Advertisement

ವಿದ್ಯುತ್‌ ಬಿಲ್‌ ಹೆಚ್ಚುವರಿ ಹಣ ಕಡಿತಕ್ಕೆ ಒತ್ತಾಯ

03:04 PM May 29, 2020 | Suhan S |

ಬ್ಯಾಡಗಿ: ಲಾಕ್‌ಡೌನ್‌ ಸಮಯದಲ್ಲಿ ಹೆಸ್ಕಾಂ ಶೇ.30 ರಿಂದ 60 ರಷ್ಟು ಹೆಚ್ಚುವರಿ ಹಣವನ್ನು ಗ್ರಾಹಕರ ಬಿಲ್‌ನಲ್ಲಿ ಅವೈಜ್ಞಾನಿಕವಾಗಿ ಸೇರ್ಪಡೆ ಮಾಡಿದ್ದನ್ನು ವಿರೋಧಿಸಿ ಭ್ರಷ್ಟಾಚಾರ ವಿರೋಧಿ ಜನ ಆಂದೋಲನದ ಕಾರ್ಯಕರ್ತರು ಸ್ಥಳೀಯ ಇಂಜಿನಿಯರ್‌ಗೆ ಮನವಿ ಸಲ್ಲಿಸುವ ಮೂಲಕ ಕೂಡಲೇ ಹೆಚ್ಚುವರಿ ಹಣ ಕಡಿತಗೊಳಿಸುವಂತೆ ಆಗ್ರಹಿಸಿದರು.

Advertisement

ರಾಜ್ಯ ಸಂಚಾಲಕ ಮಲ್ಲೇಶಪ್ಪ ಚಿಕ್ಕಣ್ಣವರ ಮಾತನಾಡಿ, ಕೋವಿಡ್ ವೈರಸ್‌ನಿಂದ ರೈತರು, ಕೂಲಿ ಕಾರ್ಮಿಕರು ಸೇರಿದಂತೆ ಬಹಳಷ್ಟು ಬಡವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಕೆಲಸವಿಲ್ಲದೇ ಖಾಲಿ ಕುಳಿತುಕೊಂಡಿದ್ದಾರೆ. ಇದರ ಬೆನ್ನಲ್ಲೇ ಹೆಸ್ಕಾಂ ಕಾರ್ಯಾಲಯ ನೀಡಿದ ವಿದ್ಯುತ್‌ ಬಿಲ್‌ ಯಾವುದೇ ಕಾರಣಕ್ಕೂ ಕಟ್ಟಲು ಸಾಧ್ಯವಿಲ್ಲ ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಎಚ್‌ .ಬಿ. ಲಿಂಗಯ್ಯ, ಸಾರ್ವಜನಿಕರಿಗೆ ಯಾವುದೇ ರೀತಿ ಹೊರೆಯಾಗದಂತೆ ಕ್ರಮ ವಹಿಸಬೇಕು, ಇಲ್ಲದಿದ್ದಲ್ಲಿ ಸಮಸ್ಯೆ ಇತ್ಯರ್ಥವಾಗುವವರೆಗೂ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಮಾದೇವಮ್ಮಕಾರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next