Advertisement

Dengue fever ಬ್ಯಾಡಗಿ: ಡೆಂಗ್ಯೂಗೆ ಬಾಲಕಿ ಸಾವು

10:55 PM Sep 08, 2024 | Team Udayavani |

ಬ್ಯಾಡಗಿ: ಡೆಂಗ್ಯೂ ಜ್ವರದಿಂದ ಪಟ್ಟಣದ ಅಗಸನ ಹಳ್ಳಿಯ 6 ವರ್ಷದ ಬಾಲಕಿ ಆಸ್ಪತ್ರೆಯಲ್ಲೇ ಶನಿವಾರ ತಡರಾತ್ರಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.

Advertisement

ಮಾಲತೇಶ ಗೂರಣ್ಣನವರ ಪುತ್ರಿ ಅಪೇಕ್ಷಾಪಟ್ಟಣದ ಎಂ.ಡಿ.ಎಚ್‌. ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಒಂದು ವಾರದಿಂದ ಈಕೆಗೆ ಜ್ವರ ಕಾಣಿಸಿಕೊಂಡಿದೆ.

ಪೋಷಕರು ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಜ್ವರ ನಿಯಂತ್ರಣಕ್ಕೆ ಬರಲಿಲ್ಲ. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಧಾರವಾಡದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫ‌ಲಕಾರಿಯಾಗದೇ ಬಾಲಕಿ ಮೃತಪಟ್ಟಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next