ಉಡುಪಿ: ಜಿಲ್ಲಾ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಪರ ಚುನಾವಣ ಪ್ರಚಾರಕ್ಕಾಗಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ಅನುಮತಿ ನಿರಾಕರಿಸಿರುವ ಬಗ್ಗೆ ಉಡುಪಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣ ಅಧಿಕಾರಿಯ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.
Advertisement
ಪಾದಯಾತ್ರೆ ಮಲ್ಪೆಯಿಂದ ಕಲ್ಸಂಕದ ವರೆಗೆ ಎಂದು ನಮೂದಿಸಲಾಗಿತ್ತು. ಆದರೆ ರಾ. ಹೆ. ಆಗಿರುವುದರಿಂದ ಅನುಮತಿ ನೀಡಲಿಲ್ಲ. ಆದರೆ ಬಿಜೆಪಿ ಕಲ್ಮಾಡಿ ಯಿಂದ ವಡಭಾಂಡೇಶ್ವರದವರೆಗೆ ಹಮ್ಮಿಕೊಂಡ ಪಾದಯಾತ್ರೆಗೆ ಅನುಮತಿ ನೀಡಿರುವ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ಡಿಸಿಯವರಲ್ಲಿ ಆಗ್ರಹಿಸ ಲಾಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್, ಕೆಪಿಸಿಸಿ ಕಾರ್ಯದರ್ಶಿಗಳಾದ ಎಂ.ಎ. ಗಫೂರ್, ಕೇಶವ ಎಂ. ಕೋಟ್ಯಾನ್, ಹರೀಶ್ ಶೆಟ್ಟಿ, ವಿಶ್ವಾಸ್ ವಿ. ಅಮೀನ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ದಿವಾಕರ ಕುಂದರ್, ಹಬೀಬ್ ಅಲಿ, ಮಹಾಬಲ ಕುಂದರ್, ಪ್ರಶಾಂತ್ ಪೂಜಾರಿ, ಗಿರೀಶ್ ಪೂಜಾರಿ, ಜನಾರ್ದನ ಭಂಡಾರ್‌ಕಾರ್, ಶೇಖರ್ ಜಿ. ಕೋಟ್ಯಾನ್, ವಸಂತ ಉಪಸ್ಥಿತರಿದ್ದರು.