Advertisement

ಮಿಂಚಿದ ಸುದ್ದಿ: ವಧುವಿನ ತಂದೆಯ ಡ್ಯಾನ್ಸ್‌ಗೆ ಎಲ್ಲರೂ ಫಿದಾ!

08:36 PM Apr 14, 2022 | Team Udayavani |

ಮದುವೆಯೆಂದರೆ ಅಲ್ಲಿ ನೃತ್ಯವಿರಲೇಬೇಕು. ಅದೇ ರೀತಿ ಇತ್ತೀಚೆಗೆ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ವಧುವಿನ ತಂದೆ ವೇದಿಕೆ ಮೇಲೆ ಮಾಡಿದ ನೃತ್ಯ ಭಾರೀ ವೈರಲ್‌ ಆಗಿದೆ.

Advertisement

ಪುಷ್ಪ ಸಿನಿಮಾದ “ಉ ಅಂಟಾವಾ ಮಾವ ಉಹೂಂ ಅಂಟಾವಾ’ ಹಾಡಿಗೆ ವಧುವಿನ ತಂದೆ ಹೆಜ್ಜೆ ಹಾಕಿದ್ದಾರೆ. ಹಾಡಿನಲ್ಲಿ ನಟ ಅಲ್ಲು ಅರ್ಜುನ್‌ ಎಂಟ್ರಿ ತೆಗೆದುಕೊಳ್ಳುವ ಸ್ಟೈಲಿನಲ್ಲೇ ಎಂಟ್ರಿ ತೆಗೆದುಕೊಳ್ಳುವ ವಧುವಿನ ತಂದೆ, ಯುವಕರೂ ನಾಚುವಂತೆ ಸೊಂಟ ಬಳುಕಿಸಿದ್ದಾರೆ.

ತಮ್ಮೊಟ್ಟಿಗಿದ್ದ ಯುವಕರೊಂದಿಗೆ ಮಸ್ತ್ ಡ್ಯಾನ್ಸ್‌ ಮಾಡಿ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವಂತೆ ಮಾಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next