹೆಸರುಗಳನ್ನು ಬರೆಯಲಾಗಿದೆ.

ಗೂಡುದೀಪಗಳ ಸೌಂದರ್ಯ
ಉಡುಪಿ ರಥಬೀದಿಯಿಂದ ಜೋಡುಕಟ್ಟೆವರೆಗೆ 400 ಕಂಬಗಳಲ್ಲಿ 800 ಗೂಡುದೀಪಗಳನ್ನು ಅಳವಡಿಸುವ ಕೆಲಸ ಶುಕ್ರವಾರ ರಾತ್ರಿಯಿಂದ ಆರಂಭಗೊಂಡಿದೆ. 100 ದೊಡ್ಡ ಬ್ಯಾನರ್‌ಗಳನ್ನು ಉಡುಪಿ ಸುತ್ತಮುತ್ತ, 70 ದೊಡ್ಡ ಬ್ಯಾನರ್‌ಗಳು ಮಂಗಳೂರಿನಿಂದ ಕುಂದಾಪುರದ ವರೆಗೆ, 200 ಸಣ್ಣ ಬ್ಯಾನರ್‌ಗಳು ಮಂಗಳೂರಿನಿಂದ ಕುಂದಾಪುರ, ಉಡುಪಿಯಿಂದ ಕಾರ್ಕಳದವರೆಗೆ ಕಟ್ಟಲಾಗಿದೆ. ಕಮಾನುಗಳ ಸುತ್ತ ಪ್ಲಾಸ್ಟಿಕ್‌ನಿಂದ ತಯಾರಿಸಿದ ಬಣ್ಣದ ಹೊದಿಕೆಯ ಬದಲು ಬಟ್ಟೆಗಳನ್ನೇ ಬಳಸಲಾಗಿದೆ. ಜನಪದ, ದೇಸೀ ಶೈಲಿ ಕಮಾನುಗಳಲ್ಲಿ ಕಾಣುತ್ತಿದೆ. ಶುಕ್ರವಾರ ರಾತ್ರಿಯಿಂದ ಬಂಟಿಂಗ್ಸ್‌ ಹಾಕಲಾಗುತ್ತಿದೆ. ಜೋಡುಕಟ್ಟೆಯಿಂದ ಕೇಸರಿ ಬಣ್ಣದ ಬಂಟಿಂಗ್‌ಗಳನ್ನು ಹಳೆಯ ಡಯಾನ ವೃತ್ತ, ಕೊಳದ ಪೇಟೆ, ತೆಂಕಪೇಟೆಯಲ್ಲಿ ಹಾಕಲಾಗಿದೆ. ಇನ್ನು ಕಲ್ಸಂಕ, ಬಡಗುಪೇಟೆ, ಪಾರ್ಕಿಂಗ್‌ ಪ್ರದೇಶದಲ್ಲಿ ಹಾಕಲಾಗುತ್ತದೆ. ಬಂಟಿಂಗ್ಸ್‌ ಎಲ್ಲವೂ ಬಟ್ಟೆಯಿಂದ ತಯಾರಿಸಿದ್ದಾಗಿದೆ. ಒಟ್ಟು 100 ಕೆ.ಜಿ. ಬಂಟಿಂಗ್ಸ್‌ಗಳನ್ನು ತರಿಸಲಾಗಿದೆ.

100ಕೆ.ಜಿ. ಬಟ್ಟೆ
ಒಟ್ಟು 100 ಕೆ.ಜಿ. ಬಟ್ಟೆಯ ಬಂಟಿಂಗ್ಸ್‌ ತರಿಸಿ ಪರ್ಯಾಯ ಮೆರವಣಿಗೆ ಬರುವ ಸ್ಥಳಗಳಲ್ಲಿ ಹಾಕಲಾಗುತ್ತಿದೆ. ಮುಂದೆ ಕಲ್ಸಂಕ ಮತ್ತು ರಾಜಾಂಗಣ ಪಾರ್ಕಿಂಗ್‌ ಪ್ರದೇಶ, ಬಡಗುಪೇಟೆಗೆ ಹಾಕಲಾಗುತ್ತದೆ.
-ಸುವರ್ಧನ ನಾಯಕ್‌, ಶ್ರೀಕೃಷ್ಣ ಸೇವಾ ಬಳಗ.

Advertisement
Advertisement

Udayavani is now on Telegram. Click here to join our channel and stay updated with the latest news.

Next