Advertisement

ಬ್ಯಾಂಕ್‌ನಿಂದ ಹಣ ಹಿಂಪಡೆಯುವ ಎಲ್ಲ ಮಿತಿಗಳು ಇಂದಿನಿಂದ ರದ್ದು: RBI

04:03 PM Mar 13, 2017 | |

ಮುಂಬಯಿ : ನೋಟು ನಿಷೇಧವನ್ನು ಅನುಸರಿಸಿ ಬ್ಯಾಂಕ್‌ ಉಳಿತಾಯ ಖಾತೆಯಿಂದ ಹಣ ಹಿಂಪಡೆಯಲು ವಿಧಿಸಲಾಗಿದ್ದ ಎಲ್ಲ ಮಿತಿಗಳನ್ನು ಇಂದು ಸೋಮವಾರ ಸಂಪೂರ್ಣವಾಗಿ ತೆರವುಗೊಳಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.

Advertisement

ಎರಡು ಹಂತಗಳ ಪ್ರಕ್ರಿಯೆಯಲ್ಲಿ  ಕಳೆದ ಫೆಬ್ರವರಿ 20ರಂದು ವಾರಕ್ಕೆ 24,000 ರೂ.ಗಳಿದ್ದ  ಹಣ ಹಿಂಪಡೆಯುವಿಕೆ ಮಿತಿಯನ್ನು 50,000 ರೂ.ಗೆ ಏರಿಸಲಾಗಿತ್ತು. ಇಂದು ಮಾರ್ಚ್‌ 13ರಂದು, ಎಟಿಎಂ ನಿಂದ ಹಣ ವಿದ್‌ಡ್ರಾ ಮಾಡುವ ಎಲ್ಲ ಮಿತಿಗಳನ್ನು ತೆರವುಗೊಳಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ.

ಆರ್‌ಬಿಐ ನ ಡೆಪ್ಯುಟಿ ಗವರ್ನರ್‌ ಆರ್‌. ಗಾಂಧಿ ಅವರಿಂದು ಈ ವಿಷಯವನ್ನು ಪ್ರಕಟಿಸಿದರು. ಕಳೆದ ಫೆಬ್ರವರಿ ತಿಂಗಳಲ್ಲಿ ಆರ್‌ಬಿಐ ತನ್ನ ಹಣಕಾಸು ಪರಾಮರ್ಶೆ ನೀತಿಯಲ್ಲಿ ತನ್ನ ಬಡ್ಡಿ ದ್ರವನ್ನು ಶೇ.6.25ರಲ್ಲಿ ಯಾವುದೇ ಬದಲಾವಣೆ ಮಾಡದೆ ಹಾಗೆಯೇ ಉಳಿಸಿಕೊಂಡ ಸಂದರ್ಭದಲ್ಲಿ “ಸರಕಾರದ ನೋಟು ಅಪನಗದೀಕರಣದ ಪರಿಣಾಮಗಳ ಪೂರ್ಣ ಅಂಕಿ ಅಂಶಗಳನ್ನು ಆರ್‌ಬಿಐ ಎದುರುನೋಡುತ್ತಿದೆ. ಅದು ಸಿಕ್ಕಿದಾಕ್ಷಣ ಹಣ ಹಿಂಪಡೆಯುವ ಮಿತಿಯ ಪೂರ್ಣ ತೆರವನ್ನು ಪರಿಗಣಿಸಲಾಗುವುದು’ ಎಂದು ಹೇಳಿತ್ತು. 

ಜನವರಿ 30ರಂದು ಆರ್‌ಬಿಐ, ಕರೆಂಟ್‌ ಅಕೌಂಟ್‌, ಕ್ಯಾಶ್‌ ಕ್ರೆಡಿಟ್‌ ಅಕೌಂಟ್ಸ್‌ ಮತ್ತು ಓವರ್‌ಡ್ರಾಫ್ಟ್ ಅಕೌಂಟ್ಸ್‌ನಿಂದ ಹಣ ಹಿಂಪಡೆಯುವ ಮಿತಿಯನ್ನು ಪೂರ್ತಿಯಾಗಿ ಕೊನೆಗೊಳಿಸಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next