Advertisement
ಹೊಸದಿಲ್ಲಿಯಲ್ಲಿ ಭಾನುವಾರ ಬಿಜೆಪಿಯ ಹೊಸ ಕೇಂದ್ರ ಕಚೇರಿಯನ್ನು ಉದ್ಘಾಟಿಸಿದ ಬಳಿಕ ಪ್ರಧಾನಿ ಮೋದಿ ಆಡಿದ ಮಾತುಗಳಿವು. ಪಕ್ಷದ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಕೇಂದ್ರ ಸಚಿವರ ಸಮ್ಮುಖದಲ್ಲಿ ಬೃಹತ್ ಕಚೇರಿಯನ್ನು ಪ್ರಧಾನಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಸ್ವಾತಂತ್ರ್ಯ ಚಳವಳಿಯಲ್ಲಿ ಕಾಂಗ್ರೆಸ್‌ನೊಂದಿಗೆ ನಂಟಿದ್ದ ಅನೇಕ ನಾಯಕರು ಪಾಲ್ಗೊಂಡಿದ್ದರು. ಆದರೆ, ನಂತರ ಅವರು ತಮ್ಮ ರಾಜಕೀಯ ಪಕ್ಷ ಸ್ಥಾಪಿಸಲೋಸುಗ ಪ್ರತ್ಯೇಕವಾದರು. ಆದರೆ, ಸ್ವಾತಂತ್ರಾéನಂತರ ಬಲಿಷ್ಠವಾದ ರಾಷ್ಟ್ರೀಯ ಪಕ್ಷ ಜನ್ಮತಾಳಬೇಕಿತ್ತು. ಅದಕ್ಕಾಗಿಯೇ ಜನಸಂಘವು ಹುಟ್ಟಿತು. ನಂತರ ರಾಷ್ಟ್ರೀಯ ಹಿತಾಸಕ್ತಿಯಿಂದ ನಡೆದ ಎಲ್ಲ ಪ್ರತಿಭಟನೆಗಳಲ್ಲೂ ಜನಸಂಘ, ಬಿಜೆಪಿ ಮುಂದಾಳತ್ವ ವಹಿಸಿತ್ತು. ಇದು ಹೆಮ್ಮೆಯ ಸಂಗತಿ ಎಂದರು. ಇದೇ ವೇಳೆ, 18 ತಿಂಗಳ ಅವಧಿಯಲ್ಲಿ ಈ ಕಟ್ಟಡ ನಿರ್ಮಿಸಿದ್ದಕ್ಕೆ ಶಾ ಮತ್ತು ತಂಡವನ್ನು ಪ್ರಧಾನಿ ಶ್ಲಾ ಸಿದರು.
ಮುಂಬಯಿಯಲ್ಲಿ 1600 ಕೋಟಿ ರೂ. ವೆಚ್ಚ ದಲ್ಲಿ ನಿರ್ಮಾಣ ಮಾಡಲು ನಿರ್ಧರಿಸ ಲಾಗಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಿದ ಪ್ರಧಾನಿ ಮೋದಿ, ಈ ವರ್ಷ ವಿಮಾನ ಯಾನ ಸಂಸ್ಥೆಗಳು ಒಟ್ಟು 900 ವಿಮಾನ ಗಳ ಖರೀದಿಗೆ ಆರ್ಡರ್ ಮಾಡಿವೆ. ಸರ್ಕಾರದ ವಿಮಾನಯಾನ ನೀತಿ ಶ್ರೀಮಂತರಿಗಲ್ಲ. ಬಡವರನ್ನು ಉದ್ದೇಶಿಸಿದೆ ಎಂದಿದ್ದಾರೆ.