Advertisement
ಟೆಂಡರ್‌ನಲ್ಲಿ ಹೆಚ್ಚು ಮೊತ್ತದ ಬಿಡ್ ಪಾವತಿಸಿದ್ದರೂ ಟೆಂಡರ್ ನೀಡದ ಜಿಲ್ಲಾ ಮರಳು ನಿರ್ವಹಣಾ ಸಮಿತಿ ಕ್ರಮ ಪ್ರಶ್ನಿಸಿ ಗದಗ ಜಿಲ್ಲೆ ಮುಂಡರಗಿಯ ಹೇಮಗಿರಿಶ್ ಎಂಬುವವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಬುಧವಾರ ವಿಚಾರಣೆಗೆ ಕೈಗೆತ್ತಿಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ರಾಜ್ಯಸರ್ಕಾರವನ್ನು ತೀವ್ರ ತರಾಟೆ ತೆಗೆದುಕೊಂಡಿತು. ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ನಿಯಮಗಳನ್ನು ರಾಜ್ಯ ಸರ್ಕಾರ ರೂಪಿಸುತ್ತದೆ. ಮರಳು ಮಾರಾಟಕ್ಕೆ ಅವೈಜ್ಞಾನಿಕ ನೀತಿಗಳನ್ನು ರೂಪಿಸುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯೂಸ್‌ಲೆಸ್ ಆಗಿದೆ. ಯಾವುದೇ
ನಿಯಮವನ್ನು ಸೂಕ್ತ ರೀತಿಯಲ್ಲಿ ರೂಪಿಸುವುದಿಲ್ಲ. ಇಂತಹ ಇಲಾಖೆ ಯನ್ನು ಎಂದೂ ನೋಡಿರಲಿಲ್ಲ ಎಂದು ಕಿಡಿಕಾರಿತು.