Advertisement

ಲಡಾಖ್‌ಗೆ ಪ್ರಾಮುಖ್ಯ ನೀಡದ್ದರಿಂದಲೇ ಡೆಮ್‌ಚಾಕ್‌ ಚೀನ ಪಾಲು: ಲಡಾಖ್‌ ಎಂಪಿ

11:43 AM Aug 20, 2019 | sudhir |

ಹೊಸದಿಲ್ಲಿ: ಕಾಂಗ್ರೆಸ್‌ ಆಡಳಿತದ ಅವಧಿಯ ರಕ್ಷಣಾ ನೀತಿಗಳಲ್ಲಿ ಲಡಾಖ್‌ಗೆ ಅಗತ್ಯ ಪ್ರಾಮುಖ್ಯ ನೀಡಿಲ್ಲ. ಇದೇ ಕಾರಣಕ್ಕೆ ಡೆಮ್‌ಚಾಕ್‌ ಅನ್ನು ಚೀನ ಅತಿಕ್ರಮಿಸಿ ಕೊಂಡಿತು ಎಂದು ಲಡಾಖ್‌ ಸಂಸದ ಜಮ್ಯಂಗ್‌ ಶೆರಿಂಗ್‌ ನಾಮ್‌ಗ್ಯಾಲ್‌ ಹೇಳಿದ್ದಾರೆ.

Advertisement

ಸಂಕೀರ್ಣ ಸನ್ನಿವೇಶದಲ್ಲಿ ಕಾಶ್ಮೀರದಲ್ಲಿ ಓಲೈಕೆ ನೀತಿಯನ್ನು ಕಾಂಗ್ರೆಸ್‌ ಅನುಸರಿಸಿತು. ಇದರಿಂದ ಲಡಾಖ್‌ಗೆ ಭಾರಿ ಹಾನಿ ಉಂಟಾ ಯಿತು. ಆಗ ಪ್ರಧಾನಿಯಾಗಿದ್ದ ಜವಾಹರಲಾಲ್‌ನೆಹರೂ ಫಾರ್ವರ್ಡ್‌ ಪಾಲಿಸಿ ರೂಪಿಸಿದ್ದರು. ಈ ನೀತಿಯ ಪ್ರಕಾರ ಚೀನದ ಕಡೆಗೆ ನಾವು ಇಂಚಿಂಚಾಗಿ ಮುಂದೆ ಸಾಗಬೇಕಿತ್ತು. ಆದರೆ ಇದರ ಅನುಷ್ಠಾನದ ವೇಳೆ ಬ್ಯಾಕ್‌ವರ್ಡ್‌ ಪಾಲಿಸಿ ಆಯಿತು. ಚೀನ ಸೇನೆಯು ನಮ್ಮ ಪ್ರದೇಶವನ್ನು ಅತಿಕ್ರಮಿಸಿತು.

ನಾವು ಇಂಚಿಂಚಾಗಿ ಹಿಂದೆ ಸರಿದೆವು ಎಂದು ಪಿಟಿಐ ಸುದ್ದಿಸಂಸ್ಥೆಗೆ ನಾಮ್‌ಗ್ಯಾಲ್‌ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಚೀನ ಸೇನೆಯು ಡೆಮ್‌ಚಾಕ್‌ನ ನಾಲೆ ಯವರೆಗೆ ಬಂದಿದ್ದರಿಂದಾಗಿಯೇ, ಅಕ್ಸಾಯ್‌ ಚಿನ್‌ ಈಗ ಸಂಪೂರ್ಣ ಚೀನದ ವ್ಯಾಪ್ತಿಯಲ್ಲಿದೆ. ಯಾಕೆಂದರೆ ಕಾಂಗ್ರೆಸ್‌ನ 55 ವರ್ಷಗಳ ಆಡಳಿತದಲ್ಲಿ ಲಡಾಖ್‌ಗೆ ಸಾಕಷ್ಟು ಪ್ರಾಮುಖ್ಯತೆ ನೀಡಿರಲಿಲ್ಲ. ಕಳೆದ ವರ್ಷ ಇದೇ ನಾಲೆಯ ಪ್ರದೇಶದಲ್ಲಿ ಭಾರತೀಯ ಸೇನೆ ನಿರ್ಮಾಣ ಕಾರ್ಯಕ್ಕೆ ಚೀನ ಸೇನೆ ಆಕ್ಷೇಪ ಎತ್ತಿತ್ತು. ಈಗ ಕೇಂದ್ರಾಡಳಿತ ಪ್ರದೇಶವಾದ ಕಾರಣ ಈ ಭಾಗ ಸೂಕ್ತ ಪ್ರಾಮುಖ್ಯ ಪಡೆಯುತ್ತದೆ. ನಗರದ ರೀತಿ ಸೌಲಭ್ಯಗಳಾದ ರಸ್ತೆ, ಸಂವಹನ, ಶಾಲೆ ಮತ್ತು ಆಸ್ಪತ್ರೆಗಳು ಲಭ್ಯವಾದಾಗ ನಮ್ಮ ಗಡಿಯೂ ಸುರಕ್ಷಿತವಾಗುತ್ತದೆ ಎಂದು ನಾಮ್‌ಗ್ಯಾಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುಪ್ರೀಂಕೋರ್ಟ್‌ಗೆ ಮತ್ತಷ್ಟು ಅರ್ಜಿ: ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದಿ ರುವುದನ್ನು ಪ್ರಶ್ನಿಸಿ ನಿವೃತ್ತ ಸೇನಾಧಿಕಾರಿಗಳು ಹಾಗೂ ಹಲವು ನಿವೃತ್ತ ಅಧಿಕಾರಿಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜಮ್ಮು ಕಾಶ್ಮೀರಕ್ಕೆ 2010-11ರ ಅವಧಿಯಲ್ಲಿ ಮಧ್ಯಸ್ಥಿಕೆದಾರರನ್ನಾಗಿ ನೇಮಿಸಿದ್ದ ತಂಡದ ಸದಸ್ಯರೂ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯದ ಶಾಸನಸಭೆಯ ಅನುಮತಿ ಇಲ್ಲದೇ ರಾಷ್ಟ್ರಪತಿ ಆದೇಶದ ಮೂಲಕ ಈ ವಿಧಿಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಇದು ಸರಿಯಲ್ಲ ಎಂದು ಅರ್ಜಿದಾರರು ದೂರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next