Advertisement

‘ಮುಂದುವರಿದಿದೆ ನೋಟು ಅಮಾನ್ಯದ ಪರಿಣಾಮ’

02:11 PM Jun 12, 2017 | Karthik A |

ಹೊಸದಿಲ್ಲಿ: ಅಪಮೌಲ್ಯದ ಪರಿಣಾಮ ಭಾರತೀಯ ಆರ್ಥಿಕತೆ ಹಾಗೂ ಉದ್ಯಮದ ಮೇಲೆ ನಿಧಾನವಾಗಿ ಪರಿಣಾಮ ಬೀರುತ್ತಿದ್ದು, ಇದು ಮುಂದುವರಿಯುವ ಸಾಧ್ಯತೆ ಇದ್ದೇ ಇದೆ ಎಂದು ಸರಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ) ಹೇಳಿದೆ.

Advertisement

ಸರಕಾರ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ, ಬಳಿಕ 500 ಮತ್ತು 2000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಪರಿಚಯಿಸಿತು. ಈ ಪ್ರಕ್ರಿಯೆ ಸಹಜವಾಗಿ ಬ್ಯಾಂಕಿಂಗ್‌ ವಲಯ ಹಾಗೂ ಉದ್ಯಮ ಕ್ಷೇತ್ರಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದರಿಂದ ಆರ್ಥಿಕ ಕ್ಷೇತ್ರವೂ ಹೊರತಾಗಿಲ್ಲ. ಈ ಅನಿಶ್ಚಿತತೆ ಇನ್ನೂ ಕೆಲ ಕಾಲ ಮುಂದುವರಿಯಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರತಿಕೂಲ ಪರಿಣಾಮ ಬೀರಲಿದೆ ಎಂದಿದೆ.ಅಪಮೌಲ್ಯದ ಪರಿಣಾಮವಾಗಿ ಎಸ್‌ಬಿಐ ಖಾಸಗಿ ಷೇರು ಮಾರುಕಟ್ಟೆಯಲ್ಲಿ ತನ್ನ 15,000 ಕೋಟಿ ಷೇರುಗಳನ್ನು ಮಾರಾಟಕ್ಕಿಟ್ಟಿದೆ ಎಂದೂ ಸರಕಾರಿ ಸ್ವಾಮ್ಯದ ಬ್ಯಾಂಕ್‌ ಹೇಳಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next