Advertisement
ಈ ಘಟನೆ ಬೆಳಕಿಗೆ ಬರುತ್ತಲೇ ಗುರುಗ್ರಾಮ ಸರಕಾರಿ ಆಸ್ಪತ್ರೆಯ ಚೀಫ್ ಮೆಡಿಕಲ್ ಆಫೀಸರ್ ಡಾ. ಬಿ ಕೆ ರಾಜೋರಾ ಅವರು ಪ್ರಕರಣಕ್ಕೆ ಸಂಬಂಧಿಸಿದ ಡಾಕ್ಟರ್ ಮತ್ತು ಸ್ಟಾಫ್ ನರ್ಸ್ ಳನ್ನು ಅಮಾನತು ಮಾಡಿದ್ದಾರೆ.
Related Articles
Advertisement
ಆಧಾರ್ ಕಾರ್ಡ್ ಫೋಟೋ ಪ್ರತಿ ಸಾಲದು; ಒರಿಜಿನಲ್ ಕಾರ್ಡ್ ಬೇಕು ಎಂದು ಹೆರಿಗೆ ವಾರ್ಡ್‌ನವರು ಹೇಳಿದಾಗ ಮುನ್ನಿಯ ಪತಿ, ಆಕೆಯ ಜವಾಬ್ದಾರಿಯನ್ನು ಅಲ್ಲೇ ಇದ್ದ ತನ್ನ ಮನೆಯವರಿಗೆ ಒಪ್ಪಿಸಿ, ತಾನು ಒರಿಜಿನಲ್ ಕಾರ್ಡ್ ತರಲು ಮನೆಗೆ ಧಾವಿಸಿದರು. ಈ ಇಡಿಯ ಪ್ರಹಸನವನ್ನು ಮನೆಯವರು ತಮ್ಮ ಮೊಬೈಲ್‌ನಲ್ಲಿ ಶೂಟ್ ಮಾಡುತ್ತಿದ್ದರೂ ಆಸ್ಪತ್ರೆ ಸಿಬಂದಿಗಳು ಕ್ಯಾರೇ ಅನ್ನಲಿಲ್ಲ.
ಇಷ್ಟಾಗುವಾಗ ತೀವ್ರ ಹೆರಿಗೆ ನೋವಿಗೊಳಗಾದ ಮುನ್ನಿ ಆಸ್ಪತ್ರೆಯ ಹೊರಗೆ ಜಗುಲಿಯಲ್ಲೇ ಮಗುವಿಗೆ ಜನ್ಮ ನೀಡಿದಳು. ಈ ಪ್ರಸವ ಪ್ರಕ್ರಿಯೆಯಲ್ಲಿ ಜಗುಲಿಯಲ್ಲಿ ರಕ್ತ ಹರಡಿಕೊಂಡಾಗಲೇ ಆಸ್ಪತ್ರೆ ಸಿಬಂದಿಗಳು ಆಕೆಯ ನೆರವಿಗೆ ಬಂದರು. ಅಂತೂ ತಾಯಿ ಮಗು ಬದುಕಿಕೊಂಡಿತು !
ಮುನ್ನಿ ಕುಟುಂಬದವರು ಈ ಘಟನೆಯನ್ನು ಪ್ರತಿಭಟಿಸಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಮುಂದೆ ಧರಣಿ ಕೂತರು. ಒತ್ತಡಕ್ಕೆ ಮಣಿದ ಅವರು ಪ್ರಕರಣಕ್ಕೆ ಸಂಬಂಧಿಸಿದ ಡಾಕ್ಟರ್ ಮತ್ತು ನರ್ಸನ್ನು ಅಮಾನತು ಮಾಡಿದರು. ಹೆಚ್ಚಿನ ತನಿಖೆ ನಡೆಯುತ್ತಿದೆ.