Advertisement
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ರವರು ಚಿಂತಾಮಣಿ ನಗರಕ್ಕೆ ಬೆಳಂ ಬೆಳಗ್ಗೆಯೇ ದಿಢೀರ್ ಭೇಟಿ ನೀಡಿ, ನಗರದ ಹಲವು ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ, ರಾಜಕಾಲುವೆ, ಹಾಗೂ ಒಳಚರಂಡಿ ಶುದ್ಧೀಕರಣ ಘಟಕ, ಕಸ ವಿಲೇವಾರಿ ಘಟಕ, ನಗರಸಭೆಯ ಉದ್ಯಾನವನಗಳನ್ನು ಸೇರಿದಂತೆ ಹತ್ತು ಹಲವು ಕಡೆ ಪರಿಶೀಲನೆ ನಡೆಸಿದರು.
Related Articles
Advertisement
ನೊಟೀಸ್ ನೀಡಿ: ವೆಂಕಟಗಿರಿಕೋಟೆಯಲ್ಲಿ ನಗರಸಭೆಗೆ ಸೇರಿದ ಪಾರ್ಕ್‌ನಲ್ಲಿ ಮನೆ ನಿರ್ಮಾಣ ಮಾಡಿಕೊಂಡಿರುವುದನ್ನು ಪರಿಶೀಲನೆ ಮಾಡಿ ಕೂಡಲೇ ಮನೆಯ ಯಜಮಾನರಿಗೆ ನೋಟಿಸ್ ನೀಡಿ ತೆರವುಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ವೆಂಕಟಗಿರಿಕೋಟೆಯಲ್ಲಿ ಗುಡಿಸಲು ಮನೆಗಳಲ್ಲಿ ವಾಸವಾಗಿರುವವರ ಬಳಿ ತೆರಳಿ ಗುಡಿಸಲು ಮನೆಗಳನ್ನು ಪರಿಶೀಲನೆ ಮಾಡಿ ನಗರಸಭೆಯಿಂದ ಮನೆ ಮಂಜೂರು ಮಾಡಿಕೊಡುವಂತೆ ಸೂಚನೆ ನೀಡಿದರು. ಈ ವೇಳೆ ನಗರಸಭೆ ಯೋಜಾನಾ ನಿರ್ದೇಶಕ ನಟರಾಜ್ ಸೇರಿದಂತೆ ಚಿಂತಾಮಣಿ ನಗರಸಬೆ ಅಧಿಕಾರಿಗಳಿದ್ದರು.
ಸೂಕ್ತ ಕ್ರಮ ಜರುಗಿಸಿ: ನಗರ ಭಾಗದ ಖಾಸಗಿ ಸ್ಥಳಗಳಲ್ಲಿ ಕಸಕಡ್ಡಿ ಹೆಚ್ಚಾಗಿ ಆಸ್ವತ್ಛತೆ ಕಾಡುತ್ತಿರುವದನ್ನು ಕಂಡು ಜಿಲ್ಲಾಧಿಕಾರಿಗಳು ಇಂಥ ಖಾಸಗಿ ಸ್ಥಳಗಳಲ್ಲಿ ಸಿಸಿ ಕ್ಯಾಮರಾಗಳನ್ನು ಆಳವಡಿಸಿ ಕಸ ತಂದು ಹಾಕುವವರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸುವಂತೆ ನಗರಸಭೆ ಪರಿಸರ ಅಭಿಯಂತರರಿಗೆ ತಿಳಿಸಿದರು.
ಬೇಸಿಗೆ ಆರಂಭಕ್ಕೂ ಮೊದಲೇ ಚಿಂತಾಮಣಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ನೀರಿಗಾಗಿ ಜನರ ಪರದಾಡುವಂತಾಗಿದೆ. ಟ್ಯಾಂಕರ್‌ಗಳ ಮೂಲಕ ನಗರಸಭೆಯಿಂದ ಎಲ್ಲಾ ವಾರ್ಡಗಳಿಗೆ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದು, ಸೂಕ್ತ ರೀತಿಯಲ್ಲಿ ಜನತೆಗೆ ಸಿಗುವ ಹಾಗೇ ಅಧಿಕಾರಿಗಳಿಗೆ ತಿಳಿಸಿದ್ದು, ಭಕ್ತರಹಳ್ಳಿ ಅರಸಿಕೇರೆ ನೀರನ್ನು ಚಿಂತಾಮಣಿ ನಗರಕ್ಕೆ ತರಲು ರೂಪಿಸಿರುವ ಯೋಜನೆ ಈಗಾಗಲೇ ಸರ್ಕಾರದ ಮಟ್ಟದಲ್ಲಿದ್ದು, ಯೋಜನೆಗೆ ಚಾಲು ಸಿಕ್ಕರೆ ಸಮಸ್ಯೆಗೆ ಸ್ಪಲ್ಪ ಮಟ್ಟಿನ ಪರಿಹಾರ ಸಿಕ್ಕಂತಾಗುತ್ತದೆ ಎಂದು ಡೀಸಿ ಅನಿರುದ್ಧ್ ಶ್ರವಣ್ ತಿಳಿಸಿದರು.
ಅಧಿಕಾರಿಗಳಿಗೆ ನೋಟಿಸ್: ನಗರದಲ್ಲಿ ಸ್ವತ್ಛತೆ ಕೊರತೆ ಹಿನ್ನೆಲೆ ಪರಿಸರ ಅಭಿಯಂತರ ಉಮಾಶಂಕರ್ ರವರಿಗೆ, ನೀರು ಸರಬರಾಜಿನಲ್ಲಿ ಕರ್ತವ್ಯ ಲೋಪವೆಸಗಿರುವ ನಗರಸಭೆ ಎಇಇ ಚಕ್ರಪಾಣಿ ಗೆ ಮತ್ತು ಪೌರಾಯುಕ್ತ ಹರೀಶ್ ರವರಿಗೆ ನೋಟಿಸ್ ನೀಡುವಂತೆ ಯೋಜನಾ ನಿದೇರ್ಶಕರಾದ ನಟರಾಜ್ ರವರಿಗೆ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್ ಸೂಚಿಸಿದರು. ಯಾವುದೆ ಜನನಿ ಬಿಡ ಪ್ರದೇಶದಲ್ಲಿ ಖಾಸಗಿ ಜಮೀನುಗಳಲ್ಲೆ ಆಗಲ್ಲಿ ಪ್ರತಿನಿತ್ಯ ಕಸ ಹಾಕುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದರು.