Advertisement
ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಈ ವರ್ಷ ಜೂನ್ ಅಂತ್ಯಕ್ಕೆ ಜಿಲ್ಲೆಯಲ್ಲಿ 127 ಡೆಂಗ್ಯೂಹಾಗೂ 356 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದೆ.
Related Articles
Advertisement
ತಾಲೂಕುವಾರು ವಿವರ:
ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಹೆಚ್ಚಿನ ಮಲೇರಿಯಾ ಪ್ರಕರಣಗಳಿದ್ದು, 2021ರ ಜೂನ್ 30ರ ವರೆಗೆ ಮನಪಾ 10 ಡೆಂಗ್ಯೂ, 329 ಮಲೇರಿಯಾ, ಮಂಗಳೂರು ತಾ|(ಮನಪಾ ಹೊರತು) 15 ಡೆಂಗ್ಯೂ, 13 ಮಲೇರಿಯಾ, ಬಂಟ್ವಾಳ 38 ಡೆಂಗ್ಯೂ, 6 ಮಲೇರಿಯಾ, ಪುತ್ತೂರು 28 ಡೆಂಗ್ಯೂ, 2 ಮಲೇರಿಯಾ, ಬೆಳ್ತಂಗಡಿ 13 ಡೆಂಗ್ಯೂ, 6 ಮಲೇರಿಯಾ, ಸುಳ್ಯ 23 ಡೆಂಗ್ಯೂ ಹಾಗೂ ಮಲೇರಿಯಾ ಪ್ರಕರಣಗಳಿಲ್ಲ.
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಸುಳ್ಯದಲ್ಲಿ 2017ರಲ್ಲಿ 3 ಮಲೇರಿಯಾ ಪ್ರಕರಣ ಪತ್ತೆಯಾಗಿದ್ದು, 2018ರ ಬಳಿಕ ಯಾವುದೇ ಮಲೇರಿಯಾ ಪ್ರಕರಣಗಳು ದಾಖಲಾಗಿಲ್ಲ. ಸಾಮಾನ್ಯವಾಗಿ ಸುಳ್ಯದ ವ್ಯಕ್ತಿ ಮಂಗಳೂರಿಗೆ ಬಂದು ಹೋಗಿದ್ದು, ಆತನಲ್ಲಿ ಮಲೇರಿಯಾ ಪತ್ತೆಯಾಗಿದ್ದರೆ ಅದು ಮಂಗಳೂರಿನ ಲೆಕ್ಕಕ್ಕೆ ಬರುವ ಸಾಧ್ಯತೆ ಇರುತ್ತದೆ. ಹೀಗಾಗಿ ಸುಳ್ಯದಲ್ಲೇ ಹರಡುತ್ತಿರುವ ಮಲೇರಿಯಾ ಕಳೆದ 3 ವರ್ಷಗಳಿಂದ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಕಳೆದ ವರ್ಷ ಹಾಗೂ ಈ ವರ್ಷ ಜಿಲ್ಲೆಯಲ್ಲಿ ಯಾವುದೇ ಚಿಕೂನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿಲ್ಲ. 2019ರಲ್ಲಿ ಜಿಲ್ಲೆ ಯಲ್ಲಿ ಒಟ್ಟು 17 ಚಿಕುನ್‌ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಬೇರೆ ಜಿಲ್ಲೆಗಳಲ್ಲಿ ಚಿಕುನ್‌ಗುನ್ಯಾ ಪ್ರಕರಣಗಳಿದ್ದು, ಅವುಗಳು ನಮ್ಮ ಜಿಲ್ಲೆಯತ್ತ ಬರದಂತೆ ಎಚ್ಚರಿಕೆ ವಹಿಸುವುದು ಅತಿ ಅಗತ್ಯವಾಗಿದೆ.
ಆರೋಗ್ಯ ಇಲಾಖೆಯ ಸಂಘಟಿತ ಹೋರಾಟದಿಂದ ಕಳೆದ ಮೂರು ವರ್ಷಗಳಿಂದ ಮಲೇರಿಯಾ ನಿಯಂತ್ರಣದಲ್ಲಿದೆ. ಆದರೆ ಇಡೀ ರಾಜ್ಯಕ್ಕೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆ ಯಾಗುತ್ತಿರುವುದು ಬೇಸರದ ವಿಚಾರ. -ಡಾ| ನವೀನ್‌ಚಂದ್ರ, ಮಲೇರಿಯಾ ನಿಯಂತ್ರಣಾಧಿಕಾರಿ, ದ.ಕ. ಜಿಲ್ಲೆ
– ವಿಶೇಷ ವರದಿ