Advertisement

ಪಾಕಿಸ್ತಾನಕ್ಕೆ ಪಾಠ ಕಲಿಸಲು ಆಗ್ರಹ

08:51 AM Feb 16, 2019 | |

ನಿಡಗುಂದಿ: ಮೀಸೆ ಕೆಳಗೆ ಬಿದ್ದರೂ ಮಣ್ಣಾಗಲಿಲ್ಲ ಎನ್ನುವ ಪಾಪಿ ಪಾಕಿಸ್ತಾನ ತನ್ನ ಚಾಳಿ ಮುಂದುವರಿಸಿ ಉಗ್ರರನ್ನು ಭಾರತೀಯ ಸೇನೆ ಮೇಲೆ ಛೂ ಬಿಟ್ಟು 40ಕ್ಕೂ ಹೆಚ್ಚು ಸೈನಿಕರನ್ನು ಕೊಂದ ಪಾಕ್‌ಗೆ ಶೀಘ್ರ ತಕ್ಕಪಾಠ ಕಲಿಸಬೇಕು ಎಂದು ನಿವೃತ್ತ ಸೈನಿಕ ಸಿದ್ರಾಮೇಶ ಅರಮನಿ ಹೇಳಿದರು.

Advertisement

ಪಟ್ಟಣದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ತಹಶೀಲ್ದಾರ್‌ ಇಸ್ಮಾಯಿಲ್‌ ಮೂಲ್ಕಿಶಿಫಾಯಿ ಅವರ ಮೂಲಕ ಪ್ರಧಾನಿಯವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಜಮ್ಮು ಕಾಶ್ಮೀರದ ಪುಲಾವಾಮಾ ಜಿಲ್ಲೆಯಲ್ಲಿ ಕೇಂದ್ರಿಯ ಮೀಸಲು ಪಡೆಯಸೈನಿಕರ ಮೇಲೆ ಗುರುವಾರ ಹೇಡಿಯಂತೆ ದಾಳಿ ಮಾಡಿ ಸೈನಿಕರ ಪ್ರಾಣ ತೆಗೆದ ಪಾಕಿಸ್ತಾನವನ್ನು ಭೂಪಟದಲ್ಲಿ ಇರದಂತೆ ನಾಶ ಮಾಡಬೇಕು. ಕಳೆದ ಕೆಲ ದಿನಗಳ ಹಿಂದೆ ನಡೆಸಿದ ಸರ್ಜಿಕಲ್‌ ಸ್ಟ್ರೈಕ್‌ದಿಂದ ಪಾಠ ಕಲಿಯದ ಪಾಕಿಸ್ತಾನವನ್ನು ಸಂಪೂರ್ಣ ನಾಶ ಮಾಡಬೇಕು. ಭಯೋತ್ಪಾದನೆಯನ್ನು ಮಟ್ಟಹಾಕದೆ ಅವರನ್ನು ಪೋಷಿಸುತ್ತಿರುವ ಪಾಕಿಸ್ತಾನ ನೆಲೆಯನ್ನು ಧ್ವಂಸ ಮಾಡುವ ಮೂಲಕ ಪ್ರತ್ಯುತ್ತರ ನೀಡಬೇಕು ಎಂದರು.

ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯ ವೈ.ಎಸ್‌. ಭಜಂತ್ರಿ ಮಾತನಾಡಿ, ಪಾಕಿಸ್ತಾನ ಪದೇ ಪದೇ ಉಗ್ರರ ಮೂಲಕ ಸೈನಿಕರ ಪ್ರಾಣ ತೆಗೆಯುತ್ತಿರುವುದು ನೋಡಿದರೆ ಅದೊಂದು ರೀತಿ ಯುದ್ಧ ಸಾರಿದಂತೆ ಕಾಣುತ್ತಿದೆ. ತಾಳ್ಮೆ, ಸಹನೆಯ ಭಾರತ ತನ್ನ ಶಕ್ತಿ, ಸಾಮರ್ಥ್ಯವನ್ನು ಇಡಿ ವಿಶ್ವಕ್ಕೆ ಸಾರುವ ಸಮಯ ಬಂದಿದ್ದು ಕೂಡಲೇ ಪಾಕ್‌ನ ನೆಲೆಯನ್ನು ಸಂಪೂರ್ಣ ನಾಶಪಡಿಸಬೇಕು. 40ಕ್ಕೂ ಅಧಿಕ ಸೈನಿಕರ ಪ್ರಾಣ ಪಡೆದ ಪಾಕ್‌ಗೆ ಮತ್ತೂಂದು ಸರ್ಜಿಕಲ್‌ ಸ್ಟ್ರೈಕ್‌ದಂತ ಹೊಡೆದ ನೀಡಬೇಕು.

ಕಾಶ್ಮೀರದಲ್ಲಿ ಪ್ರತ್ಯೇಕವಾದಿಗಳಿಗೆ ನೀಡಿದ ರಕ್ಷಣೆಯನ್ನು ಹಿಂಪಡೆದು ಅವರನ್ನು ಇತರೆ ರಾಜ್ಯಗಳ ಸೆರೆಮನೆಯಲ್ಲಿ ಬಂಧಿಯಾಗಿಸಬೇಕು ಎಂದರು.  ನಿವೃತ್ತ ಸೈನಿಕರಾದ ಬಿ.ಡಿ. ವಿಭೂತಿ, ಶಿವಾನಂದ ರೂಢಗಿ, ಬಸವರಾಜ ಗಣಿ, ಸಂಗಮೇಶ ಕೂಡಗಿ, ಸಂತೋಷ ಮಡಿವಾಳರ, ಹಿಂದೂ ಜನಜಾಗೃತಿ ಸಮಿತಿಯ ವೆಂಕಟರಮಣ ನಾಯ್ಕ, ಶಿವಶಂಕ್ರಪ್ಪ ಅಂಗಡಿ, ಬಸಯ್ಯ ಗಣಾಚಾರಿ, ಜಟ್ಟೆಪ್ಪ ಗಣಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next