Advertisement

ರೇಷ್ಮೆ ಕೃಷಿ ವಿದ್ಯಾರ್ಥಿಗಳಿಗೆ ಇಲಾಖೆ ಮೊದಲೆ ಆದ್ಯತೆ

01:11 PM Feb 16, 2018 | |

ಮೈಸೂರು: ರೇಷ್ಮೆ ಕುರಿತು ವ್ಯಾಂಸಗ ಮಾಡುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡುವ ಮೂಲಕ ಅವರುಗಳನ್ನು ಇಲಾಖೆಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಕೇಂದ್ರ ರೇಷ್ಮೆ ಕೃಷಿ ಮಂಡಳಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ಹೇಳಿದರು.

Advertisement

ಮೈಸೂರು ವಿಶ್ವವಿದ್ಯಾಲಯ ರೇಷ್ಮೆ ವಿಜಾnನ ಅಧ್ಯಯನ ವಿಭಾಗದಿಂದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್‌ ಸಭಾಂಗಣದಲಿ ಗುರುವಾರ ಆಯೋಜಿಸಿದ್ದ ಸಿರಿಬಯೋಮಿಕ್ಸ್‌: ಸವಾಲುಗಳು ಮತ್ತು ಪರಿಹಾರ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ದೇಶ ಹಾಗೂ ರಾಜ್ಯ ರೇಷ್ಮೆ ಬೆಳೆಗೆ ಹೆಸರುವಾಸಿಯಾಗಿದ್ದು, ರೇಷ್ಮೆ ಇಲಾಖೆ ಮತ್ತು ಮಂಡಳಿಯಲ್ಲಿ ರೇಷ್ಮೆ ಬಗ್ಗೆ ಅರಿವು ಹಾಗೂ ಅನುಭವವಿಲ್ಲದ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಹೀಗೆ ರೇಷ್ಮೆ ಬೆಳೆಯ ಬಗ್ಗೆ ಗಂಧವೇ ಗೊತ್ತಿಲ್ಲದ ಅಧಿಕಾರಿಗಳು ಇಲಾಖೆಯಲ್ಲಿ ಕೆಲಸ ಮಾಡುವುದರಿಂದ ಅವರಿಗೆ ರೇಷ್ಮೆ ಒಳ ಮತ್ತು ಹೊರಗಿನ ಅರಿವೇ ಇರುವುದಿಲ್ಲ,

ಇಂತಹ ಅಧಿಕಾರಿಗಳಿಂದ ಯಾವುದೇ ಪ್ರಯೋಜನವಿಲ್ಲ. ಈ ಹಿನ್ನೆಲೆಯಲ್ಲಿ ರೇಷ್ಮೆ ವಿಷಯದ ಬಗ್ಗೆ ವ್ಯಾಸಂಗ ಮಾಡಿದವರಿಗೆ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳಬೇಕೆಂದು ಮಂಡಳಿಯಲ್ಲಿ ಪ್ರಸ್ತಾಪಿಸಲಾಗಿದ್ದು, ಇದಕ್ಕೆ ಮಂಡಳಿ ಸಭೆಯಲ್ಲಿ ಒಪ್ಪಿಗೆ ಸಹ ನೀಡಲಾಗಿದೆ ಎಂದರು.

ರೇಷ್ಮೆ ಹೆಚ್ಚಳಕ್ಕೆ ಕ್ರಮ: ವಿಶ್ವದಲ್ಲೇ ಚೀನಾ ಮತ್ತು ಭಾರತದಲ್ಲಿ ರೇಷ್ಮೆ ಕೃಷಿ ಮೇಲುಗೈ ಸಾಧಿಸಿದ್ದು, ಭಾರತದಲ್ಲಿ ಉತ್ಪನ್ನ ಹೆಚ್ಚಾಗಿದ್ದರೂ ಚೀನಾದದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ, ಚೀನಾಗಿಂತಲೂ ಭಾರತದಲ್ಲಿ ಹೆಚ್ಚಾಗಿ ರೇಷ್ಮೆ ಬೆಳೆಯಲಾಗುತ್ತಿದ್ದು, ದೇಶದ ಶೇ.50 ರೇಷ್ಮೆ ಬೆಳೆಯನ್ನು ಕರ್ನಾಟಕದಲ್ಲೇ ಬೆಳೆಯಲಾಗುತ್ತಿದೆ.

Advertisement

ಇದರ ನಡುವೆಯೂ ರೇಷ್ಮೆ ಕೃಷಿಯನ್ನು ಹೆಚ್ಚಿಸಲು ಆತ್ಯಾಧುನಿಕ ಯಂತ್ರಗಳನ್ನು ಪರಿಚಯಿಸಲಾಗಿದ್ದು, ಈ ಯಂತ್ರಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ. ರೈತರು ಈ ಯಂತ್ರಗಳನ್ನು ಹೆಚ್ಚಾಗಿ ಬಳಸಿಕೊಂಡಲ್ಲಿ, ನಮ್ಮ ದೇಶದ ರೇಷ್ಮೆ ಬೇಡಿಕೆ ಪೂರೈಸಿ, ಹೊರ ದೇಶಗಳಿಗೂ ರಫ್ತು ಮಾಡಬಹುದಾಗಿದೆ ಎಂದು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಡಿ.ಭಾರತಿ ಮಾತನಾಡಿ, ಪ್ರಪಂಚದಲ್ಲಿ ಉತ್ಪನವಾಗುವ ರೇಷ್ಮೆಯನ್ನು ಚೀನಾ ಮತ್ತು ಭಾರತದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಮಾರುಕಟ್ಟೆ ಮತ್ತು ಬೇಡಿಕೆಯಲ್ಲಿ ಭಾರತ ಮಂಚೂಣಿಯಲ್ಲಿದ್ದರೂ, ಇತ್ತೀಚಿನ ದಿನಗಳಲ್ಲಿ ಮೈಸೂರಿನ ಕೆ.ಆರ್‌.ನಗರ ಮತ್ತು ಕೊಳ್ಳೆಗಾಲ ತಾಲೂಕಿನಲ್ಲಿ ರೇಷ್ಮೆ ಕೃಷಿ ಕಣ್ಮರೆಯಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಸಿ.ಬಸವರಾಜ, ರೇಷ್ಮೆ ಕೃಷಿ ವಿಜಾnನ ಅಧ್ಯಯನ ವಿಬಾಗದ ಅಧ್ಯಕ್ಷ ಪ್ರೊ. ಎಚ್‌.ಬಿ.ಮಂಜುನಾಥ್‌, ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಡಾ.ಎಸ್‌.ಬಿ.ದಂಡಿನ್‌ ಹಾಜರಿದ್ದರು.

ಇತರೆ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಸಾಲದ ಬಲೆಗೆ ಬೀಳುವ ಜತೆಗೆ ಸಾಕಷ್ಟು ಸಮಸ್ಯೆಗಳಿಗೆ ಸಿಲುಕುತ್ತಾರೆ. ಆದರೆ, ರೇಷ್ಮೆ ಕೃಷಿಕರು ಎಂದಿಗೂ ಈ ಸಮಸ್ಯೆಗಳನ್ನು ಅನುಭವಿಸಿದವರಲ್ಲ ಮತ್ತು ರೇಷ್ಮೆ ಕೃಷಿಯಲ್ಲಿ ಯಾವುದೇ ನಷ್ಟ ಉಂಟಾಗುವುದಿಲ್ಲ. ಜತೆಗೆ ರೇಷ್ಮೆ ಬಿತ್ತನೆಯಿಂದ ಆರಂಭವಾಗಿ ಕಟಾವಿಗೆ ಬರುವವರಿಗೂ ಸಬ್ಸಿಡಿ ಸಹ ನೀಡಲಾಗುತ್ತದೆ.
-ಕೆ.ಎಂ.ಹನುಮಂತರಾಯಪ್ಪ, ಅಧ್ಯಕ್ಷರು, ರೇಷ್ಮೆ ಕೃಷಿ ಮಂಡಳಿ.

Advertisement

Udayavani is now on Telegram. Click here to join our channel and stay updated with the latest news.

Next