Advertisement
ಬೆಳಗ್ಗೆ ಧಾರವಾಡ ಕಡೆಯಿಂದ ಲೋಂಡಾ ಕಡೆಗೆ ಹೋಗುತ್ತಿದ್ದ ಸರಕು ತುಂಬಿದ ರೈಲು ಇಲ್ಲಿನ ನಿಲ್ದಾಣದ ಐದನೇ ಮಾರ್ಗದಲ್ಲಿ ಚಲಿಸುವಾಗ ಒಂದು ಬೋಗಿ ಮಾತ್ರ ಹಳಿ ಬಿಟ್ಟು ಕೆಳಗಿಳಿದು ಸುಮಾರು ಅರ್ಧ ಕಿಮೀ ವರೆಗೆ ಚಲಿಸಿದೆ. ಇದರಿಂದ ಹಳಿಯ ಸ್ಲೀಪರ್ ಗಳು ಪುಡಿಯಾಗಿವೆ. ಘಟನೆ ಜರುಗಿದ ಸ್ಥಳದಲ್ಲಿ ಕೆಳರಸ್ತೆಯ ಸೇತುವೆಯಿದ್ದು ಬೋಗಿಯು ರಸ್ತೆಗೆ ಉರುಳಿದ್ದರೆ ಜೀವಹಾನಿ ಸಂಭವಿಸುವ ಸಾಧ್ಯತೆಯಿತ್ತು. ಜೊತೆಗೆ ಹಳಿಗೆ ಹೊಂದಿಕೊಂಡಂತೆ ಇರುವ ರೈಲ್ವೆ ವಿದ್ಯುತ್ ಮಾರ್ಗದ ಕಂಬಗಳಿಗೂ ಹಾನಿಯಾಗುತ್ತಿತ್ತು. ಸ್ಥಳಕ್ಕೆಇಲಾಖೆಯ ಹಿರಿಯ ಅಧಿಕಾರಿಗಳು, ತಾಂತ್ರಿಕ ಸಿಬ್ಬಂದಿ ಆಗಮಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.