Advertisement

Department of School Education: ಶಾಲೆಗಳ ಉಚಿತ ವಿದ್ಯುತ್‌: ಅನುಷ್ಠಾನಕ್ಕೆ ಸೂಚನೆ

02:09 AM Oct 03, 2024 | Team Udayavani |

ಬೆಂಗಳೂರು: ವಿದ್ಯುನ್ಮಾನ ನಾಗರಿಕ ಸೇವಾ ವಿತರಣ ನಿರ್ದೇಶನಾಲಯ (ಇಡಿಸಿಎಸ್‌) ಬಿಡುಗಡೆ ಮಾಡಿರುವ ತಂತ್ರಾಂಶವನ್ನು ಬಳಸಿಕೊಂಡು ರಾಜ್ಯದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್‌ ಸೌಲಭ್ಯವನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.

Advertisement

ಈಗಾಗಲೇ ಶಾಲೆಗಳಿಗೆ ಉಚಿತ ವಿದ್ಯುತ್‌ ಸೌಲಭ್ಯ ನೀಡಲಾಗುತ್ತಿದೆ. ಯೋಜನೆಯನ್ನು ನಿಖರವಾಗಿ ಅನುಷ್ಠಾನ ಮಾಡುವುದಕ್ಕಾಗಿ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ. ತಂತ್ರಾಂಶದ ಮೂಲಕ ಶಾಲಾ ಮುಖ್ಯ ಶಿಕ್ಷಕರು ವಿದ್ಯುತ್‌ ಸಂಪರ್ಕದ ವಿವರಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಬಹುದು ಎಂದು ತಿಳಿಸಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯ ಜಾಲತಾಣದಲ್ಲಿ ಉಚಿತ ವಿದ್ಯುತ್‌ ಸಂಪರ್ಕಕ್ಕೆ ಮಾಹಿತಿ ನಮೂದಿಸಲು ಅರ್ಜಿ ಸಲ್ಲಿಸಬಹುದು. ಲಿಂಕ್‌ ಕ್ಲಿಕ್‌ ಮಾಡಿದರೆ ಸೇವಾ ಸಿಂಧು ಪೋರ್ಟಲ್‌ ವೆಬ್‌ಪೇಜ್‌ ತೆರೆದುಕೊಳ್ಳಲಿದೆ. ಅಲ್ಲಿ ಶಾಲೆಯ ಯು-ಡೈಸ್‌ ಸಂಖ್ಯೆಯನ್ನು ನಮೂದಿಸಿದರೆ, ಶಾಲೆಯ ಹೆಸರು, ವಿಳಾಸ, ಮುಖ್ಯಶಿಕ್ಷಕರ ಮೊಬೈಲ್‌ ನಂಬರ್‌ ಹಾಗೂ ಶಾಲೆಗೆ ಸಂಬಂಧಿಸಿದ ವಿವರಗಳು ಪ್ರದರ್ಶನವಾಗಲಿವೆ. ಈ ಮಾಹಿತಿಗಳನ್ನು ಖಚಿತ ಪಡಿಸಿಕೊಳ್ಳುವಂತೆ ತಿಳಿಸಿದ್ದಾರೆ.

ಶಾಲಾ ಮುಖ್ಯ ಶಿಕ್ಷಕರ ಮೊಬೈಲ್‌ ನಂಬರ್‌ಗೆ ಬರುವ ಒಟಿಪಿಯನ್ನು ನಮೂದಿಸಿ ದಾಖಲೆಗಳನ್ನು ಪರಿಶೀಲಿಸಿ ವ್ಯಾಲಿಡೇಟ್‌ ಬಟನ್‌ ಕ್ಲಿಕ್‌ ಮಾಡಬೇಕು. ವಿದ್ಯುತ್‌ ಬಿಲ್‌ ಅಕೌಂಟ್‌ ನಂಬರ್‌ ಅನ್ನು ನಿಖರವಾಗಿ ನಮೂದಿಸಬೇಕು. ಬಳಿಕ ಸಬ್‌ಮಿಟ್‌ ಬಟನ್‌ ಒತ್ತಬೇಕು. ಎಲ್ಲ ಶಿಕ್ಷಕರು ಅ.10ರೊಳಗೆ ನೋಂದಣಿ ಕಾರ್ಯವನ್ನು ಪೂರ್ಣಗೊಳಿಸುವಂತೆ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next