Advertisement

ಮಲ್ಪೆ: ಬಸ್‌ ತಂಗುದಾಣ ಕೆಡವಿದರೂ ಇನ್ನೂ ತೆರವಾಗದ ಅವಶೇಷಗಳು

02:43 PM Sep 04, 2022 | Team Udayavani |

ಮಲ್ಪೆ: ಮಲ್ಪೆ ಮುಖ್ಯರಸ್ತೆ ಹಳೆ ಪೋಸ್ಟ್‌ ಆಪೀಸಿನ ಬಳಿ ಇದ್ದ ಶಿಥಿಲಗೊಂಡು ಅಪಾಯದ ಸ್ಥಿತಿಯಲ್ಲಿದ್ದ ಬಸ್‌ ತಂಗುದಾಣವನ್ನು ತಿಂಗಳ ಹಿಂದೆ ನಗರಸಭೆ ಕೆಡವಿದರೂ ಅದರ ಕಾಂಕ್ರೀಟ್‌ ಸ್ಲ್ಯಾಬ್‌, ಪಿಲ್ಲರ್‌ಗಳನ್ನು ತೆರವುಗೊಳಿಸದೆ ಅಲ್ಲೇ ಬಿಟ್ಟು ಹೋಗಿರುವುದು ಸಾರ್ವಜನಿಕರಿಗೆ ಸಮಸ್ಯೆಯುಂಟು ಮಾಡಿದೆ.

Advertisement

ಶಿಥಿಲಗೊಂಡ ಬಸ್‌ ತಂಗುದಾಣದ ಬಗ್ಗೆ ಪತ್ರಿಕೆಯಲ್ಲಿ ಬಂದ ತತ್‌ಕ್ಷಣ ನಗರಸಭೆ ಕೆಡವಲು ಮುಂದಾಗಿತ್ತು. ಆದರೆ ಕೆಡವಿದ ಆನಂತರ ಸ್ಲ್ಯಾಬ್‌ ಹಾಗೂ ಇನ್ನಿತರ ತ್ಯಾಜ್ಯವನ್ನು ಹಾಗೆಯೇ ಬಿಟ್ಟು ಹೋಗಿದ್ದಾರೆ. ಕಾಂಕ್ರಿಟ್‌ ಒಳಗಿದ್ದ ಕಬ್ಬಿಣದ ರಾಡ್‌ಗಳು ಕಾಂಕ್ರಿಟ್‌ನೊಂದಿಗೆ ಚೆಲ್ಲಪಿಲ್ಲಿಯಾಗಿ ಹರಡಿದ್ದು ಇದರಿಂದ ಇಲ್ಲಿ ಬಸ್ಸು ಕಾಯಲು ಬಂದ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತದೆ. ಪ್ರಯಾಣಿಕರು ಬಸ್‌ ಕಾಯಲು ರಸ್ತೆಯಲ್ಲೆ ನಿಲ್ಲುವ ಪ್ರಸಂಗ ಎದುರಾಗಿದೆ. ಇದು ಅಪಘಾತಕ್ಕೂ ಅಹ್ವಾನ ನೀಡಿದಂತಾಗುತ್ತದೆ. ತತ್‌ಕ್ಷಣ ಅವಶೇಷಗಳನ್ನು ಇಲ್ಲಿಂದ ತೆರವುಗೊಳಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಇಲ್ಲಿ ತಂಗುದಾಣ ಇಲ್ಲದೆ ಶಾಲಾ ವಿದ್ಯಾರ್ಥಿಗಳು, ಮಹಿಳೆಯರು ಸೇರಿದಂತೆ ಮಳೆ ಬಸಿಲಿಗೆ ಮೈಯೊಡ್ಡಿ ರಸ್ತೆ ಬದಿ ಬಸ್‌ಗಾಗಿ ಕಾಯುವ ಸ್ಥಿತಿ ಉಂಟಾಗಿದೆ. ತತ್‌ಕ್ಷಣದಲ್ಲಿ ಸಂಬಂಧಪಟ್ಟ ಆಡಳಿತ ಇಲ್ಲಿ ತಾತ್ಕಾಲಿಕ ನೆಲೆಯಲ್ಲಿ ಬಸ್ಸು ತಂಗುದಾಣವನ್ನು ನಿರ್ಮಿಸಬೇಕು ಎಂದು ಸಮಾಜ ಸೇವಕರಾದ ಸೀrವನ್‌ ಅಮನ್ನ, ತುಕರಾಮ ಸುವರ್ಣ ಆಗ್ರಹಿಸಿದ್ದಾರೆ.

ಅವಶೇಷಗಳ ತೆರವಿಗೆ ಕ್ರಮ: ಬಸ್‌ ತಂಗುದಾಣವನ್ನು ಕೆಡವುವ ಸಂದರ್ಭದಲ್ಲೇ ಅದರ ಅವಶೇಷಗಳನ್ನು ಅಲ್ಲಿಂದ ತೆರವುಗೊಳಿಸಲು ಹೇಳಲಾಗಿತ್ತು. ಸ್ಲ್ಯಾಬ್‌ಗಳು ಅಲ್ಲಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ತತ್‌ಕ್ಷಣ ಸಂಬಂಧಪಟ್ಟವರಿಗೆ ತೆರವುಗೊಳಿಸಲು ತಿಳಿಸಲಾಗುತ್ತದೆ. –ಸುಮಿತ್ರಾ ನಾಯಕ್‌, ಅಧ್ಯಕ್ಷರು ಉಡುಪಿ ನಗರಸಭೆ

Advertisement

Udayavani is now on Telegram. Click here to join our channel and stay updated with the latest news.

Next