Advertisement

Udupi”ಆಹಾರ ಸಂಸ್ಕರಣ ಇಲಾಖೆ- ಕೃಷಿ ಇಲಾಖೆ ಜತೆಗೆ ಸೇರ್ಪಡೆ ಮಹತ್ವದ ಬೆಳವಣಿಗೆ’

11:42 PM Dec 10, 2023 | Team Udayavani |

ಉಡುಪಿ: ಆಹಾರ ಸಂಸ್ಕರಣ ಇಲಾಖೆ ಕೃಷಿ ಇಲಾಖೆ ಜತೆಗೆ ಸೇರ್ಪಡೆಯಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ. ರೈತರ ಆದಾಯ ದ್ವಿಗುಣವಾಗಬೇಕಾದರೆ ಎರಡು ಇಲಾಖೆಗಳು ಜತೆಯಾಗಿ ಸಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಆಹಾರ ಸಂಸ್ಕರಣ ಉದ್ಯಮಗಳು ಬೆಳೆಯಬೇಕು ಎಂಬುದು ಪ್ರಧಾನಿ ಮೋದಿಯವರ ಒತ್ತಾಸೆ. ಇದರಿಂದ ರೈತರ, ಮೀನುಗಾರರ ಬದುಕು ಹಸನಾಗುತ್ತದೆ. ರೈತರ ಆದಾಯ ದ್ವಿಗುಣ ಆಗಬೇಕಾದರೆ ಕೃಷಿ ಉತ್ಪನ್ನ ಮತ್ತು ಮೀನುಗಾರಿಕೆ ದೇಶದ ಒಳಗೆ ಉಳಿದರೆ ಉತ್ತಮ ಬೆಲೆ ಸಿಗುವುದಿಲ್ಲ. ಸಂಸ್ಕರಣೆ ಮಾಡಿ, ಗುಣಮಟ್ಟವನ್ನು ಹೆಚ್ಚಿಸಿ ತಿನ್ನುವ ಕೈಗಳಿಗೆ ಕೊಡಬೇಕು ಎಂಬುದು ಅವರ ಅಪೇಕ್ಷೆಯಾಗಿದೆ. ಹೀಗಾಗಿ ಇಲಾಖೆಗೆ ಹೆಚ್ಚಿನ ಮಹತ್ವ ವಿದೆ. ಕೇಂದ್ರ ಸರಕಾರ ಆರಂಭದಲ್ಲಿ 800 ಕೋ.ರೂ. ಹಣವನ್ನು ಮೀಸಲಿಟ್ಟಿದೆ. ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಸಹಾಯಧನ ನೀಡಲಾಗುತ್ತದೆ ಎಂದರು.

ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಸ್ಥಾಪನೆ ಮಾಡಲಾಗಿದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಫುಡ್‌ ಪಾರ್ಕ್‌ ಗಳನ್ನು ಆರಂಭ ಮಾಡಲಾಗಿದೆ. ಕೃಷಿ ಇಲಾಖೆ ಮತ್ತು ಫ‌ುಡ್‌ ಪ್ರೊಸೆಸಿಂಗ್‌ ಇಂಡಸ್ಟ್ರಿ ಒಟ್ಟಾಗಬೇಕು ಎಂಬುದಾಗಿ ನನಗೆ ಹಲವು ಬಾರಿ ಅನಿಸಿದೆ. ಅದು ಸಾಕಾರಗೊಂಡಿದೆ. ಎರಡು ತಿಂಗಳಲ್ಲಿ ಕೆಲವಾರು ಕೆಲಸ- ಚರ್ಚೆಗಳನ್ನು ನಡೆಸಬೇಕಾಗಿದೆ ಅನಂತರ ಚುನಾವಣೆ ಬರುತ್ತದೆ. ಈ ಇಲಾಖೆಯ ಬಗ್ಗೆ ನಾನು ಹೆಚ್ಚಿನ ಒತ್ತು ಕೊಡುತ್ತೇನೆ. ಎಲ್ಲೆಲ್ಲಿ ಆಹಾರ ಸಂಸ್ಕರಣೆ ಮಾಡಿ ರಫ್ತು ಮಾಡಲು ಸಾಧ್ಯ ಎಂಬ ಬಗ್ಗೆ ಚರ್ಚಿಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next