ಹುಬ್ಬಳ್ಳಿ: ವಿಧಾನ ಪರಿಷತ್ ನಲ್ಲಿ ನಡೆದ ಘಟನೆ ಪ್ರಜಾಪ್ರಭುತ್ವ ವ್ಯವಸ್ಥೆ ತಲೆ ತಗ್ಗಿಸುವಂಥದ್ದಾಗಿದೆ. ಈ ಬಗ್ಗೆ ಆತ್ಮವಲೋಕನ ಅವಶ್ಯವಾಗಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯ ಪಟ್ಟಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದೀಯ ವ್ಯವಸ್ಥೆಯ ಲ್ಲಿ ಇಂತಹ ಘಟನೆ ಒಪ್ಪಲಾಗದು. ಪ್ರಜಾಪ್ರಭುತ್ವಕ್ಕೆ ಶಕ್ತಿ ತುಂಬುವ ಕೆಲಸ ಎಲ್ಲರಿಂದಲೂ ಆಗಬೇಕೆಂದರು.
ಇಂತಹ ಸೂಕ್ಷ್ಮವಿಷಯಗಳ ಬಗ್ಗೆ ಗಂಭೀರ ಚಿಂತನೆ ಬೇಕಾಗಿದೆ. ದೋಷಾರೋಪಣೆ, ಆರೋಪ ಹಾಗೂ ಟೀಕೆಗಳಿಗೆ ವೇದಿಕೆ ಇದೆ. ಅದನ್ನು ಸಮರ್ಥವಾಗಿ ಅಲ್ಲಿ ಬಳಸಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ, ನಮ್ಮ ಸಂಸದೀಯ ಪರಂಪರೆಗೆ ಧಕ್ಕೆ ತರುವ ಕೆಲಸಾಗಬಾರದು ಎಂದರು.
ಇದನ್ನೂ ಓದಿ: ರೈತರನ್ನು ಸರಕಾರದ ವಿರುದ್ಧ ಎತ್ತಿ ಕಟ್ಟುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಅಶೋಕ್ ಆಕ್ರೋಶ
ಪ್ರಜಾ ಪ್ರಭುತ್ವದ ಮೌಲ್ಯಗಳು ಕುಸಿಯುತ್ತಿವೆ. ಸ್ವಯಂ ಶಿಸ್ತಿನ ಪಾಲನೆಗೆ ನಾವೆಲ್ಲ ಒಗ್ಗಿಕೊಳ್ಳಬೇಕು ಎಂದರು.
ಇದನ್ನೂ ಓದಿ: 7 ಕೋಟಿ ರೂ. ಯೋಜನೆಗೆ 24 ಕೋಟಿ ವ್ಯಯಿಸಿದ್ದರೂ ಮತ್ತೆ 34 ಕೋಟಿ ಬೇಕಾ?