ದೊಡ್ಡಬಳ್ಳಾಪುರ: ಕೇಂದ್ರ ಸರ್ಕಾರದ ವಿರುದ್ಧ ರೈತ ವಿಶ್ವಾಸ ದ್ರೋಹದ ದಿನದ ಅಂಗವಾಗಿ, ರಾಜ್ಯ ಸರ್ಕಾರ ಜಾರಿ ಮಾಡಿರುವ ಕೃಷಿ ಕಾನೂನುಗಳನ್ನುರದ್ದು ಮಾಡಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತಸಂಘ ಹಾಗೂ ರಾಜ್ಯ ರೈತ ಸಂಘದ ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿಉಪ ವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಮುಖಂಡ ಆರ್.ಚಂದ್ರ ತೇಜಸ್ವಿ ಮಾತನಾಡಿದ ಅವರು, ಕೃಷಿ ಭೂಮಿ, ಕೃಷಿಉತ್ಪಾದನೆ, ಕೃಷಿ ಮಾರುಕಟ್ಟೆಯನ್ನು ಕಾರ್ಪೋರೆಟ್ ಕಂಪನಿಗಳಿಗೆ ಧಾರೆ ಎರೆದು ರೈತರಿಗೆ ಮಾರಕವಾಗುವ ಕೃಷಿ ನೀತಿ ರೂಪಿಸಿತ್ತು. ರೈತರ ಹಗಲು ರಾತ್ರಿ ನಿರಂತರ ಹೋರಾಟದ ಫಲವಾಗಿ, ಸುಮಾರು 700 ರೈತರು ಹುತಾತ್ಮರಾದ ಒಂದು ವರ್ಷದ ಬಳಿಕ ಕೇಂದ್ರ ಸರ್ಕಾರ ಕರಾಳ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿದೆ ಎಂದರು.
ಚರಿತ್ರೆ ಸೃಷ್ಟಿಸಲು ಸಾಧ್ಯ: ಡಾ.ಸ್ವಾಮಿನಾಥನ್ ವರದಿಯನ್ವಯ ಉತ್ಪಾನಾ ವೆಚ್ಚದ ಮೇಲೆ ಶೇ.50ರಷ್ಟು ಲಾಭವನ್ನು ಸೇರಿಸಿ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕನಿಷ್ಠಬೆಂಬಲ ಬೆಲೆ ಖಾತರಿ ಮಾಡುವ ಕಾನೂನು ರೂಪಿಸುವ ಕುರಿತು ಸಮಿತಿಯ ರಚನೆ, ರೈತರನೀರಾವರಿ ಪಂಪ್‌ಸೆಟ್‌ಗಳು, ಬಡವರಭಾಗ್ಯಜ್ಯೋತಿ, ಕುಟೀರ ಜ್ಯೋತಿ, ವಿದ್ಯುತ್ ಸಂಪರ್ಕಗಳಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್‌ರದ್ದತಿ, ಇತರರಿಗೆ ಸಹಾಯಧನ ರದ್ದತಿ, ವಿದ್ಯುತ್‌ಕ್ಷೇತ್ರದ ಮಾರಾಟ ದಂತಹ ಅಂಶಗಳನ್ನು ಒಳಗೊಂಡಿರುವ ವಿದ್ಯುತ್ ಮಸೂದೆ-2020, ರೈತರು ಮೇಲೆ ಹಾಕಿರುವ ಸಾವಿರಾರು ಮೊಕದ್ದಮೆಗಳ ವಾಪಸಾತಿ ಇತ್ಯಾದಿ ಬೇಡಿಕೆಗಳನ್ನು ಒಪ್ಪಿರುವುದು, ಚರಿತ್ರೆ ಸೃಷ್ಟಿಸಲು ಸಾಧ್ಯವೆಂಬುದನ್ನುಈ ಹೋರಾಟ ಮತ್ತೂಮ್ಮೆ ಸಾಬೀತು ಪಡಿಸಿದೆ ಎಂದು ತಿಳಿಸಿದರು.
ಉಳುವವನ್ನೇ ಹೊಲದೊಡೆಯ ತತ್ವಕ್ಕೆ ತಿಲಾಂಜಲಿ: ಕೇಂದ್ರ ಸರ್ಕಾರ, ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಿದ್ದ ನಂತರವೂ, ರಾಜ್ಯದಲ್ಲಿ ಜಾರಿಯಲ್ಲಿರುವಮೂರು ಕೃಷಿ ಕಾಯ್ದೆಗಳ ತಿದ್ದುಪಡಿಗಳನ್ನು ರದ್ದು ಮಾಡಲು ರಾಜ್ಯ ಸರ್ಕಾರ ಹಿಂದೆ ಮುಂದೆ ನೋಡುತ್ತಿರುವ ಸ್ಥಿತಿಯಿಂದ ರಾಜ್ಯದ ಕೃಷಿ ಕ್ಷೇತ್ರಕ್ಕೆಗಂಭೀರವಾದ ಗಂಡಾಂತರ ಬಂದಿದೆ. ಕೃಷಿಕರಲ್ಲ ದವರೂ ಸಹ ಯಾವುದೇ ಷರತ್ತಿಲ್ಲದೇ ಕೃಷಿ ಭೂಮಿಖರೀದಿ ಮಾಡಬಹುದು ಎಂಬ ಅಂಶವುಳ್ಳಕರ್ನಾಟಕ ಭೂ ಸುಧಾರಣಾ ಕಾಯ್ದೆ-1961 ಕ್ಕೆತರುವುದರ ಮೂಲಕ ‘ಉಳುವವನ್ನೇಹೊಲದೊಡೆಯ ತತ್ವಕ್ಕೆ ತಿಲಾಂಜಲಿಯನ್ನು ನೀಡಲಾಗಿದೆ ಎಂದು ಬೇಸರ ವ್ಯಕ್ತ ಪಡಿಸಿದರು.
ನಿಲ್ಲಿಸುವುದು ರೇಷನ್ ವ್ಯವಸ್ಥೆಯನ್ನು ನಾಶಪಡಿಸು ವುದು ಸರ್ಕಾರಗಳ ಉದ್ದೇಶವಾಗಿದೆ.ಆದ್ದರಿಂದ ರಾಜ್ಯದಲ್ಲಿ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿಗಳನ್ನು ರಾಜ್ಯ ಸರ್ಕಾರತಕ್ಷಣ ರದ್ದುಪಡಿಸಿ, ರೈತಾಪಿ ವರ್ಗ ಕೃಷಿಯನ್ನು ಬಲಪಡಿಸಲು ಅಗತ್ಯವಿರುವ ಕ್ರಮಗಳನ್ನುಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿರಾಜ್ಯದಲ್ಲಿ ಪ್ರಬಲ ಹೋರಾಟಗಳನ್ನು ಸಂಘಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.