Advertisement

ಬಡ-ಯುವ ಅಭ್ಯರ್ಥಿ ಪರ ಠೇವಣಿ ಹಣ ಸಂಗ್ರಹ

12:44 AM Mar 18, 2019 | Team Udayavani |

ಹೊಸನಗರ: ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಬಡವ ಅಥವಾ ಯುವಅಭ್ಯರ್ಥಿಗೆ ಜನರಿಂದಲೇ ಠೇವಣಿ ಹಣ
ಸಂಗ್ರಹಿಸಿ ನೀಡಲು ಹೋರಾಟಗಾರರೊಬ್ಬರು ಅಭಿಯಾನ ಆರಂಭಿಸಿದ್ದಾರೆ. ಹತ್ತು ಹಲವು ವಿನೂತನ ಏಕಾಂಗಿ
ಹೋರಾಟದ ಮೂಲಕ ಗಮನ ಸೆಳೆದ ಶಿವಮೊಗ್ಗ ಜಿಲ್ಲೆ ರಿಪ್ಪನ್‌ಪೇಟೆಯ ಟಿ.ಆರ್‌.ಕೃಷ್ಣಪ್ಪ, ಈಗ ಲೋಕಸಭಾ
ಚುನಾವಣೆಗೆ ಸ್ಪರ್ಧಿಸುವ ಬಡ ಹಾಗೂ ಯುವ ಅಭ್ಯರ್ಥಿಯ ನೆರವಿಗಾಗಿ ಜನರ ಮುಂದೆ ಕೈ ಚಾಚುತ್ತಿದ್ದಾರೆ.

Advertisement

ಹೊಸನಗರದಲ್ಲಿ ನಡೆದ ಸಂತೆಯಲ್ಲಿ “ಶ್ರೀಮಂತ ಪ್ರಜಾಪ್ರಭುತ್ವ ಅಳಿಸಿ, ಬಡಪ್ರಜಾಪ್ರಭುತ್ವ ಗಳಿಸಿ’ ಎಂಬ ನಾಮಫಲಕ ಕಟ್ಟಿಕೊಂಡು ಟವೆಲ್‌ ಹಾಸಿ ಹಣ ಸಂಗ್ರಹಿಸುವ ಮೂಲಕ ಅಭಿಯಾನ ಆರಂಭಿಸಿದ್ದಾರೆ. ಚುನಾವಣೆಗೆ
ಸ್ಪರ್ಧಿಸಲು ಬೇಕಾದ 25 ಸಾವಿರ ರೂ. ಸಂಗ್ರಹಿಸುವವರೆಗೂ ಈ ಅಭಿಯಾನ ಮುಂದುವರಿಯಲಿದ್ದು, ಇದಕ್ಕಾಗಿ
ಸೈಕಲ್‌ನಲ್ಲಿ ಜಿಲ್ಲಾದ್ಯಂತ ಪ್ರಯಾಣಿಸಲು ಕೃಷ್ಣಪ್ಪ ನಿರ್ಧರಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣಪ್ಪ, ಸಮಾಜವಾದಿ ಹೋರಾಟಗಾರ ಗೋಪಾಲ ಗೌಡರ ತತ್ವ-ಸಿದ್ಧಾಂತವನ್ನು ನಂಬಿ ಈ ಅಭಿಯಾನ ಆರಂಭಿಸಿದ್ದೇನೆ. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂಬ
ಹೆಗ್ಗಳಿಕೆ ಇದ್ದರೂ ಸಹ ಶಾಸಕ, ಸಂಸದರಾಗಲು ಹಣ, ಜಾತಿ, ದಬ್ಟಾಳಿಕೆ, ವಂಶಪಾರಂಪರ್ಯ ಪ್ರಮುಖ ಆಗುತ್ತಿದೆ.
ಜನಸಾಮಾನ್ಯರು, ಬಡ ಬುದ್ಧಿವಂತ ಯುವಕರು ಇಂತಹ ಕೆಟ್ಟ ಸಂಸ್ಕೃತಿ ತಡೆ ಗಟ್ಟಬಹುದೆಂಬ ಭರವಸೆಯನ್ನು ಬಿತ್ತುವುದು ಹಣ ಸಂಗ್ರಹದ ಉದ್ದೇಶ ಎಂದರು.

ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆಯ ದಿನಾಂಕದ ತನಕ ಊರೂರು ಸುತ್ತಿ, ಠೇವಣಿ ಹಣ ಸಂಗ್ರಹಿಸಲಾಗುವುದು. ನಿಗದಿತ 25 ಸಾವಿರ ರೂ. ಸಂಗ್ರಹ ಆಗದಿದ್ದರೆ,ಉಳಿದ ಹಣವನ್ನು ತಾವು ಭರಿಸಿ ಸೂಕ್ತ
ಅಭ್ಯರ್ಥಿಗೆ ನೀಡುವುದಾಗಿ ಕೃಷ್ಣಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next