– ಇದು “ಸ್ಪರ್ಶ’ ರೇಖಾ ಮಾತು. ಹೌದು, ರೇಖಾ “ಡೆಮೊ ಪೀಸ್’ ಮೂಲಕ ನಿರ್ದೇಶಕಿ ಆಗಿರೋದು ಗೊತ್ತೇ ಇದೆ. ಆ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಸಿನಿಮಾ ಕುರಿತು ಹೇಳಲೆಂದೇ ತಮ್ಮ ತಂಡದ ಜೊತೆ ಆಗಮಿಸಿದ್ದರು ರೇಖಾ. ಮೊದಲು ಮಾತು ಶುರು ಮಾಡಿದ ಅವರು ಹೇಳಿದ್ದಿಷ್ಟು.
Advertisement
“ನನ್ನ ಮೊದಲ ನಿರ್ಮಾಣದ ಚಿತ್ರವಿದು. ಕೆಲವರನ್ನು ಹೊರತುಪಡಿಸಿದರೆ, ಇಲ್ಲಿರೋದು ಹೊಸಬರು. ನಿರ್ಮಾಣಕ್ಕೆ ಬಂದಿದ್ದು ಆಕಸ್ಮಿಕ. ನಾನು ಕಥೆ ಕೇಳಿದಾಗ ಈ ಸಿನಿಮಾ ಮಾಡಬೇಕು ಎನಿಸಿತು. ಅಂದುಕೊಂಡಿದ್ದಕ್ಕಿಂತ ಬಜೆಟ್ ಹೆಚ್ಚಾಯ್ತು. ಹಾಗಾಗಿ ನಿರ್ದೇಶಕರೂ ನಿರ್ಮಾಣಕ್ಕೆ ಸಾಥ್ ಕೊಟ್ಟಿದ್ದಾರೆ. ಸಿನಿಮಾ ಗೆಲ್ಲುವ ನಂಬಿಕೆ ಇದೆ. ಈಗಾಗಲೇ ಸ್ಯಾಟ್‌ಲೆçಟ್ ಹಕ್ಕು ಮಾರಾಟವಾಗಿದೆ. ಎಲ್ಲರೂ ಕಷ್ಟಪಟ್ಟು, ಇಷ್ಟಪಟ್ಟು ಚಿತ್ರ ಮಾಡಿದ್ದೇವೆ. ಒಳ್ಳೆಯ ಸಿನಿಮಾವನ್ನು ಕನ್ನಡಿಗರು ಎಂದಿಗೂ ಕೈ ಬಿಡಲ್ಲ ಎಂಬ ವಿಶ್ವಾಸವಿದೆ’ ಎಂಬುದು ರೇಖಾ ಮಾತು.
Related Articles
Advertisement
ನಾಯಕಿ ಸೋನಾಲ್ ಮೊಂತೆರೋ ಅವರಿಗೆ ರೇಖಾ ಅವರು ಮಾಡಿದ ಒನ್ ಕಾಲ್ ಅಷ್ಟೇ ಸಾಕಾಯ್ತಂತೆ. ಕಥೆ, ಪಾತ್ರ ಏನನ್ನೂ ಕೇಳದೆ, ಸಿನಿಮಾ ಮಾಡುವುದಾಗಿ ಒಪ್ಪಿದರಂತೆ. ಅವರಿಲ್ಲಿ ತುಂಬಾ ಜೋರು ಹುಡುಗಿಯ ಪಾತ್ರ ಮಾಡಿದ್ದಾರಂತೆ.
ಇನ್ನು, ಚಕ್ರವರ್ತಿ ಚಂದ್ರಚೂಡ್ ಕೂಡ ಇಲ್ಲಿ ಖಳನಟರಾಗಿ ಕಾಣಿಸಿಕೊಂಡಿದ್ದಾರಂತೆ. “ಇದು ಯಾವುದೇ ಬಿಲ್ಡಪ್ ಇರದ ಚಿತ್ರ. ಮುಗ್ಧರೆಲ್ಲರೂ ಸೇರಿ ಪ್ರೀತಿಯಿಂದ ಮಾಡಿರುವ “ಡೆಮೊ ಪೀಸ್’ ಇದು. ರೇಖಾ ಮೇಡಮ್ ನಟಿಯಾಗಿ ಹಣ ಹಾಕಿ ಸಿನಿಮಾ ಮಾಡಿದ್ದು ಹೆಮ್ಮೆ. ನಾನಿಲ್ಲಿ ಯುವಕರನ್ನು ಹಾದಿ ತಪ್ಪಿಸುವ ಪಾತ್ರ ಮಾಡಿದರೆ, ನಾಯಕ ಭರತ್, ನನ್ನ ಹಾದಿಯನ್ನೇ ತಪ್ಪಿಸುವ ಪಾತ್ರ ಮಾಡಿದ್ದಾನೆ. ಒಳ್ಳೆಯ ತಂಡ, ಚಿತ್ರದಲ್ಲಿ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆ’ ಎಂದರು ಚಕ್ರವರ್ತಿ ಚಂದ್ರಚೂಡ್.
ಅರ್ಜುನ್ ರಾಮ್ ಸಂಗೀತವಿದ್ದು, ಮೂರು ಹಾಡುಗಳನ್ನು ಕೊಟ್ಟಿದ್ದಾರಂತೆ. ರಾಜೇಶ್ ಕೃಷ್ಣ, ಸಂಚಿತ್ ಹೆಗ್ಡೆ , ಚಂದನ್‌ಶೆಟ್ಟಿ ಹಾಡಿದ್ದು ಈಗಾಗಲೇ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎಂಬುದು ಅವರ ಮಾತು.