Advertisement

ಶಂಕಿತ ಡೇಂಘಿ: ಅಧಿಕಾರಿಗಳ ಪರಿಶೀಲನೆ

10:08 AM May 11, 2019 | keerthan |

ಬೇಲೂರು: ತಾಲೂಕಿನ ಎಂ. ಹುಣಸೇಕೆರೆ ಗ್ರಾಮ ದಲ್ಲಿ ಕಳೆದ ಐದಾರು ದಿನಗಳಿಂದ ಸುಮಾರು 20ಕ್ಕೂ ಹೆಚ್ಚು ಮಂದಿ ಶಂಕಿತ ಡೆಂಘೀ ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಡೆಂಘೀ ವರದಿ ಆಗಿಲ್ಲ: ತಾಲೂಕಿನ ಹೆಬ್ಟಾಳು ಗ್ರಾಪಂ ವ್ಯಾಪ್ತಿಯ ಎಂ.ಹುಣಸೇಕೆರೆ ಗ್ರಾಮದಲ್ಲಿ ಕಳೆದ ಐದಾರು ದಿನಗಳಿಂದ ಇಬ್ಬರಿಂದ ಪ್ರಾರಂಭ ವಾದ ಜ್ವರ, ಈಗ 20ಕ್ಕೂ ಹೆಚ್ಚು ಜನರಲ್ಲಿ ಕಾಣಿಸಿ ಕೊಂಡಿದೆ. ಗ್ರಾಮಸ್ಥರಲ್ಲಿ ಹರಡಿರುವ ಜ್ವರದ ಬಗ್ಗೆ ಸ್ಥಳೀಯ ಆಶಾ ಕಾರ್ಯಕರ್ತೆ ಆರೋಗ್ಯ ಇಲಾ ಖೆಯ ಗಮನಕ್ಕೆ ತಂದರು.

ತಕ್ಷಣವೇ ಕಾರ್ಯ ಪ್ರವೃತ್ತರಾದ ಆರೋಗ್ಯ ಇಲಾಖೆ ಸಿಬ್ಬಂದಿ ಹಾಸನದ ಕೀಟ ಶಾಸ್ತ್ರಜ್ಞ ರಾಕೇಶ್‌ ಕುಲಕರ್ಣಿ ಅವರ ಜೊತೆ ಗ್ರಾಮದಲ್ಲಿ ಸರ್ವೆ ನಡೆಸಿದರು. ಈ ವೇಳೆ 20ಕ್ಕೂ ಹೆಚ್ಚು ಮಂದಿಗೆ ಜ್ವರ ಇರುವುದು ಖಾತ್ರಿಯಾಗಿ ದ್ದರಿಂದ ರೋಗಿಗಳ ರಕ್ತದ ಪರೀಕ್ಷೆ ನಡೆಸಿದರು. ಆದರೆ, ಡೆಂಘೀ ಜ್ವರದ ಬಗ್ಗೆ ಯಾವುದೇ ವರದಿಯಾಗಿಲ್ಲ.

ಗ್ರಾಮದಲ್ಲಿ ಶೇಖರಿಸಿದ್ದ ನೀರಿನ ಟ್ಯಾಂಕ್‌ಗಳನ್ನು ಖಾಲಿ ಮಾಡಿಸಿ ಗ್ರಾಮಸ್ಥರು ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಅರಿವು ಮೂಡಿಸಿದರು. ಅಲ್ಲದೇ, ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ಹೆಬ್ಟಾಳು ಗ್ರಾಪಂಗೆ ಮಾಹಿತಿ ನೀಡಿದರು.

ಸಮಸ್ಯೆಗೆ ಸ್ಪಂದಿಸಿ: ಎಂ.ಹುಣಸೇಕೆರೆ ಗ್ರಾಮದಲ್ಲಿ ಕಾಣಿಸಿಕೊಂಡ ಜ್ವರದಿಂದಾಗಿ ಜನರು ಮೈ, ಕೈ, ಕೀಲು ನೋವುಗಳನ್ನು ತಡೆಯಲಾಗದೆ ಆಸ್ಪತ್ರೆಗೆ ಅಲೆಯುತ್ತಿದ್ದಾರೆ. ಈಗಾಗಲೇ ಹಾಸನ ಹಾಗೂ ಚಿಕ್ಕಮಗಳೂರು ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಸಂಬಂಧಪಟ್ಟ ಆರೋಗ್ಯಾಧಿಕಾರಿಗಳು ಮತ್ತು ಗ್ರಾಪಂ ಅಧಿಕಾರಿಗಳು ಕೂಡಲೇ ಸಮಸ್ಯೆಗೆ ಸ್ಪಂದಿಸ ಬೇಕಿದೆ. ಅಲ್ಲದೇ, ಗ್ರಾಮದಲ್ಲಿ ಕುಡಿಯುವ ನೀರಿನ ಶುದ್ಧತೆ ಮತ್ತು ಸ್ವಚ್ಛತೆಗೆ ಗಮನಹರಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Advertisement

ಡೆಂಘೀ ಬಗ್ಗೆ ಮಾಹಿತಿ: ಎಂ.ಹುಣಸೇಕೆರೆ ಗ್ರಾಮದ ನಾಗರಾಜು ಮಾತನಾಡಿ, ಕಳೆದ 5-6 ದಿನಗಳಿಂದ ಗ್ರಾಮದಲ್ಲಿ ಜ್ವರ ಕಾಣಿಸಿಕೊಂಡಿದೆ. ಪತ್ನಿ ಶಶಿ ಅವರನ್ನು ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲು ಮಾಡಿದ್ದೇವೆ. ಅಲ್ಲಿನ ಆಸ್ಪತ್ರೆಯಲ್ಲಿ ಡೆಂಘೀ ಜ್ವರದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ನಮ್ಮ ಗ್ರಾಮದ ಗೋವಿಂದಣ್ಣ, ಪುಟ್ಟರಾಜು, ಮೂರ್ತಿ ಇನ್ನಿತರೆ ಮನೆಯವರೂ ಹಾಸನ- ಚಿಕ್ಕಮಗಳೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾ ರೆಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next