Advertisement

ಡಿನೋಟಿಫಿಕೇಶನ್‌ ಹಗರಣ ಶೀಘ್ರ ಬಯಲಿಗೆ: ನಳಿನ್‌ ಕುಮಾರ್‌ ಕಟೀಲು

11:24 PM Oct 08, 2022 | Team Udayavani |

ದಾವಣಗೆರೆ: ಅರ್ಕಾವತಿ ಡಿನೋಟಿಫಿಕೇಶನ್‌ ಹಗರಣವನ್ನು ಬಿಜೆಪಿ ಸರಕಾರ ಹೊರಗೆಳೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ನಗರದಲ್ಲಿ ಶನಿವಾರ ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಈ ಹಗರಣವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮುಚ್ಚಿ ಹಾಕಿದ್ದರು. ಈಗ ನಮ್ಮ ಸರಕಾರ ಬಯಲಿಗೆಳೆಯಲಿದೆ. ಇದರಿಂದ ಸಿದ್ದರಾಮಯ್ಯ ಅವರ ಕಾಲಾವಧಿಯಲ್ಲಿನ ಹಗರಣಗಳು ಹೊರಬರಲಿವೆ ಎಂದರು.

ಕಾಂಗ್ರೆಸ್‌ನವರು ಭಾರತ್‌ ಜೋಡೋ ಯಾತ್ರೆ ಮಾಡುತ್ತಿರುವುದಕ್ಕೂ ಸರಕಾರ ಪರಿಶಿಷ್ಟ ಜಾತಿ – ಪಂಗಡಗಳಿಗೆ ಮೀಸಲಾತಿ ಹೆಚ್ಚಿಸಿರುವುದಕ್ಕೂ ಸಂಬಂಧವಿಲ್ಲ. ಸಮುದಾಯದ ಮೇಲಿನ ಕಾಳಜಿಯಿಂದ ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಎಲ್ಲವನ್ನೂ ಅಧ್ಯಯನ ಮಾಡಿಯೇ ಕ್ರಮ ಕೈಗೊಳ್ಳಲಾಗಿದೆ ಎಂದರು.

ಭಾರತ್‌ ಜೋಡೋ ಯಾತ್ರೆಯು ದೇಶವನ್ನು ಜೋಡಿಸುವ ಬದಲು ದೇಶ ವಿರೋಧಿ ಮನಸ್ಸುಗಳನ್ನು ಜೋಡಿಸು ತ್ತಿದೆ. ಪಾಕ್‌ ಪರ ಘೋಷಣೆ ಕೂಗಿದ ವರೂ ಯಾತ್ರೆಯಲ್ಲಿದ್ದಾರೆ ಎಂದರು.

ಅಸಮಾಧಾನ ಇಲ್ಲ
ಸಚಿವ ಸಂಪುಟ ವಿಸ್ತರಣೆ ಮಾಡದ ಬಗ್ಗೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ಯಾವುದೇ ಅಸಮಾಧಾನ ಇಲ್ಲ. ಖಾಲಿ ಇರುವ ಸ್ಥಾನಗಳನ್ನು ತುಂಬ ಬೇಕು ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಅವರು ನಿರಂತರವಾಗಿ ನಮ್ಮ ಜತೆಯಲ್ಲಿದ್ದು ಯಾವುದೇ ಗೊಂದಲ ಇಲ್ಲ. ಸಂಪುಟ ವಿಸ್ತರಣೆ ಮಾಡುವ ವಿಚಾರ ಸಿಎಂ ವಿವೇಚನೆಗೆ ಬಿಟ್ಟದ್ದು. ಅದರಲ್ಲಿ ಚರ್ಚೆ ಮಾಡುವುದೇನೂ ಇಲ್ಲ ಎಂದರು.

Advertisement

ಟಿಪ್ಪು ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಾಯಿಸಿರುವುದನ್ನು ಸಮರ್ಥಿಸಿಕೊಂಡ ಅವರು, ಒಡೆಯರ್‌ ಅವರು ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡಿದ ಅಭಿವೃದ್ಧಿಯ ಹರಿಕಾರರು. ಟಿಪ್ಪು ಹೆಸರು, ಹೋರಾಟ ಎಲ್ಲವೂ ಗೊಂದಲ ಹಾಗೂ ಚರ್ಚೆಯಲ್ಲಿದೆ. ಹಾಗಾಗಿ ಹೆಸರು ಬದಲಾಯಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next