Advertisement

Dengue: ಸೊಳ್ಳೆ ನಿಯಂತ್ರಣದೊಂದಿಗೆ ಈ ಆಹಾರ ಕ್ರಮಗಳನ್ನು ಪಾಲಿಸಿ

10:30 AM Jul 17, 2024 | ಕಾವ್ಯಶ್ರೀ |

ಡೆಂಗ್ಯೂ .. ಡೆಂಗ್ಯೂ.. ಡೆಂಗ್ಯೂ.. ಮಳೆಗಾಲದಲ್ಲಿ ಹೆಚ್ಚಾಗಿ ಕೇಳಿ ಬರುವ ಪದ ಡೆಂಗ್ಯೂ. ಮಳೆಗಾಲದಲ್ಲಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳಲ್ಲಿ ಇದೂ ಒಂದು. ಚಿಕನ್ ಗುನ್ಯಾ, ಝೀಕಾ ವೃರಸ್‌ ಕೂಡಾ ಮಳೆಗಾಲದಲ್ಲಿ ಸೊಳ್ಳೆಗಳಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಹರಡುತ್ತಿದೆ.

Advertisement

ರಾಜ್ಯದಲ್ಲಿ ಈಗಾಗಲೇ ಡೆಂಗ್ಯೂ ವ್ಯಾಪಕವಾಗಿ ಹರಡುತ್ತಿದ್ದು, ಆರೋಗ್ಯ ಇಲಾಖೆ ಸೊಳ್ಳೆ ನಿಯಂತ್ರಿಸಲು ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ವಹಿಸುತ್ತಿದೆ. ಅದರೊಂದಿಗೆ ನಾವು ಕೂಡ ಕೆಲ ಮುಂಜಾಗೃತ ಕ್ರಮ ವಹಿಸಬೇಕಾಗಿರುವುದು ಅಗತ್ಯವಿದೆ.

ಮಳೆಗಾಲದಲ್ಲಿ ಡೆಂಗ್ಯೂ ಹೆಚ್ಚಾಗಿ ಕಂಡು ಬರುತ್ತಿದ್ದು ಇದೊಂದು ಸಾಂಕ್ರಾಮಿಕ ರೋಗವಾಗಿದೆ. ಸೊಳ್ಳೆ ಕಡಿತದಿಂದ ಡೆಂಗ್ಯೂ ರೋಗ ಹರಡುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಡೆಂಗ್ಯೂ ಕಾಯಿಲೆಯನ್ನು ದೂರವಾಗಿಸಲು ಸೊಳ್ಳೆಗಳ ತಡೆಗೆ ಸೂಕ್ತ ಮುಂಜಾಗ್ರತಾ ಕ್ರಮ ವಹಿಸುವುದು ಎಷ್ಟು ಮುಖ್ಯವೋ ನಾವು ಸೇವಿಸುವ ಆಹಾರ ಕೂಡ ಅಷ್ಟೇ ಮುಖ್ಯ.

ಆದ್ದರಿಂದ ನಮ್ಮ ಆರೋಗ್ಯ ವೃದ್ಧಿಸಿಕೊಳ್ಳಲು ರೋಗನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳ ಸೇವನೆ ಅತೀ ಅಗತ್ಯ. ನಾವುಸೇವಿಸುವ ಆಹಾರ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಡೆಂಗ್ಯೂ ಕಾಯಿಲೆ ತಡೆಗಟ್ಟಲು ಸಹಾಯ ಮಾಡುತ್ತದೆ.

ವೈರಸ್ ವಿರುದ್ಧ ಹೋರಾಡಲು ಹಾಗೂ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದು ಬಹಳ ಮುಖ್ಯ. ಅವು ಯಾವುವು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ..

Advertisement

ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇದ್ದರೆ ಡೆಂಗ್ಯೂನ ಆರಂಭಿಕ ರೋಗ ಲಕ್ಷಣಗಳನ್ನು ಸಹ ತಡೆಯಲು ಸಾಧ್ಯವಾಗುತ್ತದೆ. ಸಿಟ್ರಸ್ ಹಣ್ಣುಗಳು, ಬೆಳ್ಳುಳ್ಳಿ, ಬಾದಾಮಿ, ಅರಿಶಿನ ಹಾಗೂ ಇತರ ಕೆಲ ಆಹಾರಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಅಂಶಗಳಿರುತ್ತವೆ. ಇವುಗಳನ್ನು ಆಹಾರದಲ್ಲಿ ಸೇರಿಸಿ ನಿಯಮಿತವಾಗಿ ಸೇವಿಸಬೇಕು.

ವಿಟಮಿನ್ ಸಿ ಹಣ್ಣುಗಳು: ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಇದು ವೈರಸ್ ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ದೇಹದಲ್ಲಿ ಬಿಳಿ ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹುಳಿ ಅಂಶವನ್ನು ಒಳಗೊಂಡ ಕಿತ್ತಳೆ, ಮೂಸುಂಬಿ, ಕಿವಿ ಹಣ್ಣು, ದಾಳಿಂಬೆ ಹಣ್ಣು, ನಿಂಬೆಹಣ್ಣು, ಅನಾನಸ್ ನಂತಹ ಸಿಟ್ರಸ್ ಹಣ್ಣುಗಳನ್ನು ಸೇವಿಸಬೇಕು.

ಮೊಸರು: ಮೊಸರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳಿಗೆ ಹೆಸರುವಾಸಿ. ಇದರ ಹೊರತಾಗಿ ಇದು ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

ಶುಂಠಿ: ಟೀ ಕುಡಿಯುವಾಗ ಅದಕ್ಕೆ ಶುಂಠಿ ಬೆರೆಸಿ ಕುಡಿದರೆ ದೇಹ ಬೆಚ್ಚಗಾಗುತ್ತದೆ. ಇದು ಒಂದು ರೀತಿಯ ವರ್ಮ್ವುಡ್ ಸಸ್ಯವಾಗಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಗಂಟಲು ನೋವು, ಉರಿಯೂತ, ವಾಕರಿಕೆ, ಡೆಂಗ್ಯೂ ಜ್ವರ ಮುಂತಾದ ರೋಗಲಕ್ಷಣಗಳಿಗೆ ಇದರಿಂದ ಚಿಕಿತ್ಸೆ ದೊರೆಯುತ್ತದೆ.

ಮೆಂತ್ಯೆ ಕಾಳು: ಹಿಂದಿನ ರಾತ್ರಿ ಮೆಂತ್ಯೆ ಕಾಳುಗಳನ್ನು ನೆನೆಸಿ ಬೆಳಗ್ಗೆ ಎದ್ದ ಕೂಡಲೆ ಅದರ ನೀರಿನ ಜೊತೆಗೆ ಮೆಂತ್ಯೆಕಾಳುಗಳನ್ನು ಸೇವಿಸುವುದು ದೇಹಕ್ಕೆ ತುಂಬಾ ಒಳ್ಳೆಯದು. ಇದು ದೇಹವನ್ನು ತಂಪಾಗಿರಿಸುವುದರ ಜೊತೆ ಡೆಂಗ್ಯೂ ಅಥವಾ ಜ್ವರದಿಂದ ನಮ್ಮನ್ನು ದೂರವಿರಿಸಲು ಸಹಾಯಕಾರಿಯಾಗಿದೆ.

ಅರಿಶಿಣ: ಅರಿಶಿಣದಲ್ಲಿ ಔಷಧೀಯ ಗುಣಗಳಿದೆ. ಇದು ಭಾರತೀಯ ಮಸಾಲೆ ಪದರ್ಥಾಗಳಲ್ಲಿ ಕಂಡುಬರುವ ಪ್ರಮುಖ ಮಸಾಲೆಯಾಗಿದೆ. ಅರಿಶಿನ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.

ಬೆಳ್ಳುಳ್ಳಿ: ಭಾರತೀಯ ಮನೆಗಳಲ್ಲಿ ಅರಿಶಿನದಂತೆಯೇ ಬೆಳ್ಳುಳ್ಳಿಗೂ ಮಹತ್ವವಿದೆ. ಬೆಳ್ಳುಳ್ಳಿ ಆಹಾರದ ರುಚಿ ಹೆಚ್ಚಿಸುವುದಷ್ಟೇ ಅಲ್ಲದೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪ್ಲೇಟ್ಲೆಟ್ ಗಳು ಕಡಿಮೆಯಾಗುವುದು ಡೆಂಗ್ಯೂವಿನ ಮುಖ್ಯ ಲಕ್ಷಣವಾಗಿದ್ದು, ಇಂತಹ ಸಮಯದಲ್ಲಿ ಸಿಟ್ರಸ್‌ ಹಣ್ಣುಗಳ ಜೊತೆ ಎಳನೀರು, ಪಪ್ಪಾಯ, ಜೊತೆಗೆ ಪಪ್ಪಾಯ ಎಲೆಗಳನ್ನು ಕುದಿಸಿ, ಅದರ ನೀರನ್ನು ಕುಡಿಯುವುದರಿಂದ ಪ್ಲೇಟ್ಲೆಟ್ಸ್ ಗಳು ಜಾಸ್ತಿಯಾಗುತ್ತಾ ಹೋಗುತ್ತದೆ. ಇಷ್ಟೇ ಅಲ್ಲದೆ ಇಂತಹ ಸಮಯದಲ್ಲಿ ಹಣ್ಣುಗಳನ್ನು ಸೇವಿಸಬೇಕು. ಈ ಸಮಯದಲ್ಲಿ ಮಾಂಸಾಹಾರವನ್ನು ಆದಷ್ಟು ತ್ಯಜಿಸಿ ತಾಜಾ ಸೊಪ್ಪು, ತರಕಾರಿಗಳನ್ನು ಹೆಚ್ಚು ಸೇವಿಸುವುದು ಉತ್ತಮ. ತರಕಾರಿಗಳಲ್ಲಿ ಟೋಮೆಟೋ, ಹೂಕೋಸು, ಬೋಕ್ರೋಲಿಗಳನ್ನು ಹೆಚ್ಚಾಗಿ ಸೇವಿಸಬಹುದು. ನೆನಸಿದ ಶೇಂಗಾ ಬೀಜ ಅಥವಾ ಇತರ ಮೊಳಕೆ ಕಾಳುಗಳ ಸೇವನೆ ದೇಹಕ್ಕೆ ಒಳ್ಳೆಯದು. ಇದು ಶಕ್ತಿಯನ್ನು ತಂದು ಕೊಡುವಲ್ಲಿ ಸಹಾಯ ಮಾಡುತ್ತದೆ.

ಅತಿಯಾದರೆ ಅಮೃತವೂ ವಿಷ ಎಂಬಂತೆ ಈ ಆಹಾರಗಳನ್ನೇ ಅತೀಯಾಗಿ ಸೇವಿಸುವ ಬದಲಾಗಿ ಇತರ ಆಹಾರಗಳೊಂದಿಗೆ ಇದನ್ನು ಸೇರಿಸಿ ಸೇವಿಸುವುದು ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next