Advertisement

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧು, ಶ್ರೀಕಾಂತ್‌, ಚಿರಾಗ್‌ ಮುನ್ನಡೆ

11:46 PM Oct 19, 2021 | Team Udayavani |

ಒಡೆನ್ಸೆ (ಡೆನ್ಮಾರ್ಕ್‌): ಮಂಗಳವಾರ ಆರಂಭಗೊಂಡ 850,000 ಡಾಲರ್‌ ಬಹುಮಾನದ “ಡೆನ್ಮಾರ್ಕ್‌ ಓಪನ್‌’ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಪಿ.ವಿ. ಸಿಂಧು, ಕೆ. ಶ್ರೀಕಾಂತ್‌ ಸೇರಿದಂತೆ ಭಾರತದ ಬಹುತೇಕ ಆಟಗಾರರು ಮುನ್ನಡೆ ಸಾಧಿಸಿದ್ದಾರೆ.

Advertisement

ಸಣ್ಣದೊಂದು ಬ್ರೇಕ್‌ ಬಳಿಕ ಆಡ ಲಿಳಿದ ಸ್ಟಾರ್‌ ಆಟಗಾರ್ತಿ ಪಿ.ವಿ. ಸಿಂಧು ಮೊದಲ ಸುತ್ತಿನ ಪಂದ್ಯದಲ್ಲಿ ಟರ್ಕಿಯ ನೆಸ್ಲಿಹಾನ್‌ ಯಿಗಿಟ್‌ ವಿರುದ್ಧ 21-12, 21-10 ಅಂತರದ ಸುಲಭ ಜಯ ಗಳಿಸಿದರು.

ಆಲ್‌ ಇಂಡಿಯನ್‌’ ಸ್ಪರ್ಧೆ
ಪುರುಷರ ಸಿಂಗಲ್ಸ್‌ನ “ಆಲ್‌ ಇಂಡಿಯನ್‌’ ಸ್ಪರ್ಧೆಯೊಂದರಲ್ಲಿ 2017ರ ಚಾಂಪಿಯನ್‌ ಕೆ. ಶ್ರೀಕಾಂತ್‌ 21-14, 21-11 ಅಂತರದಿಂದ ಬಿ. ಸಾಯಿ ಪ್ರಣೀತ್‌ ಆಟವನ್ನು ಕೊನೆ ಗೊಳಿಸಿದರು. ಇನ್ನೊಂದು ಸಿಂಗಲ್ಸ್‌ ನಲ್ಲಿ ಸಮೀರ್‌ ವರ್ಮ ಥಾಯ್ಲೆಂಡ್‌ನ‌ ವಿದಿಸರ್ನ್ ಅವರನ್ನು 21-17, 21-14 ಅಂತರದಿಂದ ಹಿಮ್ಮೆಟ್ಟಿಸಿದರು.

ಇದನ್ನೂ ಓದಿ:ಭವಿಷ್ಯದ ನಾಯಕರಲ್ಲಿ ಮೂವರು ಭಾರತೀಯರು

ಡಬಲ್ಸ್‌ನಲ್ಲಿ 2 ಜಯ
ಪುರುಷರ ಡಬಲ್ಸ್‌ನಲ್ಲೂ ಭಾರತಕ್ಕೆ ಎರಡು ಗೆಲುವು ಒಲಿಯಿತು. ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಜೋಡಿ ಇಂಗ್ಲೆಂಡಿನ ಕಾಲಂ ಹೆಮ್ಮಿಂಗ್‌-ಸ್ಟೀವನ್‌ ಸ್ಟಾಲ್‌ವುಡ್‌ ವಿರುದ್ಧ 23-21, 21-15 ಅಂತರದ ಜಯ ಒಲಿಸಿಕೊಂಡರು.

Advertisement

ಭರವಸೆಯ ಯುವ ಆಟಗಾರರಾದ ಎಂ.ಆರ್‌. ಅರ್ಜುನ್‌-ಧ್ರುವ ಕಪಿಲ ಇಂಗ್ಲೆಂಡಿನ ಇನ್ನೊಂದು ಜೋಡಿಯಾದ ಬೆನ್‌ ಲೇನ್‌-ಸೀನ್‌ ವೆಂಡಿ ವಿರುದ್ಧ 21-19, 21-15 ಅಂತರದ ಮೇಲುಗೈ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next