ಹೊಸದಿಲ್ಲಿ: ”ನೋಟು ಅಮಾನ್ಯೀಕರಣ ಮತ್ತು ಚುನಾವಣ ಬಾಂಡ್‌ಗಳು ಬಿಜೆಪಿ ತನ್ನ ಭ್ರಷ್ಟ ಕ್ರಮಗಳನ್ನು ಹೇಗೆ ಮುಚ್ಚಿಕೊಳ್ಳುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಗಳು” ಎಂದು ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹಾ ಯಶವಂತ್ ಸಿನ್ಹಾ ಗಂಭೀರ ಆರೋಪ ಮಾಡಿದ್ದಾರೆ.
ಪಿಟಿಐ ವಿಡಿಯೋಗಳಿಗೆ ನೀಡಿದ ಸಂದರ್ಶನದಲ್ಲಿ,”ಚುನಾವಣ ಬಾಂಡ್‌ಗಳು ಒಂದು ದೊಡ್ಡ ಹಗರಣವಾಗಿದೆ ಮತ್ತು ನೋಟು ಅಮಾನ್ಯೀಕರಣವು ಕಪ್ಪು ಹಣವನ್ನು ಬಿಳಿಯಾಗಿ ಪರಿವರ್ತಿಸುವ ಮಾರ್ಗವಾಗಿದೆ. ಬಿಜೆಪಿ ಸರ್ಕಾರವು ತಮ್ಮ ಭ್ರಷ್ಟ ಕ್ರಮಗಳ ಮೇಲೆ ಗೌಪ್ಯತೆಯ ಹೊದಿಕೆಯನ್ನು ಹಾಕಿ ಜನರು ಅದರ ಬಗ್ಗೆ ಎಂದಿಗೂ ತಿಳಿದುಕೊಳ್ಳುವುದಿಲ್ಲ ಎಂದು ಭಾವಿಸುತ್ತದೆ” ಎಂದು ಆರೋಪಿಸಿದರು.
”400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಬಿಜೆಪಿಯ ಹೇಳಿಕೆಗಳನ್ನು ಸಿನ್ಹಾ ತಳ್ಳಿಹಾಕಿ ಪ್ರತಿಪಕ್ಷ I.N.D.I.A ಯ ಬಲವನ್ನು ಕಡಿಮೆ ಅಂದಾಜು ಮಾಡಲಾಗುತ್ತಿದೆ” ಎಂದರು.
86ರ ಹರೆಯದ ಸಿನ್ಹಾ ಅವರು ಈಗಾಗಲೇ ರಾಜಕೀಯದಿಂದ ನಿವೃತ್ತಿ ಹೊಂದಿದ್ದು ಹಿಂದಿರುಗಲು ಯೋಜಿಸುತ್ತಿಲ್ಲ ಎಂದು ಹೇಳಿದ್ದಾರೆ. ಅವರು ಪ್ರತಿನಿಧಿಸುತ್ತಿದ್ದ ಕ್ಷೇತ್ರ ಹಜಾರಿಬಾಗ್‌ನ ಹಲವಾರು ಜನರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ.
ಕೇಂದ್ರದ ಎನ್‌ಡಿಎ ಸರಕಾರವು ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿ 2018 ರಲ್ಲಿ ಪಕ್ಷವನ್ನು ತೊರೆದ ಬಿಜೆಪಿಯ ಮಾಜಿ ನಾಯಕ ಸಿನ್ಹಾ ಅವರು ಸರಕಾರದ ಬಗ್ಗೆ ನಿರಂತರವಾಗಿ ಟೀಕಿಸುತ್ತಲೇ ಇದ್ದಾರೆ.