Advertisement
ನಗರದ ರಾಜಾಜಿನಗರದ ಡಾ.ಉಮಾ ಗೌತಮ್ ಕಲಿತದ್ದು ದಂತವೈದ್ಯಕೀಯ. ಆದರೆ ಆಯ್ಕೆ ಮಾಡಿಕೊಂಡಿದ್ದು ಕಾರ್ಪೋರೆಟ್ ಜಗತ್ತಿನ ಉನ್ನತ ಹಂತಗಳಲ್ಲಿರುವ ಲಿಂಗ ತಾರತಮ್ಯ ತಕ್ಕಮಟ್ಟಿಗೆ ತಗ್ಗಿಸುವ ನಿಟ್ಟಿನಲ್ಲಿ ಮಹಿಳಾ ಪಡೆ ನಿಯೋಜಿಸುವ ಮಾನವ ಸಂಪನ್ಮೂಲ ಸಮಾಲೋಚಕಿ ಹುದ್ದೆ.ಹತ್ತು ಜನ ಸಂಗಡಿಗರನ್ನು ಕಟ್ಟಿಕೊಂಡು “ಹೆಡ್‌ಪ್ರೊ ಕನ್ಸಲ್ಟಿಂಗ್’ ಹೆಸರಲ್ಲಿ ಕಾರ್ಪೋರೆಟ್ ಕಂಪನಿಗಳ ಉನ್ನತ ಹುದ್ದೆಗಳಿಗೆ ಮಹಿಳೆಯರನ್ನು ತಯಾರು ಮಾಡಿ ಕೊಡುವ ಉದ್ದಿಮೆಯನ್ನೇ ಆರಂಭಿಸಿದರು. ವಿಶ್ವದ ಅತ್ಯುನ್ನತ 500 ಕಂಪನಿಗಳ ಪೈಕಿ ಕೆಲವು ಕಂಪನಿಗಳ ಆಯಕಟ್ಟಿನ ಜಾಗಗಳಲ್ಲಿ 200ಕ್ಕೂ ಅಧಿಕ ಮಹಿಳೆಯರನ್ನು ನೀಡಿರುವುದು ಇವರ ಹೆಗ್ಗಳಿಕೆ.
ನಾವು ಇಂದು ಲಿಂಗ ಸಮಾನತೆ ಬಗ್ಗೆ ಮಾತನಾಡುತ್ತೇವೆ. ಆದರೆ, ಮೇಲಿನ ಹಂತದಲ್ಲೇ ಈ ಕೊರತೆ ಢಾಳಾಗಿದೆ. ಕಾರ್ಪೋರೆಟ್ ಕಂಪನಿಗಳ ಮಿಡಲ್ ಮ್ಯಾನೇಜ್‌ಮೆಂಟ್ ಅಥವಾ ಮ್ಯಾನೇಜ್‌ಮೆಂಟ್‌ಗಳಲ್ಲಿರುವ ಮಹಿಳೆಯರು ಅತ್ಯಲ್ಪ. ದಂತವೈದ್ಯೆಯಾಗಿದ್ದಾಗ ನನ್ನ ಹಿರಿಯ ವೈದ್ಯರೊಬ್ಬರು ಈ ಬಗ್ಗೆ ಸಲಹೆ ಮಾಡಿದ್ದರು. ಇದು ನನ್ನ ವೃತ್ತಿಜೀವನ ಬದಲಾಯಿಸಲು ಕಾರಣ.
Related Articles
ನಿಜ. ಮ್ಯಾನೇಜ್‌ಮೆಂಟ್ ಹಂತದ ಹುದ್ದೆಗಳಿಗೆ ಕನ್ಸಲ್ಟಂಟ್‌ಗಳಿರುವುದು ನಗರದಲ್ಲಿ 30-40. ಅದರಲ್ಲಿ ಮಹಿಳೆಯರಿಗೆ ಆದ್ಯತೆ ನೀಡಿ ಕನ್ಸಲ್ಟಂಟ್ ನೀಡುವುದು ಬೆರಳೆಣಿಕೆಯಷ್ಟು. ಅದರಲ್ಲಿ ನಮ್ಮದು ಮುಂಚೂಣಿಯಲ್ಲಿದೆ.
Advertisement
* ಮಹಿಳಾ ಉದ್ಯಮ ಕ್ಷೇತ್ರದಲ್ಲಿ ನಿಮ್ಮ ಕೊಡುಗೆ ಏನು?“ಫಾರ್ಚ್ಯೂನ್-500′ ಅಂದರೆ ಜಗತ್ತಿನ 500 ಟಾಪ್ ಕಂಪನಿಗಳು. ಇದರಲ್ಲಿ ಕೆಲವು ಕಂಪನಿಗಳಿಗೆ ನಾವು ತಯಾರಿಸಿದ ನೂರಕ್ಕೂ ಹೆಚ್ಚು ಮಹಿಳೆಯರು ಸಿಇಒ ಮತ್ತು ಅದಕ್ಕಿಂತ ದೊಡ್ಡ ಹುದ್ದೆಗಳಲ್ಲಿದ್ದಾರೆ. ಈ ಮೂಲಕ ಲಿಂಗ ತಾರತಮ್ಯ ಹೋಗಲಾಡಿಸುವ ನಿಟ್ಟಿನಲ್ಲಿ ನಮ್ಮ ಕೊಡುಗೆಯೂ ಇದೆ. * ಈ ಉನ್ನತ ಹುದ್ದೆಗೆ ಅರ್ಹತೆಗಳು ಏನು?
ಕನಿಷ್ಠ ಡಬಲ್ ಡಿಗ್ರಿ ಆಗಿರಬೇಕು ಮತ್ತು 15 ವರ್ಷ ಕಂಪನಿಯಲ್ಲಿ ಸೇವೆ ಸಲ್ಲಿಸಿರಬೇಕು. ವಾರ್ಷಿಕ 50 ಲಕ್ಷ ಸಂಬಳ ಪಡೆಯುತ್ತಿರಬೇಕು. * ಇಂತಹವರಿಗೆ ನಿಮ್ಮ ಅವಶ್ಯಕತೆ ಇದೆಯೇ?
ಖಂಡಿತಾ ಇದೆ. ಒಂದೇ ಕಡೆ ಒಂದೇ ದರ್ಜೆಯಲ್ಲಿ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಲೇ ಇರುವವರನ್ನು ಹುಡುಕುತ್ತೇವೆ. ಮತ್ತೂಂದೆಡೆ ಅವರಿಗೆ ಹೊಂದುವ ಕಂಪನಿಯ ಉನ್ನತ ಹುದ್ದೆಗಳನ್ನು ಪತ್ತೆಹಚ್ಚುತ್ತೇವೆ. ನಂತರ ಕಂಪನಿಯೊಂದಿಗೆ ಮಾತುಕತೆ ನಡೆಸಿ ಮನವೊಲಿಸುತ್ತೇವೆ. ಇದರಿಂದ 50 ಲಕ್ಷ ತೆಗೆದುಕೊಳ್ಳುತ್ತಿದ್ದ ಮಹಿಳೆ ಹೊಸ ಕಂಪನಿಯಲ್ಲಿ 80 ಲಕ್ಷ ತೆಗೆದುಕೊಳ್ಳುತ್ತಾಳೆ. ಜತೆಗೆ ಹುದ್ದೆಯೂ ದೊಡ್ಡದಾಗಿರುತ್ತದೆ. * ಅದು ಹೇಗೆ?
ದಿಗ್ಗಜ ಕಂಪನಿಗಳು ತಮ್ಮ ಉನ್ನತ ಹುದ್ದೆಯನ್ನು ಮಹಿಳೆಗೆ ಬಿಟ್ಟುಕೊಡುವುದು ಜಾಗತಿಕ ಮಟ್ಟದಲ್ಲಿ ಹೆಮ್ಮೆಯ ಸಂಗತಿ. ಇತ್ತೀಚೆಗೆ ಇದು ಬ್ರ್ಯಾಂಡ್ ಇಮೇಜ್ ಆಗುತ್ತದೆ. ಇದರಿಂದ ಕಂಪನಿಗಳಲ್ಲಿ ಸ್ಪರ್ಧೆಯೂ ಏರ್ಪಡುತ್ತದೆ. ಇದರಿಂದ ಮಹಿಳೆಗೆ ಅವಕಾಶಗಳು ತೆರೆದುಕೊಳ್ಳುತ್ತಿವೆ. ಆ ಅವಕಾಶಗಳಿಗೆ ಸೇತುವೆಯೇ ನಮ್ಮ ಕಂಪನಿ. * ಕಾರ್ಪೋರೆಟ್ ಜಗತ್ತಿನ ಉನ್ನತ ಹುದ್ದೆ ನಮ್ಮ ಗ್ರಾಮೀಣ ಮಹಿಳೆಗೆ ಒಲಿಯುವುದು ಯಾವಾಗ?
ಮೊದಲು ದೃಷ್ಟಿಕೋನಗಳು ಬದಲಾಗಬೇಕು. ಯಾವುದಾದರೂ ಒಂದು ಕೆಲಸ ಸಿಕ್ಕರೆ ಸಾಕು ಎಂಬ ಮನೋಭಾವವೇ ತಪ್ಪು. ಸಿಗುವ ಅವಕಾಶಗಳನ್ನು ಬಾಚಿಕೊಳ್ಳುವ ಚಾಕಚಕ್ಯತೆ ಬೆಳೆಸಿಕೊಳ್ಳಬೇಕು.ಒಂದು ಕಂಪನಿಯ ಸಿಇಒನಂತಹ ಹುದ್ದೆಗಳನ್ನು ಅಲಂಕರಿಸುವುದು ನಮ್ಮ ಗುರಿ ಆಗಬೇಕು. ಆಗ ಮಾತ್ರ ಸಾಕಾರಗೊಳ್ಳಲು ಸಾಧ್ಯ. ಈ ಹಿನ್ನೆಲೆಯಲ್ಲಿ ಹೆಡ್ ಪ್ರೊ ಕನ್ಸಲ್ಟಂಟ್ ಈಗಾಗಲೇ ಪದವೀಧರ ಮಹಿಳೆಯರಿಗೆ ಉಚಿತ ತರಬೇತಿ ನೀಡುತ್ತಿದೆ. ಮಾಹಿತಿಗೆ www.headpro.in ಮೊ: 98802 20062 ಸಂಪರ್ಕಿಸಬಹುದು. * ವಿಜಯಕುಮಾರ ಚಂದರಗಿ