Advertisement

ದೇಸಿ ಹಸು ಸಾಕಾಣಿಕೆ ಲಾಭದಾಯಕ

03:22 PM Feb 15, 2021 | Team Udayavani |

ಕನಕಪುರ: ದೇಸಿ ತಳಿ ಹಸು ಸಾಕಾಣಿಕೆಯಿಂದ ರೈತರಿಗೆ ಹೆಚ್ಚು ಲಾಭದಾಯಕವಾಗಲಿದೆ ಎಂದು ಬಮೂಲ್‌ ನಿರ್ದೇಶಕ ಹರೀಶ್‌ ಕುಮಾರ್‌ ತಿಳಿಸಿದರು.

Advertisement

ತಾಲೂಕಿನ ಮರಳವಾಡಿ ಹೋಬಳಿ ಕಲ್ಲನಕುಪ್ಪೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡಕ್ಕೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿ, ದೇಸಿ ಹಸುವಿನ ಹಾಲು ಆರೋಗ್ಯಕರ ಹಾಗೂ ಮಕ್ಕಳ ಬುದ್ಧಿಶಕ್ತಿ ಬೆಳವಣಿಗೆಗೆ ಸಹಕಾರಿ. ಹೀಗಾಗಿ ನಾಟಿ ಹಸುವಿನ ಹಾಲಿಗೆ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. ಮರಳವಾಡಿ ಬಯಲು ಸೀಮೆಯಾಗಿದ್ದು, ಬಹುತೇಕ ರೈತರು ನಾಟಿ ತಳಿ ಹಸು ಸಾಕಾಣಿಕೆ ಮಾಡುತ್ತಿದ್ದಾರೆ ಎಂದರು.

ಬಮೂಲ್‌ನಲ್ಲಿ ಉತ್ಪಾದನೆಯಾಗುತ್ತಿರುವ ಬೆಣ್ಣೆ, ಚೀಸ್‌, ಹಾಲಿನ ಫೌಡರ್‌ ಉತ್ಪನ್ನಗಳಲ್ಲಿ ಹೆಚ್ಚಿನ ಗುಣಮಟ್ಟ ಹೊಂದಿದೆ. ದೇಶ ಅಲ್ಲದೇ ವಿದೇಶದಲ್ಲೂ ಉತ್ಪನ್ನಕ್ಕೆ ಬೇಡಿಕೆ ಹೆಚ್ಚಾಗಿದ್ದು, ನಂದಿನಿಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಲು ಕೇಂದ್ರ ಅನುಮತಿನೀಡಿದೆ. ಅಧಿಕಾರಿಗಳು ಮತ್ತು ರೈತರ ಶ್ರಮದಿಂದ ರಾಜ್ಯದ 13ಒಕ್ಕೂಟಗಳಲ್ಲಿ ಬಮೂಲ್‌ಗೆ ಈ ಅವಕಾಶ ಸಿಕ್ಕಿದೆ ಎಂದರು.

ರಾಸುಗಳಿಗೆ ವಿಮೆ ಮಾಡಿಸಿ: ಕಲ್ಲನಕುಪ್ಪೆ ಗ್ರಾಮದ ಹಾಲುಉತ್ಪಾದಕರ ಸಂಘದ ಸಹಕಾರದಿಂದ 18 ರಿಂದ 20 ಲಕ್ಷ ರೂ.ವೆಚ್ಚದಲ್ಲಿ ಸುಸರ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಬಮೂ ಲ್‌ ನಿಂದಲೂ ಸಹಾಯಧನ ನೀಡಲಾಗುವುದು. ಪ್ರತಿಯೊಬ್ಬಸದಸ್ಯರು ರಾಸುಗಳಿಗೆ ವಿಮೆ ಮಾಡಿಸಿಕೊಳ್ಳಬೇಕು. ರೈತರು ಪೂರೈಸುವ ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ‌ ಬೆಲೆ ಸಿಗಲಿದ್ದು, ಗ್ರಾಮೀಣ ಭಾಗದ ರೈತರು, ಯುವಕರು ಹೈನೋದ್ಯಮದಲ್ಲಿ ತೊಡಗಿ ಸ್ವಾವಲಂಬನೆ ಸಾಧಿಸಿಸುವುದರ ಜೊತೆಗೆ, ಉತ್ತಮ ಗುಣ ಮಟ್ಟದ ಹಾಲು ಪೂರೈಕೆಗೆ ಆದ್ಯತೆ ನೀಡಬೇಕು ಎಂದರು.

ಜಿಪಂ ಸದಸ್ಯ ಎಂ.ಎನ್‌ ನಾಗರಾಜು, ಸಾದೇನಹಳ್ಳಿಈಶ್ವರ್‌, ಒಕ್ಕೂಟದ ಡಿ.ಎಂ.ಪ್ರಕಾಶ್‌, ವಿಸ್ತರಣಾಧಿಕಾರಿಗಳಾದಪ್ರವೀಣ್‌, ಅಲ್ಲಾ ಸಾಬ್‌, ಮರಳವಾಡಿ ಗ್ರಾಪಂ ಅಧ್ಯಕ್ಷ ಚಲುವರಾಜು, ಕಲ್ಲನಕುಪ್ಪೆ ಹಾಲು ಉತ್ಪಾದಕ ಸಂಘದಅಧ್ಯಕ್ಷ ಚಂದ್ರು, ಗ್ರಾಪಂ ಸದಸ್ಯ ಶಿವಶಂಕರ್‌, ಯಲಚವಾಡಿ ಚಂದ್ರು, ಕಲ್ಲನಕುಪ್ಪೆ ಕುಮಾರ್‌, ದೇವರಾಜು, ಕಾರ್ಯದರ್ಶಿ ಚಂದ್ರು, ನಿಂಗೇಗೌಡ ಉಪಸ್ಥಿತರಿದ್ದರು.

Advertisement

40 ಸಾವಿರ ರೂ.ವರೆಗೆ ಸಬ್ಸಿಡಿ :

ದೇಸಿ ತಳಿ ಹಾಲಿಗೆ ಹೆಚ್ಚು ಪ್ರೋತ್ಸಾಹ ನೀಡಿ ಹಾಲಿನ ಉತ್ಪಾದನೆ ಹೆಚ್ಚಿಸಲು ಈ ಭಾಗದಲ್ಲಿ 60 ಹಸುಗಳನ್ನು ಸಬ್ಸಿಡಿ ದರದಲ್ಲಿ ವಿತರಿಸಲು ನಿರ್ಧರಿಸಲಾಗಿದೆ. ಸರ್ಕಾರದಿಂದ 40 ಸಾವಿರ ರೂ.ವರೆಗೂ ಸಬ್ಸಿಡಿ ಸಿಗಲಿದೆ. ಈ ಭಾಗದಲ್ಲಿ ಒಂದು ಬಿಎಂಸಿ ಕೇಂದ್ರ ತೆರೆಯಲು ಬೇಡಿಕೆಯಿದ್ದು, ಉತ್ಪಾದನೆಗೆ ತಕ್ಕಂತೆ ಬಮೂಲ್‌ ಸಹಕಾರ ನೀಡಲಿದೆ. ಮುಂದಿನ ದಿನಗಳಲ್ಲಿ ರೈತರು ನಾಟಿ ತಳಿ ಹಸು ಸಾಕಾಣಿಕೆಗೆ ಆದ್ಯತೆ ನೀಡಿ, ಆರ್ಥಿಕವಾಗಿ ಸದೃಢರಾಗಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next