Advertisement
ದಂತಕ್ಷಯ ಹೇಗೆ ಸಂಭವಿಸುತ್ತದೆ?ಹಲ್ಲುಗಳ ಜಗಿಯುವ ಮೇಲ್ಮೈ ಯಲ್ಲಿ ಸಣ್ಣ ಬಿರುಕುಗಳು ಇರುತ್ತವೆ. ಇವು ಆಳವಾಗಿ, ಕಿರಿದಾಗಿದ್ದಾಗ ಸಿಕ್ಕಿಹಾಕಿಕೊಂಡಿರುವ ಆಹಾರ ವನ್ನು ಸ್ವಚ್ಛ ಗೊಳಿಸುವುದು ಕಷ್ಟವಾಗುತ್ತದೆ. ಇದು ಕೀಟಾಣುಗಳಿಗೆ ಆಹಾರವಾಗಿ ದಂತಕ್ಷಯವಾಗುತ್ತದೆ.
ಎಂದರೇನು?
ಸೀಲೆಂಟ್‌ಗಳು ಟೂತ್‌ಬ್ರಷ್ ಮತ್ತು ಫ್ಲೋಸ್ ತಲುಪದ ಹಲ್ಲಿನ ಚಡಿಗಳಿಗೆ ರಕ್ಷಣಾತ್ಮಕ ಲೇಪನಗಳಾಗಿವೆ. ಇಂತಹ ರೆಸಿನ್ ಲೇಪನವನ್ನು ಹಲ್ಲುಗಳ ಮೇಲ್ಮೈ ಯಲ್ಲಿ ಅಂದರೆ, ಆಳವಾದ ಬಿರುಕುಗಳಲ್ಲಿ ತುಂಬುವುದರಿಂದ ಅವುಗಳಿಗೆ ತಡೆಗೋಡೆ ಒದಗಿಸುತ್ತದೆ ಹಾಗೂ ಕುಳಿಯಾಗದಂತೆ ತಡೆಯುತ್ತದೆ. ಇದನ್ನೂ ಓದಿ:ಟಿ20 ವಿಶ್ವಕಪ್ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ
Related Articles
ಹಲ್ಲುಗಳಿಗೆ ಹಚ್ಚುತ್ತಾರೆ?
ಇವುಗಳನ್ನು ಪ್ರಿಮೋಲಾರ್‌ಗಳು ಮತ್ತು ದವಡೆ ಹಲ್ಲುಗಳ ಮೇಲೆ ಹಚ್ಚುತ್ತಾರೆ. ದಂತವೈದ್ಯರು ಹಲ್ಲುಗಳ ಬಿರುಕುಗಳನ್ನು ತಪಾಸಣೆ ಮಾಡಿ ಅವು ಆಳವಾಗಿ, ಕಿರಿದಾಗಿದ್ದರೆ ಮಾತ್ರ ಸೀಲಂಟ್ ಹಚ್ಚಲು ಸಲಹೆ ನೀಡುತ್ತಾರೆ. ಆಳವಿಲ್ಲದ ಬಿರುಕುಗಳಿಗೆ ಸೀಲಂಟ್‌ಗಳ ಆವಶ್ಯಕತೆ ಇಲ್ಲ.
Advertisement
ಸೀಲೆಂಟ್‌ಗಳು ಯಾವ ವಯಸ್ಸಿನವರಿಗೆ ಬೇಕು?ಸೀಲೆಂಟ್‌ಗಳನ್ನು ಮುಖ್ಯವಾಗಿ ದಂತಕುಳಿ ಅಪಾಯವಿರುವ ಮಕ್ಕಳಲ್ಲಿ ಮತ್ತು ಶಾಶ್ವತ ಪ್ರಿಮೋಲಾರ್ ಮತ್ತು ಮೋಲಾರ್ ಹಲ್ಲುಗಳು ಬಂದ ತತ್‌ಕ್ಷಣ ತುಂಬಲಾಗುತ್ತದೆ. ಶಾಶ್ವತ ಬಾಚಿಹಲ್ಲುಗಳು ಸೀಲೆಂಟ್‌ಗಳಿಂದ ಹೆಚ್ಚು ಪ್ರಯೋಜನ ಪಡೆಯುತ್ತವೆ. ಮೊದಲ ಬಾಚಿಹಲ್ಲುಗಳು ಸಾಮಾನ್ಯವಾಗಿ 6 ವರ್ಷಗಳಲ್ಲಿ ಹಾಗೂ ಎರಡನೇ ಬಾಚಿಹಲ್ಲುಗಳು ಸುಮಾರು 12ನೇ ವಯಸ್ಸಿನಲ್ಲಿ ಬರುತ್ತವೆ. ಆಗ ಸೀಲೆಂಟ್‌ಗಳನ್ನು ಹಚ್ಚುವುದು ಉತ್ತಮ. ಕೆಲವು ಸಂದರ್ಭಗಳಲ್ಲಿ, ಹಾಲು ಹಲ್ಲುಗಳು ಆಳವಾದ ಚಡಿಗಳನ್ನು ಹೊಂದಿದ್ದಲ್ಲಿ ಅವುಗಳಿಗೆ ಹಚ್ಚುವುದು ಉತ್ತಮ. ತುಂಬುವ ವಿಧಾನವೇನು?
ಹಲ್ಲಿನ ಮೇಲ್ಭಾಗವನ್ನು ಸ್ವಚ್ಛಗೊಳಿಸಿ, ವಿಶೇಷ ದ್ರಾವಣದೊಂದಿಗೆ ಕಂಡೀಶನಿಂಗ್ ಮಾಡಲಾಗುತ್ತದೆ. ಅನಂತರ ಸೀಲೆಂಟ್ ಅನ್ನು ಲೇಪಿಸಿ ಕ್ಯೂರಿಂಗ್ ಮಾಡಲಾಗುತ್ತದೆ. ಈ ವಿಧಾನ ನೋಯುವುದೇ?
ಇಲ್ಲ, ಇದು ಸಂಪೂರ್ಣವಾಗಿ ಗಾಯ ರಹಿತವಾಗಿದ್ದು, ನೋವು ರಹಿತವಾಗಿದೆ. ಸೀಲೆಂಟ್‌ಗಳ ಲೇಪನ ಹಲ್ಲಿನ ರಚನೆಯನ್ನು ಕೊರೆಯುವುದು ಅಥವಾ ತೆಗೆಯುವುದನ್ನು ಒಳಗೊಂಡಿರುವುದಿಲ್ಲ. ಸೀಲೆಂಟ್‌ಗಳು ಶಾಶ್ವತವೇ?
ಹೌದು, ಆದರೆ ಹಲ್ಲುಗಳ ಕುಹರದ ಕತ್ತರಿಸುವಿಕೆ ಇಲ್ಲದೆ, ಹಲ್ಲಿನ ಮೇಲ್ಮೈ ಯಲ್ಲಿ ತುಂಬಿಸುವುದರಿಂದ ಸುಮಾರಾಗಿ 5ರಿಂದ 10 ವರ್ಷಗಳವರೆಗೆ ಬಾಳ್ವಿಕೆ ಬರುತ್ತದೆ. ಕ್ರಮೇಣ ಇವು ಸವೆದುಹೋಗಬಹುದು; ಅಂತಹ ಸಂದರ್ಭಗಳಲ್ಲಿ ದಂತವೈದ್ಯರು ಪುನಃ ತುಂಬಿಸಲು ಸಲಹೆ ನೀಡಬಹುದು.
ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಇವುಗಳಿಂದ ಹಲ್ಲುಗಳ ಮೇಲ್ಮೈ ನಲ್ಲಿರುವ ಬಿರುಕುಗಳಲ್ಲಿ ಆಗುವ ಕುಳಿಗಳನ್ನು ತಡೆಗಟ್ಟಬಹುದಾಗಿದೆ. ಹಾಗಾಗಿ ಎಲ್ಲರಿಗೂ ಕಾಡುವ ಹುಳುಕು ಹಲ್ಲಿನ ಸಮಸ್ಯೆಗೆ ಸೀಲಂಟ್‌ಗಳು ಒಂದು ಉತ್ತಮ ಪರಿಹಾರವಾಗಿದೆ. -ಡಾ| ಪ್ರಜ್ಞಾ ನವೀನ್
ರೀಡರ್, ಸಮುದಾಯ ದಂತ ಚಿಕಿತ್ಸಾ ವಿಭಾಗ, ಮಣಿಪಾಲ ದಂತ ವೈದ್ಯಕೀಯ ಮಹಾವಿದ್ಯಾಲಯ, ಮಾಹೆ, ಮಣಿಪಾಲ