Advertisement
ಕಾಸರಗೋಡು ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಕಳೆದ ಒಂದು ತಿಂಗಳಿಂದ ವ್ಯಾಪಕವಾಗಿ ಡೆಂಗ್ಯೂ ಹರಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಒಂದು ತಿಂಗ ಳಿಂದ ಕಾಸರಗೋಡು ಜಿಲ್ಲೆಯಲ್ಲಿ 138 ಮಂದಿಗೆ ಡೆಂಗ್ಯೂ ಸೋಂಕು ಹರಡಿದ್ದು, ಯುವಕನೋರ್ವ ಸಾವಿಗೀಡಾಗಿದ್ದಾರೆ.
Related Articles
Advertisement
ಡೆಂಗ್ಯೂ ಫಿಲಿಪೈನ್ಸ್‌ನಿಂದ ಬಂತು: ಉಪ ಉಷ್ಣವಲಯ ಮತ್ತು ಉಷ್ಣ ವಲಯ ದೇಶಗಳಲ್ಲಿ ಸುಮಾರು 2.5 ಶತಕೋಟಿ ಜನಸಂಖ್ಯೆಯಲ್ಲಿ ಡೆಂಗ್ಯೂ ರೋಗದ ಅಪಾಯ ಇರುತ್ತದೆ. 1953-1954ರಲ್ಲಿ ಫಿಲಿಪೈನ್ಸ್‌ನಿಂದ ಈ ಸಾಂಕ್ರಾಮಿಕ ರೋಗವು ಭಾರತಕ್ಕೆ ಬಂದಿದೆ ಎಂದು ಹೇಳಲಾಗಿದೆ. ಭಾರತದಲ್ಲಿ ಡೆಂಗ್ಯೂ ಜ್ವರ ಅಪಾಯವನ್ನು 1970 ರಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಗುರುತಿಸಲಾಯಿತು. ಹೆಮರಾಜಿಕ್ ಜ್ವರ, ಡೆಂಗ್ಯೂ ಶಾಕ್ ಸಿಂಡ್ರೋಮ್ 1993 ರಲ್ಲಿ ಮೊದಲ ಬಾರಿಗೆ ವರದಿಯಾಯಿತು. ಈ ಡೆಂಗ್ಯೂ ವೈರಸಿನ ಸೋಂಕು ಮುಂಗಾರಿನ ಕಾಲದಲ್ಲಿ ಹೆಚ್ಚಳ ಕಂಡು ಬರುತ್ತದೆ.
ಅನುಸರಿಸಬೇಕಾದ ಚಿಕಿತ್ಸಾ ಕ್ರಮ ಎರಡು ದಿನಗಳಿಗಿಂತ ಹೆಚ್ಚಾಗಿ ಜ್ವರ ಇದ್ದರೆ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಿ ಅವರಿಂದ ಸಲಹೆ ಪಡೆದು ಚಿಕಿತ್ಸೆ ಮಾಡಬೇಕು. ಸ್ವಯಂ ಚಿಕಿತ್ಸೆ ಅಪಾಯಕಾರಿ. ಪ್ಯಾರಾಸಿಟಮೋಲ್ ಹೊರತಾಗಿ ಯಾವುದೇ ಮಾತ್ರೆಯನ್ನು ಬಳಸಬೇಡಿ. ಹೆಚ್ಚಿನ ವಿಶ್ರಾಂತಿ ಪಡೆಯಬೇಕು. ನೀರಿನ ಹೊರತು ಹಣ್ಣಿನ ರಸ, ಸೂಪ್ ತರಹದ ದ್ರವ್ಯಗಳನ್ನು ಹೆಚ್ಚಾಗಿ ಸೇವಿಸಬೇಕು. ಜ್ವರ ಹೆಚ್ಚಿದ್ದರೆ ಒದ್ದೆ ಬಟ್ಟೆಯಲ್ಲಿ ಮೈ ಒರೆಸಬೇಕು. ಸಾಂಪ್ರದಾಯಿಕ ನೋವು ನಿವಾರಕಗಳನ್ನು ಬಳಸಬಾರದು. ಹೊಟ್ಟೆ ನೋವು, ಎದೆ ನೋವು, ವಾಂತಿ, ಮೂಗು ಮತ್ತು ವಸಡಿನಿಂದ ರಕ್ತ ಸ್ರಾವ, ಕಪ್ಪಾದ ಮಲಮೂತ್ರ ವಿಸರ್ಜನೆಯ ಲಕ್ಷಣಗಳು ಕಂಡು ಬಂದಲ್ಲಿ ತುರ್ತು ಆಸ್ಪತ್ರೆಗೆ ದಾಖಲಿಸಬೇಕು.