Advertisement
ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ನಗರಗಳಲ್ಲಿ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ದೆಹಲಿಯಲ್ಲಿ ಬರೋಬ್ಬರಿ 3.5 ಗಂಟೆಗಳ ಕಾಲ ಶೂನ್ಯ ಗೋಚರತೆ ಇದ್ದ ಕಾರಣ 100ಕ್ಕೂ ಹೆಚ್ಚು ವಿಮಾನಗಳು ವಿಳಂಬಗೊಂಡವು. ಶ್ರೀನಗರಕ್ಕೆ ತೆರಳಬೇಕಿದ್ದ 10 ವಿಮಾನಗಳನ್ನು ರದ್ದು ಮಾಡಲಾಯಿತು. ಒಟ್ಟು 51 ರೈಲುಗಳ ಸಂಚಾರದಲ್ಲಿ ವ್ಯತ್ಯಾಸ ಉಂಟಾಯಿತು.ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶಗಳಲ್ಲಿ ತಾಪಮಾನ 10 ಡಿಗ್ರಿ ಸೆ.ಗಿಂತ ಕಡಿಮೆಗೆ ಕುಸಿದಿದೆ. ಪಂಜಾಬ್ನಲ್ಲಿ 7.4 ಡಿ.ಸೆ. ತಾಪಮಾನ ದಾಖಲಾಗಿತ್ತು.