Advertisement

Mangaluru ವಿದ್ಯುತ್‌ ಕೊರತೆ ಎದುರಿಸಲು ಇಲಾಖೆ ಸಿದ್ಧತೆ: ಕೆ.ಜೆ. ಜಾರ್ಜ್‌

11:38 PM Feb 05, 2024 | Team Udayavani |

ಮಂಗಳೂರು: ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಮಳೆಯಾಗಿರುವುದರಿಂದ ಈ ವರ್ಷದ ಬೇಸಗೆಯಲ್ಲಿ ವಿದ್ಯುತ್‌ ಕೊರತೆ ಉಂಟಾಗುವ ಸಾಧ್ಯತೆಗಳಿವೆ. ಅದನ್ನು ಎದುರಿಸಲು ವಿದ್ಯುತ್‌ ಖರೀದಿ, ಉತ್ಪಾದನೆ ಹೆಚ್ಚಳ ಸಹಿತ ಅನೇಕ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯ ಇಂಧನ ಖಾತೆ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.

Advertisement

ಜಿಲ್ಲಾ ವ್ಯಾಪ್ತಿಯಲ್ಲಿ ಮೆಸ್ಕಾಂ ಹಾಗೂ ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮದ ವಿದ್ಯುತ್‌ ವ್ಯವಸ್ಥೆ ಕುರಿತು ಜನಪ್ರತಿನಿಧಿಗಳೊಂದಿಗೆ ಸಮಾ ಲೋಚನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಿಮಾಚಲ ಪ್ರದೇಶದಿಂದ ವಿದ್ಯುತ್‌ ಖರೀದಿಸಲಾಗುತ್ತಿದೆ, ಕೇಂದ್ರ ಗ್ರಿಡ್‌ನಿಂದ ವಿದ್ಯುತ್‌ ಕೇಳಲಾಗಿದ್ದು, ನೀಡಲು ಕೇಂದ್ರ ಸರಕಾರ ಒಪ್ಪಿಕೊಂಡಿದೆ. ಯಲಹಂಕದಲ್ಲಿ ಗ್ಯಾಸ್‌ ಆಧಾರಿತ ವಿದ್ಯುತ್‌ ಉತ್ಪಾದನೆ ಕೇಂದ್ರವೂ ಈ ತಿಂಗಳಲ್ಲಿ ಆರಂಭಗೊಳ್ಳಲಿದ್ದು, 380 ಮೆಗಾ ವ್ಯಾಟ್‌ ವಿದ್ಯುತ್‌ ಸಿಗಲಿದೆ. ಈ ಬಾರಿ ಕಲ್ಲಿದ್ದಲು ಆಧಾರಿತ ವಿದ್ಯುತ್‌ ಉತ್ಪಾದನ ಕೇಂದ್ರಕ್ಕೆ ಅನಿಯಮಿತ ವಾಗಿ ಕಲ್ಲಿದ್ದಲು ಪೂರೈಸಲುವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದರು.

ವಾರಾಹಿ ಹಾಗೂ ಶರಾವತಿಯಲ್ಲಿ ನೀರನ್ನು ರಿಸೈಕಲ್‌ ಮಾಡಿ ಪಂಪ್‌ಸೊràರೇಜ್‌ ತಂತ್ರಜ್ಞಾನ ಬಳಸಿ ಕಡಿಮೆ ನೀರಿನಲ್ಲೂ ಜಲವಿದ್ಯುತ್‌ ಉತ್ಪಾದನೆಯನ್ನು ಹೆಚ್ಚಿಸುವ ವಿಧಾನ ವನ್ನು ಅಭಿವೃದ್ಧಿ ಪಡಿಸಲಾಗುವುದು. ವಾರಾಹಿಯಲ್ಲಿ ಇದರಿಂದಾಗಿ 1,000 ಮೆ.ವ್ಯಾಟ್‌ ಹಾಗೂ ಶರಾವತಿಯಲ್ಲಿ 2,000 ಮೆ. ವ್ಯಾಟ್‌ನಷ್ಟು ಹೆಚ್ಚುವರಿ ವಿದ್ಯುತ್‌ ಉತ್ಪಾದನೆಯಾಗಲಿದ್ದು, 2- 3 ವರ್ಷಗಳಲ್ಲಿ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದರು.

ಪರಿಹಾರ ಪರಿಷ್ಕರಣೆ ಸಾಧ್ಯತೆ?
ವಿದ್ಯುತ್‌ ಪ್ರಸರಣ ಮಾರ್ಗಗಳ ಭೂಸ್ವಾಧೀನಕ್ಕೆ ಸಾಕಷ್ಟು ಸಮಸ್ಯೆ ಇದೆ, ಇದಕ್ಕಾಗಿ ಪರಿಹಾರ ಪರಿಷ್ಕರಿಸಲು ಸಮಾಲೋಚನೆ ನಡೆಸುವುದಾಗಿ ಸಚಿವರು ತಿಳಿಸಿದರು. ಈ ಬಗ್ಗೆ ವಿಧಾನ ಪರಿಷತ್‌ಸದಸ್ಯ ಬಿ.ಎಂ.ಫಾರೂಕ್‌ ಅವರು ಭೂಮಾಲಕರಿಗೆ ಸರಿಯಾದ ಪರಿಹಾರ ಸಿಗಬೇಕು ಎಂದರು. ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್‌. ಲೋಬೋ, ಕೆಪಿಟಿಸಿಎಲ್‌ನ ಎಂಡಿ ಪಂಕಜ್‌ ಕುಮಾರ್‌ ಪಾಂಡೆ, ಮೆಸ್ಕಾಂ ಎಂಡಿ ಪದ್ಮಾವತಿ, ಜಿಲ್ಲಾಧಿಕಾರಿ ಮುಲ್ಲೆ„ ಮುಗಿಲನ್‌, ಜಿ.ಪಂ. ಸಿಇಒ ಡಾ| ಆನಂದ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

3,000 ಪವರ್‌ಮನ್‌ ನೇಮಕ
ರಾಜ್ಯದಲ್ಲಿ 6000 ಪವರ್‌ಮನ್‌(ಲೈನ್‌ಮನ್‌)ಗಳ ಪೈಕಿ ಮೊದಲ ಹಂತದಲ್ಲಿ 3,000 ಮಂದಿಯನ್ನು ನೇಮಿಸಿಕೊಳ್ಳಲಾಗುವುದು. ಏಕಕಾಲದಲ್ಲಿ ಎಲ್ಲ ಜಿಲ್ಲೆಗಳಲ್ಲೂ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಸ್ಥಳೀಯರಿಗೆ ಆದ್ಯತೆ ಸಿಗದಿರುವ ಸಮಸ್ಯೆ ಇತ್ಯರ್ಥಗೊಳ್ಳಲಿದೆ ಎಂದರು.

ಮಂಗಳೂರಿಗೆ
ಗ್ರೀನ್‌ಹೈಡ್ರೋಜನ್‌ ಪೈಲಟ್‌ ಯೋಜನೆ
ಮಂಗಳೂರಿನಲ್ಲಿ ಹಸುರು ಇಂಧನವಾದ ಗ್ರೀನ್‌ ಹೈಡ್ರೋ ಜನ್‌ ಉತ್ಪಾದಿಸುವ ಬಗ್ಗೆ ಪ್ರಾಯೋಗಿಕ ಯೋಜನೆ ರೂಪು ಗೊಳ್ಳುತ್ತಿದೆ. ಮಂಗಳೂರಿಗೆ ಈ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶವಿದ್ದು, 300 ಕಿಲೋವ್ಯಾಟ್‌ ಗ್ರೀನ್‌ ಹೈಡ್ರೋಜನ್‌ ಸ್ಥಾವರವನ್ನು ನಿರ್ಮಿಸಲಾಗುವುದು ಎಂದರು.

ರಾಜಸ್ಥಾನ ಹಾಗೂ ಗುಜರಾತ್‌ನಲ್ಲಿ ಗ್ರೀನ್‌ ಹೈಡ್ರೋಜನ್‌ ಯೋಜನೆ ಜಾರಿಯಲ್ಲಿದ್ದು, ಕರ್ನಾಟಕ ದಲ್ಲಿ ಇದಕ್ಕೆ ಪೂರಕ ವಾದ ನೀತಿ(ಪಾಲಿಸಿ) ರೂಪಿಸ ಬೇಕಿದೆ. ಈ ನಿಟ್ಟಿನಲ್ಲಿ ಸಭೆಗಳನ್ನೂ ನಡೆಸಲಾಗಿದೆ ಎಂದರು.

“ಕೇಂದ್ರದಿಂದ ಅನುದಾನ ಹಂಚಿಕೆ ಅನ್ಯಾಯ’
ಉಡುಪಿ: ಕೇಂದ್ರ ಸರಕಾರದಿಂದ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ. ಇದರ ವಿರುದ್ಧ ಫೆ. 7ರಂದು ಹೊಸದಿಲ್ಲಿಯಲ್ಲಿ ಪ್ರತಿಭಟನೆ ಮಾಡಲಿದ್ದೇವೆ. ತೆರಿಗೆ ಹಣ ನೀಡುವ ವಿಷಯದಲ್ಲಿ ಮಾತ್ರವಲ್ಲದೆ ಬರ ಪರಿಸ್ಥಿತಿ ನಿರ್ವಹಣೆಯ ಅನುದಾನ ಹಂಚಿಕೆಯಲ್ಲೂ ಅನ್ಯಾಯ ಆಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನ ಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸರಿಯಾದ ಮಾಹಿತಿ ಇದ್ದಂತಿಲ್ಲ. ಕೇಂದ್ರಕ್ಕೆ ನಾವು ಕೊಟ್ಟ ತೆರಿಗೆಯಲ್ಲಿ ವಾಪಸ್‌ ಪಾಲು ಕೇಳುತ್ತಿದ್ದೇವೆ. ನಿಯಮ ಪ್ರಕಾರ ಅನುದಾನ ಬಿಡುಗಡೆ ಮಾಡಿಸಲು ಬಿಜೆಪಿ ಸಂಸದರು, ಕೇಂದ್ರ ಸಚಿವರೂ ಆಸಕ್ತಿ ವಹಿಸಲಿ. ಸಂಸದರಿಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಮಾತನಾಡಲು ಭಯ ಎಂದರು.

ಗೆಲ್ಲುವ ವಿಶ್ವಾಸ
ಕಾಂಗ್ರೆಸ್‌ ಚುನಾವಣೆ ತಯಾರಿ ಮಾಡುವ ಪಕ್ಷ ಅಲ್ಲ, ಸತತ ಜನರ ಮಧ್ಯೆ ಇದ್ದು ಚುನಾವಣೆ ಎದುರಿಸುತ್ತೇವೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಲಾಗಿದೆ ಎಂದರು. ಜಯಪ್ರಕಾಶ್‌ ಹೆಗ್ಡೆಯವರು ಕಾಂಗ್ರೆಸ್‌ ಪಕ್ಷ ಸೇರುವ ಬಗ್ಗೆ ಪ್ರತಿಕ್ರಿಯಿಸಿ, ಅದು ಹೈಕಮಾಂಡ್‌ಗೆ ಬಿಟ್ಟದ್ದು. ಕರಾವಳಿ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಕೆಲವು ಕಾರಣಗಳಿಂದ ಬಿಜೆಪಿ ಜತೆ ಹೋಗಿರಬಹುದು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜನ ನಮ್ಮ ಕೈಹಿಡಿಯುತ್ತಾರೆಂಬ ನಂಬಿಕೆ, ಆತ್ಮವಿಶ್ವಾಸ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next