Advertisement
ಈ ಬಾರಿ ದೀಪಾವಳಿ ಹಬ್ಬವನ್ನು ಆತ್ಮನಿರ್ಭರ ಭಾರತ ಕಲ್ಪನೆಯಡಿ ಆಚರಿಸುವ ಸಲುವಾಗಿ ಉದಯವಾಣಿಯು “ದೇಸೀ ಆಕಾಶಬುಟ್ಟಿ ನಮ್ಮ ಪರಂಪರೆ’ ಎಂಬ ಪರಿಕಲ್ಪನೆಯೊಂದಿಗೆ ಪರಂಪರೆಯಿಂದ ಬಂದಿರುವ ಅಷ್ಟಪಟ್ಟಿ ಆಕಾಶಬುಟ್ಟಿಗೆ ಉತ್ತೇಜನ ನೀಡಲು ಮುಂದಾಗಿದೆ. ಕಡಿಮೆ ವೆಚ್ಚದಲ್ಲಿ ಮನೆಯಲ್ಲಿಯೇ ಸುಲಭದಲ್ಲಿ ಇದನ್ನು ತಯಾರಿಸಬಹುದಾಗಿದ್ದು, ಕುತೂಹಲಕ್ಕಾಗಿ ಒಂದು ಬಾರಿ ಪ್ರಯತ್ನಿಸಿದರೆ ಇದನ್ನು ಉದ್ಯೋಗವನ್ನಾಗಿಯೂ ಆಯ್ಕೆ ಮಾಡಿಕೊಳ್ಳಬಹುದು. ಮಾರುಕಟ್ಟೆಯಲ್ಲಿ ಈಗ ಉತ್ತಮ ಬೇಡಿಕೆಯೂ ಇದೆ. ಕೆಲವರಿಗೆ ಆಸಕ್ತಿ ಇದ್ದರೂ ಇದನ್ನು ತಯಾರಿಸುವ ಕುರಿತಂತೆ ಸರಿಯಾದ ಮಾಹಿತಿ ಇಲ್ಲದಿರುವುದರಿಂದ ಪರಿಣತರಿಂದ ಮಾಹಿತಿ ಸಂಗ್ರಹಿಸಿ ಉದಯವಾಣಿ ಸಮಗ್ರವಾಗಿ ಓದುಗರ ಮುಂದಿಡುತ್ತಿದೆ.
ಕಾಟನ್ ನೂಲು
ಸೀಮೆಕೋಲು ಕಡ್ಡಿ (ಕೆಲವೆಡೆ ಓಟೆ ಬಿದಿರು, ತೆಮೆ ಎಂದೂ ಕರೆಯುವರು)
ಬಣ್ಣದ ಕಾಗದ
ಬಣ್ಣದ ಬಾಲ
ಮೈದಾ ಪೇಸ್ಟ್
ಕತ್ತರಿ ಆಕಾಶಬುಟ್ಟಿ ರಚಿಸುವ ವಿಧಾನ
ಮೊದಲ ಹಂತ
ಸೀಮೆಕೋಲುಗಳನ್ನು ಮೊದಲು ಸಪೂರ (ಸ್ಲೇಟ್‌ನಲ್ಲಿ ಬರೆಯುವ ಕಡ್ಡಿಯಷ್ಟು ದಪ್ಪಕ್ಕೆ) ಕಡ್ಡಿಗಳನ್ನಾಗಿಸಬೇಕು. ಇಂತಹ 36 ಕಡ್ಡಿಗಳು ಅಗತ್ಯ. ಇವುಗಳಲ್ಲಿ ನಾಲ್ಕು ಕಡ್ಡಿ ಇತರ ಕಡ್ಡಿಗಳಿಗಿಂತ ಸುಮಾರು 9 ಸೆಂ. ಮೀ.ನಷ್ಟು ಉದ್ದ ಇರಬೇಕು. ಈ ನಾಲ್ಕು ಕಡ್ಡಿಗಳನ್ನು ಆಧಾರ ಕಡ್ಡಿ ಅಥವಾ ಈಗಿನ ಭಾಷೆಯಲ್ಲಿ ಪಿಲ್ಲರ್ ಕಡ್ಡಿ ಎನ್ನಬಹುದು. ಇಡೀ ಆಕಾಶಬುಟ್ಟಿ ಈ ನಾಲ್ಕು ಕಡ್ಡಿಗಳ ಮೇಲೆ ನಿಂತಿರುತ್ತದೆ. ಇತರ 32 ಕಡ್ಡಿಗಳು ಆಧಾರ ಕಡ್ಡಿಗಳಿಗಿಂತ ಸಣ್ಣದಾಗಿದ್ದು, ಒಂದೇ ಗಾತ್ರದಲ್ಲಿರಬೇಕು (ಆಧಾರ ಕಡ್ಡಿಗಳು 9 ಸೆಂ.ಮೀ. ಉದ್ದವಿದ್ದರೆ ಈ ಕಡ್ಡಿಗಳು 3 ಸೆಂ.ಮೀ. ಉದ್ದವಿರಬೇಕು.) ಒಟ್ಟು 32 ಅಲ್ಲದೆ ಎರಡು ಹೆಚ್ಚುವರಿ ಕಡ್ಡಿ ಮೇಣದ ದೀಪಗಳನ್ನು ಇಡುವುದಾದರೆ ಮಾತ್ರ ಬೇಕಾಗಿರುತ್ತದೆ. ಆಕಾಶಬುಟ್ಟಿಗೆ ಮೇಣದ ದೀಪವೇ ಚೆಂದ ಕಾಣುವುದಾದರೂ ಕೆಲವರು ತೀರಾ ಕಡಿಮೆ ಪ್ರಕಾಶದ ವಿದ್ಯುತ್ ಬಲ್ಬ್ಗಳನ್ನೂ ಬಳಸುತ್ತಾರೆ. ವಿದ್ಯುತ್ ಬಲ್ಬ್ ಹಾಕುವುದಾದರೆ ಈ ಎರಡು ಹೆಚ್ಚುವರಿ ಕಡ್ಡಿ ಬೇಕಾಗಿರುವುದಿಲ್ಲ.
Related Articles
ಸೀಮೆಕೋಲನ್ನು ಕಡ್ಡಿಗಳಾಗಿ ಸೀಲು ಅಥವಾ ತುಂಡು ಮಾಡಿದ ಬಳಿಕ ಅದರ ಬದಿಗಳನ್ನು ಸ್ವಲ್ಪ ದೊರಗು ಮಾಡಬಹುದು. ಮಕ್ಕಳು ಬಣ್ಣದ ಕಾಗದ ಹಚ್ಚುವಾಗ ಈ ಕಡ್ಡಿಯಲ್ಲಿ ಅಂಟಿಸುತ್ತಾ ವೇಗವಾಗಿ ಎಳೆದರೆ ಆಗ ಕೈಗೆ ಸೀಲಿದಂತೆ ಗಾಯವಾಗುವಷ್ಟು ಕೆಲವೊಮ್ಮೆ ಅದು ಹರಿತವಾಗಿರುತ್ತದೆ. ಇದರಿಂದ ತೊಂದರೆಯಾಗದಿರಲೆಂದು ದೊರಗು ಮಾಡುವುದು ಒಳ್ಳೆಯದು.
Advertisement
ಮೂರನೇ ಹಂತಕಡ್ಡಿಗಳನ್ನು ಸಿದ್ಧಪಡಿಸಿಕೊಂಡ ಬಳಿಕ ಆಧಾರ ಕಡ್ಡಿಗಳನ್ನು ಹೊರತುಪಡಿಸಿ ಇತರ ಕಡ್ಡಿಗಳನ್ನು ಚೌಕಾಕಾರವಾಗಿ ನೂಲಿನಿಂದ ಕಟ್ಟಿಕೊಳ್ಳಬೇಕು. 32 ಕಡ್ಡಿಗಳಿಂದ ಒಟ್ಟು 8 ಚೌಕಗಳನ್ನು ತಯಾರಿಸಿ. ಇವುಗಳೆಲ್ಲ ಒಂದೇ ರೀತಿಯಲ್ಲಿರಬೇಕು. ಅನಂತರ ಆಧಾರ ಕಡ್ಡಿಯಲ್ಲಿ ಅಳತೆ ಮಾಡಿ ಮಾರ್ಕ್ (ಗುರುತು) ಮಾಡಬೇಕು. ಅಂದರೆ ಮೇಲೆ ಮತ್ತು ಕೆಳಗಿನಿಂದ ಸಮಾನ ಅಂತರ (3 ಸೆಂ.ಮೀ.) ಬಿಡಬೇಕು. ಕಡ್ಡಿಯ ಒಂದೊಂದು ಬದಿ ಸಮಾನ ಅಂತರದ ಮೂರು ಮಾರ್ಕ್ ಮಾಡಬೇಕು. ಕಡ್ಡಿಯ ಒಳಬದಿಯಲ್ಲಿ ಬರುವ ಮಾರ್ಕ್‌ಗೆ ಚೌಕಾಕಾರದ ಪಟ್ಟಿಯನ್ನು ತುದಿಯಿಂದ ತುದಿಗೆ ಕಟ್ಟಬೇಕು. ನಾಲ್ಕೂ ಕಡ್ಡಿಗಳಿಗೆ ಚೌಕವನ್ನು ನೂಲಿನಿಂದ ಕಟ್ಟಿದ ಬಳಿಕ ಆಧಾರ ಕಡ್ಡಿಯಲ್ಲಿ ಅದನ್ನು ನಿಲ್ಲಿಸಿ ಅದರ ಉಳಿದ ತುದಿಯನ್ನು ಒಂದಕ್ಕೊಂದು ಜೋಡಿಸಬೇಕು. ನೀವು ಹೊಸದಾಗಿ ಮಾಡುತ್ತಿರುವುದರಿಂದ ಈ ರೀತಿ ನಿಲ್ಲಿಸಿ ಕಟ್ಟುವಾಗ ಆಧಾರ ಕಡ್ಡಿಗಳನ್ನು ಹಿಡಿಯಲು ಮತ್ತೋರ್ವರ ಸಹಾಯ ಪಡೆದರೆ ಸುಲಭವಾಗುತ್ತದೆ. ಇಷ್ಟಾಗುವಾಗ ಇದು ಆಕಾಶಬುಟ್ಟಿಯ ರೂಪ ಪಡೆಯುತ್ತದೆ.