Advertisement
ಹುಣಸೂರು ತಾಲೂಕು ಗುರುಪುರ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿ ನಾಗೇಂದ್ರ (34) ಡೆಂಗ್ಯೂನಿಂದ ಮೃತಪಟ್ಟಿದ್ದಾರೆ. ವರ್ಷದ ಹಿಂದಷ್ಟೇ ನಾಗೇಂದ್ರ ಮದುವೆಯಾಗಿದ್ದರು. ಕಳೆದ ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ನಾಗೇಂದ್ರ ಅವರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ರಾತ್ರಿ ತೀವ್ರ ನಿಗಾ ಘಟಕಕ್ಕೆ ಅವರನ್ನು ವರ್ಗಾಯಿಸಿ ಚಿಕಿತ್ಸೆ ನೀಡಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ರಾಜ್ಯದಲ್ಲಿ ಕಳೆದ 24 ತಾಸುಗಳಲ್ಲಿ 286 ಮಂದಿಯಲ್ಲಿ ಡೆಂಗ್ಯೂ ದೃಢವಾಗಿದ್ದು, ಆ ಮೂಲಕ ಡೆಂಗ್ಯೂ ಪ್ರಕರಣಗಳ ಒಟ್ಟು ಸಂಖ್ಯೆ 6,676ಕ್ಕೆ ಏರಿದೆ. ಕಳೆದ 24 ತಾಸುಗಳಲ್ಲಿ ವರ್ಷದೊಳಗಿನ 4 ಮಕ್ಕಳು, 18 ವರ್ಷದೊಳಗಿನ 50 ಮಂದಿ ಹಾಗೂ 18 ವರ್ಷ ಮೇಲ್ಪಟ್ಟ 232 ಮಂದಿಯಲ್ಲಿ ಡೆಂಗ್ಯೂ ದೃಢವಾಗಿದೆ. ಇದುವರೆಗೆ ರಾಜ್ಯದಲ್ಲಿ ಒಂದು ವರ್ಷದೊಳಗಿನ 127 ಮಕ್ಕಳಲ್ಲಿ ಡೆಂಗ್ಯೂ ವರದಿಯಾಗಿದೆ. 697 ಸಕ್ರಿಯ ಪ್ರಕರಣ
ಬಿಬಿಎಂಪಿಯಲ್ಲಿ 123, ಧಾರವಾಡದಲ್ಲಿ 35, ದಕ್ಷಿಣ ಕನ್ನಡದಲ್ಲಿ 30, ಹಾವೇರಿಯಲ್ಲಿ 18 ಡೆಂಗ್ಯೂ ಪಾಸಿಟಿವ್ ವರದಿಯಾಗಿದೆ. ಇದುವರೆಗೆ 52,214 ಮಂದಿ ರಕ್ತದ ಮಾದರಿಗಳನ್ನು ಪರೀಕ್ಷೆ ಒಳಪಡಿಸಲಾಗಿದೆ. ಪ್ರಸ್ತುತ ರಾಜ್ಯಾದ್ಯಂತ 695 ಸಕ್ರಿಯ ಪ್ರಕರಣಗಳಿದ್ದು, 6 ಮಂದಿ ಡೆಂಗ್ಯೂನಿಂದ ಮೃತಪಟ್ಟಿದ್ದಾರೆ. ಮರಣ ಪ್ರಮಾಣ ಶೇ.0.08ರಷ್ಟಿದೆ.