Advertisement
ನಿಖಿಲ್ ನಾಮಪತ್ರ ಸಲ್ಲಿಸಿರುವ ಫಾರಂ ನಂ.26ರಲ್ಲಿರುವ ನ್ಯೂನತೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಚುನಾವಣಾ ಏಜೆಂಟ್ ಮದನ್, ನಿಖಿಲ್ ಉಮೇದುವಾರಿಕೆಯಲ್ಲಿ ಫಾರಂ ನಂ.26 ನಿಯಮಬದಟಛಿವಾಗಿಲ್ಲದಕಾರಣ ನಾಮಪತ್ರ ತಿರಸ್ಕರಿಸಬೇಕು ಎಂದು ದೆಹಲಿಯ ಚುನಾವಣಾ ಆಯುಕ್ತರು, ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
ನಿಖಿಲ್ ಸಲ್ಲಿಸಿರುವ ನಾಮಪತ್ರದ ಫಾರಂ ನಂ.26 ಅಫಿಡೆವಿಟ್ ನಿಯಮಬದ್ಧ ವಾಗಿಲ್ಲ ಎಂದು ಕಂಡು ಬಂದಿದೆ. ಈ ವಿಷಯವನ್ನು ಸುಮಲತಾ ಪರ ಚುನಾವಣಾ ಏಜೆಂಟ್ ಮದನ್, ರಿಟರ್ನಿಂಗ್ ಆಫೀಸರ್ ಗಮನಕ್ಕೆ ತಂದು ಅಲ್ಲೇ ಆಕ್ಷೇಪಣೆ ಸಲ್ಲಿಸಿದ್ದಾರೆ. ಆಕ್ಷೇಪಣೆ ನಡುವೆಯೂಚುನಾವಣಾಧಿಕಾರಿಗಳು ನಿಖೀಲ್ ನಾಮಪತ್ರವನ್ನು ಸಿಂಧು ಎಂದು ಘೋಷಿಸಿದ್ದರು. ಫಾರಂ ನಂ.26ನ ಮಾದರಿಯಲ್ಲಿ 5 ಕಲಂ ಇದ್ದು, ನಿಖೀಲ್ ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ಕೇವಲ 2 ಕಲಂ ಮಾತ್ರ ಭರ್ತಿ ಮಾಡಿ, ಉಳಿದ 3 ಕಲಂನ್ನು ಖಾಲಿ ಬಿಟ್ಟಿದ್ದರು ಎಂಬುದು ಆರೋಪ. ಆದರೆ, ನಿಖಿಲ್ ಸಲ್ಲಿಸಿದ್ದ ಅಫಿಡೆವಿಟ್‌ನಲ್ಲಿದ್ದ ಕೆಲವು ನ್ಯೂನತೆ ಸರಿಪಡಿಸಲು ಅವಕಾಶ ಮಾಡಿಕೊಡಲಾಗಿತ್ತು. ನಾಮಪತ್ರ ಪರಿಶೀಲನೆ ಅವಧಿಗೂ ಮುನ್ನ ಅಫಿಡೆವಿಟ್ ಸರಿಪಡಿಸಿ ಸಲ್ಲಿಸಿರುವುದರಿಂದ ಅವರ ನಾಮಪತ್ರ ಸಿಂಧುವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್. ಮಂಜುಶ್ರೀ ಸುದ್ದಿಗಾರರಿಗೆ ತಿಳಿಸಿದರು.